
ಮೇ. 28 ಹಾಗೂ 29 ರಂದು ಅರಮನೆ ಮೈದಾನದಲ್ಲಿ ಹೂ ಬಳಸದೇ ಗಾಜಿನ ಅರಮನೆಯಂತೆ ಅಲಂಕಾರ ಮಾಡಿಸಿ ಮಗಳ ಮದುವೆಯನ್ನು ವಿಜೃಂಭಣೆಯಾಗಿ ಮಾಡಲಿದ್ದಾರೆ ರವಿ ಚಂದ್ರನ್.
ಕ್ರೇಜಿಸ್ಟಾರ್ ಮಗಳ ಮದುವೆಗೆ ವೋಚರನ್ನೇ ಉಡುಗೊರೆಯಾಗಿ ತೆಗೆದುಕೊಂಡು ಬನ್ನಿ!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ತಕಧಿಮಿತಾ’ ಡ್ಯಾನ್ಸ್ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ವೇಳೆ ವೇದಿಕೆ ಮೇಲೆ ಆಗಮಿಸಿದ ರವಿಚಂದ್ರನ್ ಮಗಳ ಮದುವೆ ವಿಚಾರದಲ್ಲಿರುವ ಆತಂಕವನ್ನು ಹಂಚಿಕೊಂಡಿದ್ದಾರೆ.
'ಕಳೆದೆರಡು ವಾರಗಳಿಂದ ಮನಸ್ಸಿನಲ್ಲಿ ಏನೋ ತಳಮಳ. ದಿನಗಳು ಹತ್ತಿರವಾಗುತ್ತಿದಂತೆ ತುಂಬಾ ಭಯವಾಗುತ್ತಿದೆ. ಯಾರೂ ಮಾಡಿರದ ಹಾಗೆ ಸಂಭ್ರಮ ಮಾಡಬೇಕು ಅಂತ ಇದೆ ತಲೆಯಲ್ಲಿ. ಆದರೆ ಸಂಭ್ರಮ ಹೆಚ್ಚಾಗುತ್ತಿದಂತೆ ದಿನಗಳು ಬೇಗ ಕಳೆಯುತ್ತಿದೆ. ನಾನು ನನ್ನ ಕುಟುಂಬದವರು ಅವಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ನನ್ನ, ಅವಳ ರಿಲೇಷನ್‌ಶಿಪ್‌ಗೆ ಚಾನ್ಸ್ ಇಲ್ಲ. ಯಾಕಂದ್ರೆ ನನ್ನನ್ನು ಬೈಯುವುದಕ್ಕೆ ಅಧಿಕಾರ ಇರುವುದು ನನ್ನ ತಂದೆಗೆ ಅದು ಬಿಟ್ಟರೆ ನನ್ನ ಮಗಳಿಗೆ. ಜೀವನದಲ್ಲಿ ನಾನು ಯಾರಿಗಾದ್ರೂ ಹೆದರಿದ್ರೆ ಅದು ನನ್ನ ಮಗಳಿಗೆ ಮಾತ್ರಾ' ಎಂದು ಭಾವುಕರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.