Actor Dhanveer: ದರ್ಶನ್ ಆಪ್ತ ಧನ್ವೀರ್, ವಿಜಯಲಕ್ಷ್ಮಿ ನಡುವಿನ ಮನಸ್ತಾಪಕ್ಕೆ ಕೊನೆಗೂ ಕಾರಣ ರಿವೀಲ್!

Published : Oct 24, 2026, 05:32 PM IST
actor dhanveer

ಸಾರಾಂಶ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್, ತಮಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆಂದು ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದರ್ಶನ್ ಬಂಧನದ ಬಳಿಕ ಇವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಬೆಂಗಳೂರು: ತಮ್ಮ ಮೊಬೈಲ್ ಕರೆಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಬೆದರಿಸಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕರು ದೂರು ನೀಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದ ಆಪ್ತ ಧನ್ವೀರ್‌ ಮಧ್ಯೆ ಭಿನ್ನಾಭಿಪ್ರಾಯವು ಈಗ ಬೀದಿಗೆ ಬಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್ ದೂರು ನೀಡಿದ್ದಾರೆ.

ಧನ್ವೀರ್ ವಿರುದ್ಧ ದೂರು

ಈ ದೂರು ಸ್ವೀಕರಿಸಿದ ಪೊಲೀಸರು, ಗಂಭೀರ ಸ್ವರೂಪವಲ್ಲದ (ಎನ್‌ಸಿ) ಪ್ರಕರಣ ಎಂದು ನಮೂದಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ ವೇಳೆ ದರ್ಶನ್ ಕುಟುಂಬದ ಬೆನ್ನಿಗೆ ಧನ್ವೀರ್ ನಿಂತಿದ್ದರು. ಆದರೆ ಕಾನೂನು ಹೋರಾಟದಲ್ಲಿ ದರ್ಶನ್ ಅವರಿಗೆ ಹಿನ್ನಡೆ ಉಂಟಾದ ನಂತರ ಧನ್ವೀರ್ ಹಾಗೂ ದರ್ಶನ್ ಪರಿವಾರದ ಮಧ್ಯೆ ಮನಸ್ತಾಪ ಶುರುವಾಗಿದೆ. ಈ ವೈಯಕ್ತಿಕ ಕಾರಣಕ್ಕೆ ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್‌ಗೆ ಧನ್ವೀರ್ ಕರೆ ಮಾಡಿ ಬೆದರಿಸಿದ್ದಾರೆ ಎಂದು ತಿಳಿದು ಬಂದಿದೆ.

ನನಗೆ ಬೆದರಿಕೆ ಹಾಕಿದ್ದರೆ ಎಂದ ಧನ್ವೀರ್

ಈ ಕುರಿತಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ನಟ ಧನ್ವೀರ್, ನಾನು ಮಾತನಾಡಿರುವ ಆಡಿಯೋಗಳನ್ನು ಕಟ್ ಕಟ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಇಂತಹ ನೂರು ಆಡಿಯೋ ಬಿಡಲಿ. ಆದರೆ ಇಲ್ಲಿ ಆಡಿಯೋ ಹಿಂದಿನ ಹಾಗೂ ಮುಂದಿನ ಸಂಭಾಷಣೆಗಳನ್ನು ಕಟ್ ಮಾಡಿ ಯಾಕೆ ಬಿಡುಗಡೆ ಮಾಡುತ್ತಿದ್ದಾರೆ ಎಂಬುವುದು ನನ್ನ ಮೊದಲ ಪ್ರಶ್ನೆ ಎಂದು ಹೇಳಿದ್ದಾರೆ.

ಅಲ್ಲದೇ, ಆಡಿಯೋದಲ್ಲಿ ನಾನು ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದೀನಿ ಎಂದು ಹೇಳಿದ್ದಾರೆ. ನಾನು ಏಕೆ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದೆ ಎಂದು ಮಾತ್ರ ಹೇಳುತ್ತಿಲ್ಲ. ಸಂಪೂರ್ಣ ಆಡಿಯೋ ಅವರೇ ಬಿಡುಗಡೆ ಮಾಡಲಿ. ವಿಜಯಲಕ್ಷ್ಮೀ ಅವರ ತಂಗಿಯ ಗಂಡ ನಾಯ್ಡು ಅಂತ ಇದ್ದರೆ. ಅವರು ನನಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಾರೆ. ದರ್ಶನ್ ಅವರಿಗೆ ಬೆಂಬಲವಾಗಿ ನಿಂತರೆ, ಅವರಿಗೆ ಆದ ಗತಿಯೇ ನಿನಗೂ ಮಾಡಿಸುತ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ನಾನು ಆ ಮನುಷ್ಯನ ಪರವಾಗಿ, ನ್ಯಾಯದ ಪರವಾಗಿ ನಿಂತಿರುವುದು ನನ್ನ ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಎಫ್‌ಎಸ್‌ಎಲ್ ರಿಪೋರ್ಟ್ ಹೊರಗೆ ಬರಲಿ, ಧನ್ವೀರ್ ಸವಾಲು!?

