
ಬೆಂಗಳೂರು, (ಸೆ.18): ಬದ್ಧ ವೈರಿಗಳಂತೆ ಬಿಂಬಿತರಾಗಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ನಟ ಪ್ರಕಾಶ್ ರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಟ್ವೀಟ್ ಮೂಲಕ ಕಾದಾಡುತ್ತಿದ್ದ ಇವರಿಬ್ಬರು ಕೆಲ ದಿನಗಳಿಂದ ತಣ್ಣಗಾಗಿದ್ದರು.
ಇದನ್ನು ಓದಿ: ಪ್ರಕಾಶ್ ರೈ ತೆರೆ ಮೇಲೆ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿಯೂ ಖಳನಾಯಕ: ಪ್ರತಾಪ್ ಸಿಂಹ
ಇದೀಗ ಪ್ರಕಾಶ್ ರೈ ಅವರು ಸಂಸದ ಪ್ರತಾಪ್ ಸಿಂಹಗೆ ಟ್ವಿಟರ್‌ನಲ್ಲಿ ಮತ್ತೊಮ್ಮೆ ಕುಟುಕಿದ್ದಾರೆ. ಕೊಡಗಿನ ಹೆಬ್ಬೆಟ್ಟಗೆರೆ ಗ್ರಾಮದಲ್ಲಿ ಸಂಸದ ಪ್ರತಾಪ್ ಸಿಂಹ ದೇವಯ್ಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ವಿಡಿಯೋವನ್ನ ರೈ ಟ್ವೀಟ್ ಮಾಡಿದ್ದಾರೆ.
ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ...ಹೀಗೂ ಉಂಟೇ ಎಂದು ಪ್ರಕಾಶ್ ರೈ, ಸಂಸದ ಪ್ರತಾಪ್ ಸಿಂಹರಿಗೆ ಟ್ವಿಟರ್‌ನಲ್ಲಿ ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್ ಗೆ ಬಂದು ದೇವಯ್ಯ ವಯಸ್ಸಿನ ಅಂತರ ನೋಡಿ ಸುಮ್ಮನಾದೆ ಎಂದಿದ್ದರು. ಆ ವಿಡಿಯೋವನ್ನು ಸಹ ಪ್ರಕಾಶ್ ರೈ ಟ್ವೀಟ್ ಮಾಡಿ ಕಾಲು ಕೆದರಿ ಸಿಂಹನ ಜೊತೆ ಕಾದಾಟಕ್ಕೆ ಇಳಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.