
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಅರೋಪದಲ್ಲಿ ನಟ ದರ್ಶನ್ (Darshan Thoogudeepa) ಅವರು ಇತ್ತೀಚೆಗೆ ಮತ್ತೆ ಜೈಲು ಸೇರಿರುವುದು ಗೊತ್ತೇ ಇದೆ. ಆರೋಪಿಯಾಗಿ ಏಳು ತಿಂಗಳ ಬಳಿಕ ಅನಾರೋಗ್ಯದ ಕಾರಣಕ್ಕೆ ಹೈಕೋರ್ಟ್‌ನಿಂದ ಜಾಮೀನು ಪಡೆದು ನಟ ದರ್ಶನ್ ಮನೆಯಲ್ಲಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್, ನಟ ದರ್ಶನ್ ಜಾಮೀನು ಕ್ಯಾನ್ಸಲ್ ಮಾಡಿ ಮತ್ತೆ ಜೈಲಿಗೆ ಹೋಗುವಂತೆ ಮಾಡಿರುವುದು ಬಹುತೇಕರಿಗೆ ಗೊತ್ತಿದೆ. ಸದ್ಯಕ್ಕೆ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.
ಆದರೆ, ನಟ ದರ್ಶನ್ ಅವರು ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸಂತೆಬೆನ್ನೂರಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ನಟ ದರ್ಶನ್ ಅವರನ್ನು ಅಲ್ಲಿ ನೋಡಿ ಅವರ ಅಪ್ಪಟ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೆಲವರು ಕಣ್ಣೀರು ಹಾಕುತ್ತ 'ಡಿ ಬಾಸ್.. ಡಿ ಬಾಸ್ ಎಂದು ಘೋಷಣೆ ಕೂಗಿದ್ದಾರೆ. ಕೆಲವರು ಅಚ್ಚರಿಯಿಂದ ಶಾಕ್ ಆಗಿದ್ದರೆ ಹಲವರು ಡಿ ಬಾಸ್ ನೋಡಿ ತಬ್ಬಿಕೊಳ್ಳಲು ವೇದಿಕೆಗೆ ನುಗ್ಗಿದ್ದಾರೆ. ಆದರೆ, ಅಲ್ಲಿ ಅವರು ನಟ ದರ್ಶನ್ ಅವರನ್ನು ಮುಟ್ಟಲು ಸಾಧ್ಯವಾಗಿಲ್ಲ.
ಕಾರಣ, ನಟ ದರ್ಶನ್ ಅವರು ಗಣೇಶನನ್ನು ನೋಡಲು ಅಲ್ಲಿಗೆ ಅಂದರೆ, ಚನ್ನಗಿರಿಯ ಸಂತೆಬೆನ್ನೂರಿಗೆ ಹೋಗಿದ್ದಾರೆ. ಅಲ್ಲಿನ ಗಣೇಶೋತ್ಸವದ ವೇದಿಕೆ ಮೇಲೆ ನಟ ದರ್ಶನ್ ಪಾತ್ರಧಾರಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಅಲ್ಲಿ ಗಣೇಶೋತ್ಸವದ ಅಂಗವಾಗಿ ನಾಟಕ ನಡೆದಿದ್ದು, ಅದರಲ್ಲಿ ನಟ ದರ್ಶನ್ ಪಾತ್ರದ ಮೂಲಕ ನಾಟಕ ಏರ್ಪಡಿಸಲಾಗಿದೆ. ಅಲ್ಲಿ ಕೈಗೆ ಕೋಳ (ಬೇಡಿ) ಹಾಕಿರುವ ನಟ ದರ್ಶನ್ ಅವರ ಪಾತ್ರದ ಮೂಲಕ ನಾಟಕ ನಡೆದಿದೆ. ಅದನ್ನು ನೋಡಿದ ಪ್ರೇಕ್ಷಕರು ನಟ ದರ್ಶನ್ ಅವರನ್ನು ಪ್ರತ್ಯಕ್ಷವಾಗಿ ಅಲ್ಲಿ ನೋಡಿದವರಂತೆ ಸಂಭ್ರಮಿಸಿದ್ದಾರೆ.
ವೇದಿಕೆಯಲ್ಲಿ ನಟ ದರ್ಶನ್ ಪಾತ್ರಧಾರಿ ಉದ್ದನೆಯ ಗಡ್ಡವನ್ನು ಬಿಟ್ಟಿದ್ದಾರೆ. ಅವರ ಹೈಟು-ವ್ಹೇಟು ಎಲ್ಲವೂ ಥೇಟ್ ನಟ ದರ್ಶನ್ ಅವರಂತೆ ಮಜಬೂತಾಗಿದೆ. ಯಾರೇ ನೋಡಿದರೂ ಥಟ್ಟನೇ ನಟ ದರ್ಶನ್ ಅವರನ್ನು ನೋಡಿದಂತೆಯೇ ಭಾಸವಾಗುವಂತಿದೆ. ಆದರೆ, ಅದು ನಾಟಕ, ಅಲ್ಲಿರುವ ವ್ಯಕ್ತಿ ರಿಯಲ್ ದರ್ಶನ್ ತೂಗುದೀಪ ಅಲ್ಲ, ಬದಲಾಗಿ ಕಲಾವಿದ ಅಷ್ಟೇ. ಆದರೂ ಕೂಡ ನಟ ದರ್ಶನ್ ಅಭಿಮಾನಿಗಳು ಸಾಕ್ಷಾತ್ ಅಲ್ಲಿ ತಮ್ಮ ಡಿ ಬಾಸ್ ನೋಡಿದಂತೆಯೇ ಆಡಿದ್ದಾರೆ. ಕಣ್ಣೀರು ಹಾಕಿದ್ದಾರೆ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ಅಲ್ಲಿ ನಟ ದರ್ಶನ್ ತೂಗುದೀಪ ಪಾತ್ರದ ನಾಟಕ ಚೆನ್ನಾಗಿ ಪ್ರದರ್ಶನವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.