
ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ( The Devil Movie ) ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆ ಹಲವು ಕಡೆ ಫ್ಯಾನ್ಸ್ ಶೋ ಇಡಲಾಗಿತ್ತು. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ನಟ ಧನ್ವೀರ್, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್ ಜೊತೆ ಸಿನಿಮಾ ನೋಡುತ್ತಿದ್ದಾರೆ.
ನಟ ದರ್ಶನ್ ತೂಗುದೀಪ ನಟನೆಯ ‘ದಿ ಡೆವಿಲ್’ ಸಿನಿಮಾ ರಿಲೀಸ್‌ಗೂ ಮುನ್ನವೇ ಅಂದಾಜು 3.5 ಕೋಟಿ ರೂಪಾಯಿಗೂ ಅಧಿಕವಾಗಿ ಸಂಗ್ರಹಣೆ ಮಾಡಿದೆ. ಜೈ ಮಾತಾ ಮಾತಾ ಕಂಬೈನ್ಸ್ ಶನಿವಾರ ಡೆವಿಲ್ ಸಿನಿಮಾ ನಿರ್ಮಾಣ ಸಂಸ್ಥೆ ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿದೆ. ‘ಒಂದು ಐಕಾನ್, ಒಂದು ಅತ್ಯುತ್ಸಾಹದ ಫ್ಯಾನ್ಸ್ ಬಳಗದಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ ರೂಪಾಯಿ’ ಎಂದು ತಿಳಿಸಿತ್ತು.
ಸದ್ಯ ಗಂಟೆಗೆ 11 ಸಾವಿರ ಟಿಕೆಟ್ ಬುಕಿಂಗ್ ಆಗಿದೆ. 55,000ಕ್ಕೂ ಅಧಿಕ ಫ್ಯಾನ್ಸ್ ಶೋಗಳ ಟಿಕೆಟ್ ಸೇಲ್ ಆಗಿತ್ತು ಎನ್ನಲಾಗಿದೆ. ಅಭಿಮಾನಿಗಳು ದರ್ಶನ್ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಛಲಕ್ಕೆ ಬಿದ್ದಿದ್ದಾರೆ. ಇವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್ ಆಗಿದೆ. ಹೀಗಾಗಿ ಶೋಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ಅಂದಹಾಗೆ ಟಿಕೆಟ್ ದರ ಕೂಡ ಏರಿಕೆಯಾಗಿದೆ, ಗರಿಷ್ಠ ಟಿಕೆಟ್ ದರ 900 ರೂಪಾಯಿವರೆಗೆ ಏರಿಕೆಯಾಗಿದೆ. ಬಹುತೇಕ ಕಡೆ 500 ರೂಪಾಯಿಯಿಂದ 600 ರೂಪಾಯಿವರೆಗೂ ಟಿಕೆಟ್ ದರವಿದೆ.
( ಮೊದಲ ಭಾಗದ ವಿಮರ್ಶೆ )
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.