ನಾನು ಬಹಳ ದಿನಗಳಿಂದ ಮಾತನಾಡಬಾರದು ಎಂದು ತಡೆದುಕೊಂಡು ಬಂದಿದ್ದೇನೆ. ನಾನು ಮಾತನಾಡಿದರೆ ದರ್ಶನ್ ಅವರಿಗೆ ಬೇಜರಾಗುತ್ತದೆ ಅಂತ ಸುಮ್ಮನಿದ್ದೆ. ಆದರೆ ನಾನು ಅಲ್ಲಿಗೆ ಹೋಗದಂತೆ ಕಟ್ ಮಾಡಿದ್ದರು. ಇದೆಲ್ಲಾ ಅವರಿಗೂ ಗೊತ್ತು. ಅವರು ಒಳಗಡೆ ಇದ್ದುಕೊಂಡೆ ಇವರ ಮಾಡುತ್ತಿರುವ ಸಂಗತಿಗಳನ್ನು ಗಮನಿಸುತ್ತಿದ್ದಾರೆ. ಈಗ ಇವರು ಮಾಡುತ್ತಿರುವ ಪೋಸ್ಟ್ ಗಳು ಕೂಡ ಸಂಪೂರ್ಣ ಸುಳ್ಳು. ಎಲ್ಲಾ ಫೇಕ್ ಮಾಡುತ್ತಿದ್ದಾರೆ. ಒಳಗಡೆ ಒಂದು ಹೊರಗಡೆ ಒಂದು ಅವರು, ಇಷ್ಟೆಲ್ಲಾ ಮಾತನಾಡುವವರು ಸಾಕ್ಷಿ ನಾಶ ವಿಚಾರದಲ್ಲಿ ಕೆಲವರನ್ನು ಬಂಧನ ಮಾಡುತ್ತಾರೆ. ಆ ಪ್ರಕರಣದಲ್ಲಿ ತನಿಖೆಯಾಗಿ, ಎಫ್‌ಎಸ್‌ಎಲ್ ರಿಪೋರ್ಟ್ ಕೂಡ ಬರುತ್ತದೆ. ಆದರೆ ಆ ರಿಪೋಟ್ ಯಾಕೆ ಅಲ್ಲೇ ಮುಚ್ಚಿ ಹೋಯ್ತು? ಕೋರ್ಟ್ ಗೆ ವರದಿಯನ್ನು ಸಲ್ಲಿಕೆ ಮಾಡಲಿ. ನ್ಯಾಯಾಲಯಕ್ಕೆ ಸತ್ಯಾಂಶಗಳು ಗೊತ್ತು ಮಾಡಲಿ. ಯಾಕೆ ಅಲ್ಲಿಯೇ ಮುಚ್ಚಿ ಹಾಕುತ್ತಿದ್ದಾರೆ. ರಿಪೋಟ್‌ನಲ್ಲಿ ಬಂದಿರುವ ಹೆಸರುಗಳನ್ನು ಮುಚ್ಚಿ ಹಾಕಲು ಈ ರೀತಿ ಮಾಡುತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಿಚಾರಣೆ ನಡೆದಿದೆ, ಈ ಮಾಹಿತಿ ಕೋರ್ಟ್ ಮುಂದೇ ಬರಲಿ ನೋಡೋಣಾ ಎಂದು ಸವಾಲು ಹಾಕಿದ್ದಾರೆ.

ಇನ್ನು, ಪ್ರಕರಣದ ಮಾಫಿ ಸಾಕ್ಷಿ ವಿಚಾರದಲ್ಲೂ ಆರೋಪಿ ಪ್ರದೂಷ್, ಜೈಲಿನಿಂದ ಇಬ್ಬರ ಜೊತೆ ಮಾತನಾಡಿದ್ದಾರೆ ಎಂಬ ವಿಚಾರ ಕೇಳಿಸಿತು. ಆದರೆ ಈ ವಿಚಾರ ಹೊರಗೆ ಬಂದಿಲ್ಲ. ಆರೋಪಿ ಹೆಂಡತಿಯ ಜೊತೆ ಮಾತನಾಡಲು ಜೈಲಿನಲ್ಲಿ ಅವಕಾಶ ಇದೆ. ಆದರೆ ಬೇರೆ ಫೋನ್‌ನಿಂದ ಮಾತನಾಡಿದ್ದು ಏಕೆ? ಇದಕ್ಕೆ ಕಾರಣ ಏನು? ಈ ಇಬ್ಬರು ವ್ಯಕ್ತಿಗಳ ಯಾಕೆ? ಇಷ್ಟೆಲ್ಲಾ ಅಂಶಗಳನ್ನು ನಾವು ನೋಡಿ ನೋಡಿ ಸಾಕಾಗಿದೆ. ಈಗಾಗಲೇ ಜೈಲಿನಲ್ಲಿ ದರ್ಶನ್ ಅವರು ಬಹಳ ನೋವು ಅನುಭವಿಸಿದ್ದಾರೆ. ಅವರಿಗೆ ನೋವು ನೋಡಲು ನನಗೆ ಇಷ್ಟವಿಲ್ಲ. ಆದರೆ ಇದು ಅತೀರೆಕಕ್ಕೆ ಹೋಗುತ್ತಿದೆ. ಅವರ ಪರವಾಗಿ ಇರೋದಕ್ಕೆ ಇಲ್ಲಿವರೆಗೂ ಬಂದಿದೆ. ಇದರಿಂದ ಇನ್ನು ಏನೇ ಆದರೂ ನಾವು ಎದುರಿಸಲು ಸಿದ್ಧ. ದರ್ಶನ್ ಅವರಿಗೆ ನ್ಯಾಯ ಸಿಗುವವರೆಗೂ ಅವರನ್ನು ಬೆಂಬಲಕ್ಕೆ ನಿಲುತ್ತೇನೆ ಎಂದು ನಟ ಧನ್ವೀರ್ ಹೇಳಿದ್ದಾರೆ.

