ಅಭಿನಯ ಚಕ್ರವರ್ತಿ ತುಮಕೂರು ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಪುನೀತ್ ಆರ್ಯ ರಸ್ತೆ ಆಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪಟ ಅಭಿಮಾನಿಗೆ ಸುದೀಪ್ ಸಂತಾಪ ಸೂಚಿಸಿದ್ದಾರೆ.
ಕಿಚ್ಚ ಸುದೀಪ್ ಪ್ರಾಣಕ್ಕೆ ಪ್ರಾಣ ಕೊಡುವಷ್ಟು ದೊಡ್ಡ ಮನಸ್ಸಿನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರನ್ನು ಕುಟುಂಬದವರಂತೆ ಕಾಣುತ್ತಾ ಪ್ರೀತಿ ಹಂಚಿ ಸಹಾಯ ಮಾಡುವ ವಿಶಾಲ ಹೃದಯವುಳ್ಳ ಕಿಚ್ಚ ಒಬ್ಬರನ್ನು ಕಳೆದುಕೊಂಡರೂ ಬೇಸರಪಟ್ಟುತ್ತಾರೆ.
ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುದೀಪ್ ಪತ್ನಿ ಪ್ರಿಯಾ
ತುಮಕೂರಿನ ಸುದೀಪ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಪುನೀತ್ ಆರ್ಯ ಎಂಬಾತ ಬೈಕ್ ರೈಡ್ ಮಾಡುವಾಗ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ನಿಧನರಾಗಿದ್ದಾರೆ. ಇದಕ್ಕೆ ಕಿಚ್ಚ ಟ್ಟಿಟರ್ ಖಾತೆಯಲ್ಲಿ ' very Disheartening ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಕಳೆದುಕೊಂಡಿರುವುದು ಸಹಿಸಲಾಗದು. ಪುನೀತ್ ನನ್ನ ಫ್ಯಾನ್ ಮಾತ್ರವಲ್ಲದೇ ತಮ್ಮನಂತಿದ್ದ. ಅವನನ್ನು ಕಳೆದುಕೊಂಡಿರುವುದು ತುಂಬಾ ಬೇಸರವಾಗಿದೆ. ಮಿಸ್ ಯೂ ಬ್ರದರ್. #RIPPuneethArya' ಎಂದು ಸಂತಾಪ ಸೂಚಿಸಿದ್ದಾರೆ.
Very disheartening n unable to accept tat this Wondeful soul is no more..
He's been a fan n a brother to me for years. Very very sad.
He Wil be missed. pic.twitter.com/KgddIQiUPN