ದರ್ಶನ್‌ ಬಳಿ 2 ಚಿತ್ರ ಮಾಡ್ಸಿ ಒಂದಕ್ಕೆ ಸಂಭಾವನೆ ಕೊಟ್ರಾ ಮುನಿರತ್ನ?

Published : Jul 11, 2019, 10:41 AM IST
ದರ್ಶನ್‌ ಬಳಿ 2 ಚಿತ್ರ ಮಾಡ್ಸಿ ಒಂದಕ್ಕೆ ಸಂಭಾವನೆ ಕೊಟ್ರಾ ಮುನಿರತ್ನ?

ಸಾರಾಂಶ

ಬಹುನಿರೀಕ್ಷಿತ ಕುರುಕ್ಷೇತ್ರ ಆರೋಪಗಳ ಸುರಿಮಳೆಯನ್ನೇ ಹೊತ್ತುಕೊಂಡು ರಿಲೀಸ್‌ ನತ್ತ ಮುಖ ಮಾಡುತ್ತಿದೆ. ಆದರೆ ಸಂಭಾವನೆ ಬಗ್ಗೆ ಮೊದಲ ಬಾರಿಗೆ ವಿಚಾರ ತೆಗೆದ ದರ್ಶನ್ ಮನಿಸಿಕೊಂಡು ಮುನಿರತ್ನ ಕಾಲೆಳೆದಿದ್ದಾರೆ.

ಕುರುಕ್ಷೇತ್ರ ಯಾವಾಗ ರಿಲೀಸ್ ಆಗುತ್ತೆ ಸರ್ ?, ನಮ್ ಬಾಸ್ ನೋಡ್ಬೇಕು, ಅಂಬಿ ಅಣ್ಣನನ್ನು ನೋಡಬೇಕು ನಾನು ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ರಿಲೀಸ್ ದಿನಾಂಕ ನಿಗದಿಪಡಿಸಿ ಸಿಹಿ ಸುದ್ದಿ ಕೊಟ್ಟರು. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು 'ಕುರುಕ್ಷೇತ್ರ'ದ ಎರಡು ಟೀಸರ್‌ಗಳು.

ಮುನಿರತ್ನ ಮೇಲೆ ಮುನಿಸಿಕೊಂಡ ಡಿ-ಬಾಸ್ ಫ್ಯಾನ್ಸ್!

ಇದಾದ ಮೇಲೆ ಶುರುವಾಯ್ತು ನೋಡಿ ಕಿಡಿ. ಡಿ ಬಾಸ್‌ ಅಭಿಮಾನಿಗಳು ಟ್ರೈಲರ್‌ ಲಾಂಚ್‌ ಆಹ್ವಾನ ಪತ್ರಿಕೆಯಲ್ಲಿ ನಮ್ಮ ದರ್ಶನ್ ಫೋಟೋವಿಲ್ಲ ಎಂದು ನಿರ್ಮಾಪಕ ಮುನಿರತ್ನ ವಿರುದ್ಧ ತಿರುಗಿ ಬಿದ್ದರು. ಆ ನಂತರ ಬಿಡುಗಡೆಯಾದ ಟ್ರೇಲರ್ ನೋಡಿ ಇದೇನಪ್ಪಾ? ವಿಡಿಯೋ ತುಂಬಾ ಮುನಿರತ್ನ ಹೆಸರು ಮಾತ್ರ ಕಾಣಿಸುತ್ತದೆ ಇನ್ಯಾರು ಇಲ್ವಾ ಎಂದು ಮುನಿರತ್ನ ವಿರುದ್ಧ ಮುನಿಸಿಕೊಂಡರು.

'ಕುರುಕ್ಷೇತ್ರ' ಟ್ರೈಲರ್‌ನಲ್ಲಿ ತಪ್ಪು-ತಪ್ಪು ಕನ್ನಡ ಬಳಕೆ!

ಹಾಟ್ ಹಾಟ್‌ ವಾತಾವರಣವನ್ನು ಕೂಲ್ ಮಾಡೋಕೆ ದರ್ಶನ್‌ ತಮಾಷೆ ಮಾಡುವ ರೀತಿಯಲ್ಲಿ 'ಕುರುಕ್ಷೇತ್ರ ಕಲಾವಿದರಿಗೆ ಒಂದು ಸಿನಿಮಾಗೆ ಕೊಡುವಷ್ಟು ಸಂಭಾವನೆ ಕೊಟ್ಟು ಎರಡು ಸಿನಿಮಾ ಕೆಲಸ ಮಾಡಿಸಿದ್ದಾರೆ' ಎಂದು ಕಾಲೆಳೆದರು. ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಕೋಟಿ ತನ್ನದಾಗಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಫ್ರೆಂಡ್​ಶಿಪ್​ ಚಾಲೆಂಜ್​ನಲ್ಲಿ ಗೆಲ್ಲೋರು ಯಾರು? ಇಂಥ ಸವಾಲು ಹಾಕೋ ಜಗತ್ತಿನ ಏಕೈಕ ವ್ಯಕ್ತಿನಾ ಗಿಲ್ಲಿ?
ಕೊನೆಯ ಬಾರಿ ಅತ್ತಿದ್ದನ್ನು ಹೇಳಿಕೊಂಡ ಉಪೇಂದ್ರ; ಈಗ ಕಣ್ಣೀರು ಬತ್ತಿದೆ ಎಂದ ರಿಯಲ್ ಸ್ಟಾರ್