ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ!

Published : Jun 24, 2019, 11:13 AM IST
ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ!

ಸಾರಾಂಶ

ಟಾಲಿವುಡ್‌ ಖ್ಯಾತ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಬಾಬಿ ನೀಲಾ - ಶಾಶ್ ಜೊತೆ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಟಾಲಿವುಡ್‌ ಸ್ಟಾರ್ ನಟ ಹಾಗೂ ನಿರ್ದೇಶಕ ಅಲ್ಲು ಬಾಬಿ ಹೈದರಾಬಾದ್‌ನಲ್ಲಿ ಮುಂಬೈ ಹುಡುಗಿ ನೀಲಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ. ಈ ವಿಚಾರವನ್ನು ಸ್ವತಃ ಅಲ್ಲು ಬಾಬಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'Folks i am Married!!! ನನ್ನ ಜೀವನದ ಹೊಸ ಅಧ್ಯಾಯ ಶುರುವಾಗಿದೆ. ಆಶೀರ್ವದಿಸಿ! ನಾನು ಈ ಹಿಂದೆ 2005 ರಲ್ಲಿ ಮದುವೆಯಾಗಿದ್ದು ಅದರಿಂದ 2016 ರಲ್ಲಿ ಮುಕ್ತಿ ಸಿಕ್ಕಿತ್ತು. ದೇವರ ದಯೆಯಿಂದ ಜೀವನದಲ್ಲಿ ಮುಂದೆ ಹೋಗುವುದನ್ನು ಕಲಿತ್ತಿದ್ದೇನೆ ಹಾಗೂ ಖುಷಿಯಾಗಿದ್ದೇನೆ. ಕುಟುಂಬಸ್ಥರ ಆಶೀರ್ವಾದ ಹಾಗೂ ಅಪ್ಪಣೆಯೊಂದಿಗೆ ಮುಂದುವರೆದಿರುವೇ ' ಎಂದು ಮದುವೆ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.

 

ಅಲ್ಲು ಬಾಬೀ ಟಾಲಿವುಡ್‌ ಖ್ಯಾತ ನಿರ್ದೇಶಕ ಹಾಗೂ ಅವರ ಪತ್ನಿ ನೀಲಾ ಶಾಶ್ ಯೋಗ ನಿರ್ದೇಶಕಿ. ಅಲ್ಲು ಬಾಬಿ ಈ ಹಿಂದೆ ನೀಲಿಮ್ಮ ಬಂಡಿ ಜೊತೆ ಮದುವೆಯಾಗಿದ್ದು ಅದು ಮುರಿದು ಬಿದ್ದಿದೆ. ಇವರಿಗೆ 10 ವರ್ಷದ ಅಲ್ಲು ಅನ್ವಿತಾ ಎಂಬ ಮಗಳಿದ್ದಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​