
‘ನಮ್ ಕಡೆಗೂ ಸ್ವಲ್ಪ ನೋಡಿ ಸ್ವಾಮಿ, ಬರೀ ಚುನಾವಣೆ ಅಂತ ನೀವು ಟೈಮ್ ಕೊಟ್ಟರೆ, ಒಳ್ಳೆಯ ಸಿನಿಮಾಗಳ ಕತೆ ಏನಾಗ್ಬೇಕು ಹೇಳಿ....? ಅಂತ ಕೊಂಚ ಖಡಕ್ ಆಗಿಯೇ ಮಾಧ್ಯಮದವರನ್ನು ಪ್ರಶ್ನಿಸುತ್ತಾ, ‘ಕವಚ ’ಚಿತ್ರದ ಸಕ್ಸಸ್‌ಫುಲ್ ಜರ್ನಿ ಕುರಿತು ಮಾತನಾಡಿದರು.
‘ಈಗ ಒಳ್ಳೆಯ ಸಿನಿಮಾಗಳು ಬರುವುದೇ ಅಪರೂಪ. ಬಂದಾಗ ಅದಕ್ಕೆ ಸಪೋರ್ಟ್ ಮಾಡೋದು ಎಲ್ಲರ ಜವಾಬ್ದಾರಿ. ಬರೀ ಮಾಧ್ಯಮದವರು ಮಾತ್ರವಲ್ಲ, ಎಲ್ಲರೂ ಬೆಂಬಲ ನೀಡಬೇಕು. ಆಗ ಮಾತ್ರ ಒಳ್ಳೆಯ ಸಿನಿಮಾಗಳು ಉಳಿಯುವುದಕ್ಕೆ ಸಾಧ್ಯ. ನಾನೇನು ಹೇಳುತ್ತಿದ್ದೇನೆ ಅಂತ ಅಚ್ಚರಿ ಎನಿಸಬಹುದು, ನನಗೆ ಸಿನಿಮಾ ಮುಖ್ಯ. ಸಿನಿಮಾ ಅಂತ ಬಂದಾಗ ಪ್ರಾಣ ಕೊಡುವುದಕ್ಕೂ ನಾನು ಸಿದ್ಧ’ ಎಂದರು ಶಿವಣ್ಣ.
‘ನನ್ನ ಕರಿಯರ್‌ನಲ್ಲಿ ‘ಕವಚ’ ಒಂದೊಳ್ಳೆ ಸಿನಿಮಾ. ಅಲ್ಲಿ ಅಂಧನ ಪಾತ್ರ. ಒಪ್ಪಿಕೊಳ್ಳುವಾಗ ಹಾಗೋ ಏನೋ ಎನ್ನುವ ಆತಂಕ ಇತ್ತು. ಈಗ ಚಿತ್ರವನ್ನು ಪ್ರೇಕ್ಷಕರು ನೋಡಿ, ಮೆಚ್ಚುಗೆ ಹೇಳುತ್ತಿರುವುದನ್ನು ಕಂಡಾಗ ಖುಷಿ ಆಗುತ್ತಿದೆ. ನಾವೀಗ ಹುಬ್ಬಳ್ಳಿ, ಶಿವಮೊಗ್ಗ ಸೇರಿ ಅನೇಕ ಕಡೆಗಳಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೇವೆ. ಅಲ್ಲಿ ಜನರ ಜತೆಗೆ ಮಾನಾಡಿದ್ದೇವೆ. ಪ್ರತಿಯೊಬ್ಬರು ಚಿತ್ರದ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಇದು ಖುಷಿ ತಂದಿದೆ ’ಎಂದರು ಶಿವಣ್ಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.