
ಬೆಂಗಳೂರು (ನ.13) ನಟ ವಿಷ್ಣುವರ್ಧನ್ ತೆರೆ ಮೇಲೆ ಹೀರೋ ಮಾತ್ರವಲ್ಲ, ತೆರೆ ಹಿಂದೆಯೂ ಹೀರೋ. ವಿಷ್ಣುವರ್ಧನ್ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಲಾವಿದ. ಇದೇ ಕಾರಣಕ್ಕೆ ವಿಷ್ಣು ದಾದಾ ಕ್ರೇಜ್ ಈಗಲೂ ಕರ್ನಾಟಕದೆಲ್ಲೆಡೆ ಇದೆ. ವಿಷ್ಣು ಅಭಿಮಾನಿ ಬಳಗ ಈಗಲೂ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿದೆ. ವಿಷ್ಣುವರ್ಧನ್ ಭಾರತಿ ದಂಪತಿಗೆ ದತ್ತು ಮಗಳು ಕೀರ್ತಿ ಕುರಿತ ಹಲವು ಮಾತುಗಳಿಗೆ ಸ್ವತಃ ಕೀರ್ತಿ ವಿಷ್ಣುವರ್ಧನ್ ಸ್ಪಷ್ಟನೆ ನೀಡಿದ್ದಾರೆ. ಪ್ರಮುಖವಾಗಿ ಕೀರ್ತಿಯನ್ನು ನಟ ವಿಷ್ಣುವರ್ಧನ್ ಹಾಗೂ ಭಾರತಿ ಯಾರಿಂದ ದತ್ತು ಪಡೆದರು ಅನ್ನೋ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ.
ಕೀರ್ತಿ ವಿಷ್ಣುವರ್ಧನ್ ಹುಟ್ಟಿದ ಬೆನ್ನಲ್ಲೇ ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ದತ್ತು ಪಡೆದಿದ್ದಾರೆ. ವಿಶೇಷ ಅಂದರೆ ಕುಟುಂಬದ ಆಪ್ತರಿಂದಲೇ ಹೆಣ್ಣು ಮಗುವನ್ನು ವಿಷ್ಣುವರ್ಧನ್ ಭಾರತಿ ದಂಪತಿ ದತ್ತು ಪಡೆದಿದ್ದಾರೆ. ಭಾರತಿ ವಿಷ್ಣು ವರ್ಧನ್ ಸಹೋದರಿ ಮಗಳನ್ನೇ ವಿಷ್ಣು ದಂಪತಿ ದತ್ತು ಪಡೆದಿದ್ದಾರೆ.
ಹೌದು, ದತ್ತು ಪುತ್ರಿ ತಾಯಿ, ಹಾಗೂ ಭಾರತಿ ವಿಷ್ಣುವರ್ಧನ್ ಅಕ್ಕ ತಂಗಿ. ಭಾರತಿ ವಿಷ್ಣುವರ್ಧನ್ ಅವರು ತಮ್ಮ ಸಹೋದರಿ ಮಗಳನ್ನೇ ದತ್ತು ಪಡೆದುಕೊಂಡಿರುವುದು. ಈ ಕುರಿತು ರೋಚಕ ಮಾಹಿತಿಯನ್ನು ಕೀರ್ತಿ ವಿಷ್ಣುವರ್ಧನ್ ಬಿಚ್ಚಿಟ್ಟಿದ್ದಾರೆ. ಭಾರತಿ ವಿಷ್ಣುವರ್ಧನ್ ಹಾಗೂ ಜಯಶ್ರಿ ಇಬ್ಬರು ಅಕ್ಕ ತಂಗಿ. ಜಯಶ್ರಿ ಮದುವೆಯಾಗುವಾಗಲೇ ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಮಾತು ತೆಗೆದುಕೊಂಡಿದ್ದರು. ನಿಮಗೆ (ಜಯಶ್ರಿ) ಹುಟ್ಟುವ ಮೊದಲ ಮಗು ನಮಗೆ ಕೊಡಬೇಕು ಎಂದು ಮಾತು ತೆಗೆದುಕೊಂಡಿದ್ದರು. ಭಾರತಿ ವಿಷ್ಣುವರ್ಧನ್ ಹಾಗೂ ಜಯಶ್ರಿ ಅವರ ಕುಟುಂಬ ಅತ್ಯಾಪ್ತರು. ಇದೇ ಆತ್ಮೀಯತೆಯಲ್ಲಿ ಜಯಶ್ರಿ ಅವರಿಂದ ಮೊದಲ ಮಗುವನ್ನು ದತ್ತು ಪಡೆಯಲಾಗಿತ್ತು.
