ಸೋಷಲ್‌ ಮೀಡಿಯಾಗೆ ಮರಳುತ್ತಿರುವ ರಕ್ಷಿತ್‌ ಶೆಟ್ಟಿ!

Published : Jun 04, 2019, 09:19 AM IST
ಸೋಷಲ್‌ ಮೀಡಿಯಾಗೆ ಮರಳುತ್ತಿರುವ ರಕ್ಷಿತ್‌ ಶೆಟ್ಟಿ!

ಸಾರಾಂಶ

ರಕ್ಷಿತ್‌ ಶೆಟ್ಟಿಮತ್ತೆ ಸೋಷಲ್‌ ಮೀಡಿಯಾ ಕಡೆ ಮುಖ ಮಾಡಿದ್ದಾರೆ. ಕೆಲಸದ ಒತ್ತಡ, ಒಂದಿಷ್ಟುಬೇಸರಗಳಿಂದ ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಗುಡ್‌ ಬೈ ಹೇಳಿದ್ದರು. ಆದರೆ, ಹೀಗೆ ದೂರವಾಗಿದ್ದರಿಂದ ಅಭಿಮಾನಿಗಳಿಂದಲೂ ದೂರವಾದಂತೆ ಅನಿಸಿದೆ. ಅಲ್ಲದೆ ಅಭಿಮಾನಿಗಳ ಜತೆ ನೇರ ಮಾತು, ಸಂಪರ್ಕ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ದೂರ ಮಾಡಿದ್ದ ಸೋಷಲ್‌ ಮೀಡಿಯಾವನ್ನು ಹತ್ತಿರ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ಗಳಲ್ಲಿ ರಕ್ಷಿತ್‌ ಶೆಟ್ಟಿಎಂದಿನಂತೆ ಆ್ಯಕ್ಟಿವ್‌ ಆಗಲಿದ್ದಾರೆ. 

 ಆ ಮೂಲಕ ಅಭಿಮಾನಿಗಳಿಗೂ ಹತ್ತಿರವಾಗಲಿದ್ದಾರೆ. ಜೂನ್‌ 6ರಂದು ರಕ್ಷಿತ್‌ ಶೆಟ್ಟಿಅವರ ಹುಟ್ಟು ಹಬ್ಬ. ಅಭಿಮಾನಿಗಳ ಒತ್ತಾಯದ ಮೇರೆಗೆ ಅಂದು ಸೋಷಯಲ್‌ ಮೀಡಿಯಾಗೆ ಬರುವ ಮೂಲಕ ಅಭಿಮಾನದ ಉಡುಗೋರೆ ನೀಡಲು ಮುಂದಾಗಿದ್ದಾರೆ.

ಟೀಮ್‌ ರಕ್ಷಿತ್‌ ಶೆಟ್ಟಿ

ರಕ್ಷಿತ್‌ ಶೆಟ್ಟಿಅವರ ಹೆಸರಿನಲ್ಲಿ ಅಧಿಕೃತವಾಗಿ ಟೀಮ್‌ ರಕ್ಷಿತ್‌ ಶೆಟ್ಟಿಹೆಸರಿನಲ್ಲಿ ಅವರ ಅಭಿಮಾನಿಗಳ ತಂಡ ಹುಟ್ಟುಕೊಂಡಿದೆ. ಈ ಮೂಲಕ ಅಭಿಮಾನಿಗಳೇ ತಮ್ಮ ನೆಚ್ಚಿನ ಸಿಂಪಲ್‌ ಸ್ಟಾರ್‌ನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡುವುದಕ್ಕೆ ಹೊರಟಿದ್ದಾರೆ. ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿ ಬಿಡಲಿದ್ದಾರೆ. ಈ ಟೀಮ್‌ ರಕ್ಷಿತ್‌ ಶೆಟ್ಟಿಹೆಸರಿನ ತಂಡದ ಪುಟದಲ್ಲಿ ರಕ್ಷಿತ್‌ ಶೆಟ್ಟಿನಟನೆಯ ಚಿತ್ರಗಳು, ಹೊಸ ಫೋಟೋಗಳನ್ನು ಹಾಕುವ ಮೂಲಕ ಸಿಂಪಲ್‌ ಸ್ಟಾರ್‌ ಅಭಿಮಾನಿಗಳು ಆ್ಯಕ್ಟಿವ್‌ ಆಗಲಿದ್ದಾರೆ.

ಅಭಿಮಾನಿಗಳ ಜತೆ ನೇರ ಸಂಪರ್ಕದಲ್ಲಿರುವುದಕ್ಕೆ ಸೋಷಲ್‌ ಮೀಡಿಯಾ ದೊಡ್ಡ ಮಟ್ಟದಲ್ಲಿ ಸೇತುವೆ ಆಗುತ್ತಿದೆ. ಅದರಿಂದ ನಾನು ಇಷ್ಟುದಿನ ದೂರ ಇದ್ದೆ. ಈಗ ಮತ್ತೆ ಸೋಷಲ್‌ ಮೀಡಿಯಾಗೆ ಮರಳುತ್ತಿದ್ದೇನೆ. ಟೀಮ್‌ ರಕ್ಷಿತ್‌ ಶೆಟ್ಟಿಹೆಸರಿನಲ್ಲಿ ನೇರವಾಗಿ ಅಭಿಮಾನಿಗಳ ಜತೆ ಮಾತನಾಡುತ್ತೇನೆ. ನನ್ನ ಚಿತ್ರಗಳ ವಿವರಣೆಗಳನ್ನು ಹೇಳುತ್ತೇನೆ. ಸದ್ಯಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಹೊಸ ವಿಚಾರಗಳನ್ನು ಹೇಳಲಿದ್ದೇನೆ - ರಕ್ಷಿತ್‌ ಶೆಟ್ಟಿ, ನಟ

ಹುಟ್ಟು ಹಬ್ಬಕ್ಕೆ ಟೀಸರ್‌- ಪೋಸ್ಟರ್‌

ರಕ್ಷಿತ್‌ ಶೆಟ್ಟಿಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘777 ಚಾರ್ಲಿ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಜೂನ್‌ 6ರಂದು ಅಧಿಕೃತವಾಗಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಶೂಟಿಂಗ್‌ ಮುಕ್ತಾಯ ಮಾಡಲಿದ್ದಾರೆ. ಹೀಗಾಗಿ ಅದೇ ದಿನ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಮೂಲಕ ರಕ್ಷಿತ್‌ ಶೆಟ್ಟಿನಟನೆಯ ಬಹು ನಿರೀಕ್ಷೆಯ ಚಿತ್ರ, ಶೂಟಿಂಗ್‌ ಮೈದಾನದಿಂದ ತಾಂತ್ರಿಕ ಕೆಲಸಗಳತ್ತ ಮುಖ ಮಾಡಲಿದೆ. ಹುಟ್ಟುಹಬ್ಬದಂದೇ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹೊಸ ಟೀಸರ್‌ ಅಥವಾ ಪೋಸ್ಟರ್‌ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡದ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