Viral Video: ಶೂಟಿಂಗ್ ವೇಳೆ ಆಕಸ್ಮಿಕವಾಗಿ ಮೂಗುತಿ ನುಂಗಿದ ನಟಿ, ಮುಂದೇನಾಯ್ತು? ವಿಡಿಯೋ ನೋಡಿ

Published : Aug 10, 2026, 01:40 PM IST
shehnaaz gill

ಸಾರಾಂಶ

ಪಂಜಾಬಿ ನಟಿ ಶೆಹ್ನಾಜ್ ಗಿಲ್ ಅವರು 'ಇಷ್ಕ್‌ನಾಮಾ' ಸಿನಿಮಾ ಶೂಟಿಂಗ್ ವೇಳೆ ಆಕಸ್ಮಿಕವಾಗಿ ಮೂಗುತಿ ನುಂಗಿದ್ದಾರೆ. ಓಡುತ್ತಿದ್ದಾಗ ಮೂಗಿನಿಂದ ಬಾಯಿಗೆ ಬಿದ್ದ ಮೂಗುತಿಯನ್ನು ನುಂಗಿದಾಗ, ಸಹನಟ ಸೌರಭ್ ಸಚ್ದೇವ್ ಸಹಾಯಕ್ಕೆ ಬಂದಿದ್ದಾರೆ. ಈ ಘಟನೆಯ ವಿಡಿಯೋವನ್ನು ನಟಿ ಹಂಚಿಕೊಂಡಿದ್ದು, ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಶೂಟಿಂಗ್ ಕೇವಲ ಕ್ಯಾಮೆರಾ, ಲೈಟ್ಸ್, ಡೈಲಾಗ್‌ಗೆ ಮಾತ್ರ ಸೀಮಿತ ಆಗಿರುವುದಿಲ್ಲ. ಇಲ್ಲಿ ಅದೆಷ್ಟೋ ಅನಿರೀಕ್ಷಿತ ಘಟನೆಗಳು, ಅಪಾಯಗಳು ಎದುರಾಗುತ್ತದೆ. ಕೆಲವು ಘಟನೆಗಳು ಕಾಮಿಡಿಯಾಗಿದ್ದರೆ, ಕೆಲವು ಕಲಾವಿದರು ಹಾಗೂ ತಂತ್ರಜ್ಞಾರ ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತದೆ. ಆ ಕ್ಷಣ ಅದು ಅಪಾಯ ಅನಿಸಿದರೂ, ಆ ಬಳಿಕ ಕೆಲವು ಘಟನೆಗಳು ಫನ್ನಿಯಾಗಿ ಕಾಣುತ್ತದೆ. ಇಂಹತದ್ದೇ ಒಂದು ಅನುಭವವನ್ನು ಪಂಜಾಬಿ ನಟಿ ಶೆಹ್ನಾಜ್ ಗಿಲ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ನಟಿಯ ನೆರವಿಗೆ ಬಂದ ಸಹನಟ!

ಶೂಟಿಂಗ್ ಸಮಯದಲ್ಲಿ ಶೆಹ್ನಾಜ್ ಗಿಲ್ ಅವರು ಧರಿಸಿದ್ದ ಮೂಗುತಿ ಆಕಸ್ಮಿಕರವಾಗಿ ಬಾಯಿಗೆ ಬೀಳುತ್ತದೆ. ಈ ಸಂದರ್ಭದಲ್ಲಿ ಅವರು ಓಡುತ್ತಿದ್ದ ಕಾರಣ ಅದನ್ನು ಅವರು ನುಂಗುತ್ತಾರೆ. ಕೂಡಲೇ ಅವರು ಕೆಮ್ಮಿ ಮೂಗುತಿಯನ್ನು ಉಗುಳುವ ಪ್ರಯತ್ನ ಮಾಡ್ತಾರೆ. ಈ ವೇಳೆ ಆಕೆಯ ಜೊತೆ ನಟಿಸುತ್ತಿದ್ದ ನಟ ಸೌರಭ್ ಸಚ್ದೇವ್ ನಟಿಯ ಸಹಾಯಕ್ಕೆ ಬಂದು, ಬೆನ್ನು ತಟ್ಟಿ ನೆರವು ನೀಡ್ತಾರೆ.

ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ನಟಿ ಶೆಹ್ನಾಜ್ ಗಿಲ್, ಹಲವರು ಮೂಗುತಿ ಧರಿಸುವ ಕ್ಷಣದ ಮಾಹಿತಿ ಹಂಚಿಕೊಳ್ಳಲು ಕೇಳುತ್ತಿದ್ದೀರಿ. ಅಂತಹ ಒಂದು ಘಟನೆ ಇಲ್ಲಿದೆ ನೋಡಿ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿದ ಹಲವರು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. 'ಶೆಹ್ನಾಜ್, ನಿಮಮ್ ಬಗ್ಗೆ ಕಳಜಿ ವಹಿಸಿ, ದೇವರಿಗೆ ಧನ್ಯವಾದ. ಏಕೆಂದರೆ ನೀವು ಆರೋಗ್ಯವಾಗಿದ್ದಿರಿ'. 'ನೀವು ಸೂಪರ್ ಸ್ಟ್ರಾಂಗ್ ಆದರೆ ಜಾಗರೂಕರಾಗಿರಿ'. 'ಕೆಲಸ ಬಗ್ಗೆ ನಿಮಗೆ ಇರುವ ಕಾಳಜಿ ಅರ್ಥವಾಗುತ್ತದೆ, ಆದರೆ ಎಚ್ಚರಿಕೆವಹಿಸಿ' ಎಂದು ಹಲವು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಇಷ್ಕ್‌ನಾಮಾ ಸಿನಿಮಾ ಸೆಟ್‌ನಲ್ಲಿ ಘಟನೆ ನಡೆದಿದೆ. ಅರವಿಂದರ್ ಖೈರಾ ನಿರ್ದೇಶನದ ಈ ಪಂಜಾಬಿ ಸಿನಿಮಾ, ಪ್ರೀತಿಯ ಕಥೆಯನ್ನು ಪ್ರೇಕ್ಷಕರಿಗೆ ಮುಂದಿಟ್ಟಿದೆ. ಪಂಜಾಬ್ ಸಿಖ್ ವಿದ್ಯಾರ್ಥಿಯೋರ್ವ ಪಾಕಿಸ್ತಾನದ ಮುಸ್ಲಿಂ ಯುವತಿಯನ್ನು ಪ್ರೀತಿಸುವ ಕಥೆಯಲ್ಲಿ, ಶೆಹ್ನಾಜ್ ಗಿಲ್ ಮತ್ತು ಜಯ್ ರಾಂಧವಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು, ನಟಿ ಶೆಹ್ನಾಜ್ ಗಿಲ್, ಸಿಂಗ್ ವಸರ್ಸ್ ಕೌರ್ 2 ಸಿನಿಮಾದಲ್ಲಿ ಸದ್ಯ ಬ್ಯುಸಿಯಾಗಿದ್ದು, ರೊಮ್ಯಾಟಿಂಕ್ ಕಾಮಿಡಿ ಸಿನಿಮಾದ ಸಿಕ್ವೆಲ್ ಆಗಿದೆ. 2013ರಲ್ಲಿ ಸಿಮಗ್ ವಸರ್ಸ್ ಕೌರ್ ಸಿನಿಮಾ ಬಿಡುಗಡೆಯಾಗಿ ಬಿಗ್ ಹಿಟ್ ಆಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಯಾವ ಸಿನಿಮಾ, ಹೀರೋ ಯಾರು? ನೋಡಿ..
ಸಂಸತ್ತಿಗೆ ಬಂದ ಸಂಸದೆ ಕಂಗನಾ ರಣಾವತ್​ ಬ್ಯಾಗ್​, ವಾಚ್​ ಮೇಲೆ ಬಿತ್ತು ನೆಟ್ಟಿಗರ ಕಣ್ಣು: ಅಂಥದ್ದೇನಿದೆ ಅದರಲ್ಲಿ