ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆಯೊಂದು ಬಾಳಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಯ ವ್ಯಕ್ತಿತ್ವವನ್ನು ಎತ್ತರಕ್ಕೇರಿಸಿದೆ.
ಅಲ್ಲಿ ಆಗಿದ್ದು ಇಷ್ಟು, ಪ್ರಯಾಣ ನಿಮಿತ್ತ ಏರ್‌ಪೋರ್ಟ್‌ಗೆ ಬಂದಿದ್ದ ದೀಪಿಕಾ ಸೀದಾ ಒಳಗೆ ನಡೆದಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಅಲ್ಲಿನ ತಪಾಸಣಾಧಿಕಾರಿ ದೀಪಿಕಾಗೆ ಐಡಿ ತೋರಿಸುವಂತೆ ಕೇಳಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ದೀಪಿಕಾ ‘ಯೂ ವಾಂಟ್ ಐಡಿ’ ಎಂದು ಕೇಳುತ್ತಾ ಅಧಿಕಾರಿಯತ್ತಲೇ ನಡೆದು ಬಂದು ಐಡಿ ತೋರಿಸಿ ಮುಂದೆ ಸಾಗಿದ್ದಾರೆ.
ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!
ಇದು ಎಲ್ಲರ ಪಾಲಿಗೂ ನಡೆಯುವ ಸಾಮಾನ್ಯ ಘಟನೆಯಾದರೂ ದೀಪಿಕಾ ಕೊಂಚ ಭಿನ್ನ. ಯಾಕೆಂದರೆ ಅವರು ದೊಡ್ಡ ಸೆಲೆಬ್ರಿಟಿ. ದೇಶದ ಯಾವುದೇ ಭಾಗಕ್ಕೆ ಹೋದರೂ ಅವರನ್ನು ಗುರುತು ಹಿಡಿಯುತ್ತಾರೆ. ಅಭಿಮಾನಿಗಳು ಸುತ್ತು ಹಾಕಿ ಸೆಲ್ಫಿಗೆ ಮುಗಿ ಬೀಳುತ್ತಾರೆ. ಹೀಗಿರುವಾಗ ಅವರನ್ನು ಬಾಲಿವುಡ್‌ನ ಸೆಂಟರ್ ಆಗಿರುವ ಮುಂಬೈನಲ್ಲಿಯೇ ಐಡಿ ತೋರಿಸಿ ಎಂದು ಕೇಳಿದರೆ ಹೇಗಾಗಬೇಡ?
Thy shall always obey rules 👍 #deepikapadukone
A post shared by Viral Bhayani (@viralbhayani) on Jun 21, 2019 at 12:22pm PDT
ದೀಪಿಕಾ ಕೊಂಚವೂ ಸಿಟ್ಟು ಮಾಡಿಕೊಳ್ಳದೇ ಏರ್‌ಪೋರ್ಟ್‌ನಲ್ಲಿ ನಡೆದುಕೊಂಡ ರೀತಿಗೆ ಸೋಷಲ್ ಮೀಡಿಯಾದಲ್ಲಿ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ. ಇದರೊಂದಿಗೆ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡಿದ ಅಧಿಕಾರಿಗೂ ಮೆಚ್ಚುಗೆ ಸಿಕ್ಕಿದೆ. ಕಡೆಗೆ ದೀಪಿಕಾ ತನ್ನ ಸ್ಟಾರ್ ಡಮ್ ತೋರಿಸಿಕೊಳ್ಳದೇ ನಡೆದುಕೊಂಡ ರೀತಿ ಎಲ್ಲರಿಗೂ ಮಾದರಿಯೂ ಹೌದು.