ಕೀರ್ತಿ ಹುಟ್ಟಿದ ತಕ್ಷಣವೇ ವಿಷ್ಣುವರ್ಧನ್ ಹಾಗೂ ಭಾರತಿ ನೇರವಾಗಿ ಚಿಕ್ಕಮ್ಮ ಜಯಶ್ರಿ ಬಳಿ ಬಂದು ಮಾತಿನಂತೆ ನಿಮ್ಮ ಮೊದಲ ಮಗುವನ್ನು ದತ್ತು ಪಡೆದುಕೊಂಡರು. ವಿಷ್ಣುವರ್ಧನ್ ಹಾಗೂ ಭಾರತಿ ಮದುವೆಯಲ್ಲಿ ನಾನು (ಕೀರ್ತಿ ) ಇದ್ದೇನೆ. ವಿಷ್ಣುವರ್ಧನ್ ತೊಡೆ ಮೇಲೆ ನಾನು ಕುಳಿತಿರುವ ಫೋಟೋ ಇದೆ ಎಂದು ದತ್ತು ಪುತ್ರಿ ಕೀರ್ತಿ ವಿಷ್ಣುವರ್ಧನ್ ಹೇಳಿದ್ದಾರೆ.
ಹುಟ್ಟಿದ ಕೆಲ ದಿನಗಳಲ್ಲೇ ವಿಷ್ಣವರ್ಧನ್ ನನ್ನನ್ನು ದತ್ತು ಪಡೆದುಕೊಂಡಿದ್ದಾರೆ. ಆದರೆ ವಿಷ್ಣವುರ್ಧನ್ ಹಾಗೂ ಭಾರತಿ ಆ ಸಮಯದಲ್ಲಿ ಸಿನಿಮಾದಲ್ಲಿ ಬ್ಯೂಸಿಯಾಗಿದ್ದರು. ಹೀಗಾಗಿ ಅಜ್ಜಿ ಜೊತೆಯಲ್ಲೇ ನಾನು ಬೆಳೆದೆ. ಹೆಚ್ಚಿನ ಸಮಯ ಅಜ್ಜಿ ಬಳಿಯಲ್ಲಿ ನಾನಿದ್ದೆ ಎಂದು ಕೀರ್ತಿ ವಷ್ಣುವರ್ಧನ್ ಹೇಳಿದ್ದಾರೆ. ಅಜ್ಜಿ ಬಳಿ ವಿಷ್ಣುವರ್ಧನ್ ಹಾಗೂ ಭಾರತಿ ಬರುತ್ತಿದ್ದರು. ನನ್ನ ಜೊತೆ ಇರುತ್ತಿದ್ದರು. ಆದರೆ ಹನ್ನೆರಡು, ಹದಿಮೂರ ವರ್ಷದವಳಿದ್ದಾಗ ನಾನು ತಂದೆ-ತಾಯಿ (ವಿಷ್ಣುವರ್ಧನ್-ಭಾರತಿ) ಮನೆಗೆ ಬಂದೆ ಎಂದು ಕೀರ್ತಿ ವಿಷ್ಣುವರ್ಧನ್ ಹೇಳಿದ್ದಾರೆ.
ನಾನು ತಂದೆ ಹಾಗೂ ತಾಯಿ ಜೊತೆ (ವಿಷ್ಣುವರ್ಧನ್-ಭಾರತಿ) ಇರಲು ಆರಂಭಿಸಿದಾಗ ನನ್ನ ಕೂರಿಸಿಕೊಂಡು ಒಂದು ಮಾತು ಹೇಳಿದ್ದರು. ಸಮಾಜದಲ್ಲಿನ ಹಲವರು ಹಲವು ಮಾತುಗಳನ್ನು ಆಡುತ್ತಾರೆ. ಪ್ರಮುಖವಾಗಿ ದತ್ತು ಮಗಳು, ನಿನ್ನ ತಂದೆ ತಾಯಿ ಬೇರೆ ಅನ್ನೋ ಹಲವು ಮಾತುಗಳು ಬರುತ್ತೆ. ಯಾರೇ ಏನೇ ಹೇಳಿದರೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನೀನು (ಕೀರ್ತಿ) ನನ್ನ ದತ್ತು ಪುತ್ರಿ. ನನ್ನ ಜೀವನದಲ್ಲಿ ನೀನೇ ನನ್ನ ಮಗಳು. ಇದರ ನಡುವೆ ಯಾರ ಮಾತಿಗೂ ಕಿವಿಗೊಡಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.