ಧನ್ವೀರ್, ವಿಜಯಲಕ್ಷ್ಮೀ ನಡುವಿನ ವಾರ್‌ಗೆ ಕಾರಣವೇನು?

ಪ್ರಕರಣದಲ್ಲಿ ದರ್ಶನ್ ಅವರಿಗೆ ಈಗಾಗಲೇ ನ್ಯಾಯ ಸಿಕ್ಕಿರೋದು, ಆದರೆ ಬೇಕು ಅಂತಲೇ ಕೆಲವರು ಈ ರೀತಿ ಮಾಡುತ್ತಿದ್ದಾರೆ. ಹೊರಗಡೆ ಒಂದು ಮಾಡಿ, ಒಳಗಡೆ ಹೋಗಿ ಇನ್ನೊಂದು ರೀತಿ ಹೇಳುತ್ತಿದ್ದಾರೆ ಎಂದು ಧನ್ವೀರ್ ಆರೋಪಿಸಿದ್ದಾರೆ.

ಅಲ್ಲದೇ, ನನ್ನ ವಿರುದ್ಧ ಆರೋಪ ಮಾಡುತ್ತಿರುವವರೊಂದಿಗೆ ಮಾತನಾಡಲು ನೀವೇ ಟೈಮ್ ಫಿಕ್ಸ್ ಮಾಡಿ, ನಾನು ಬಂದು ಮಾತನಾಡುತ್ತೇನೆ. ಎಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ದರ್ಶನ್ ಅವರು ಹೆಲ್ಪ್‌ ಲೆನ್ಸ್ ಆಗಿದ್ದಾರೆ. ನಾನು ಅಲ್ಲಿಗೆ ಹೋಗದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಗೊತ್ತು. ನಾನು ಮತ್ತು ನೀವು ಒಂದೇ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೀವಿ ಅಂದರೆ ಏಕೆ ನನಗೆ ನೀವು ಅಡ್ಡಿ ಮಾಡುತ್ತೀರಿ. ನನ್ನನ್ನು ತಡೆಯಲು ಯಾಕೆ ಪ್ರಯತ್ನ ಮಾಡುತ್ತಿದ್ದೀರಿ. ದರ್ಶನ್ ಅವರನ್ನು ಹೊರಗಡೆ ಕರೆದುಕೊಂಡು ಬರುವುದು ನನ್ನ ಉದ್ದೇಶ, ಇದೇ ಉದ್ದೇಶಕ್ಕೆ ವಿಜಯಲಕ್ಷ್ಮೀ ಅವರ ನಡುವೆ ಮನಸ್ತಾಪ ಎದುರಾಗಿದೆ ಅಷ್ಟೇ. ಎಫ್‌ಎಸ್‌ಎಲ್ ರಿಪೋರ್ಟ್ ಹೊರಗೆ ಬಂದರೆ ಎಲ್ಲವೂ ಬಯಲಾಗುತ್ತದೆ. ನನಗೆ ಎಲ್ಲವೂ ಗೊತ್ತು, ಆದರೆ ಕಾನೂನಾತ್ಮಕವಾಗಿ ಹೊರಗಡೆ ಬರಲಿ ಎಂದು ಧನ್ವೀರ್ ಹೇಳಿದರು.

ವಿಜಯಲಕ್ಷ್ಮೀ ಅವರು ಕೋರ್ಟ್, ದೇವಸ್ಥಾನ ಅಂತ ದರ್ಶನ್ ಅವರ ಬಿಡುಗಡೆಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ಷಡ್ಯಂತ್ರ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಧನ್ವೀರ್, ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ. ಈಗ ನಾನು ಇಷ್ಟು ಮಾತ್ರ ಹೇಳಲು ಸಾಧ್ಯ. ಎಲ್ಲರ ಮುಖವಾಡಗಳು ಬೆಳಕಿಗೆ ಬರುತ್ತದೆ. ಆದರೆ ನಾನು ಮಾತನಾಡಿರುವ ಸಂಪೂರ್ಣ ಬಿಡುಗಡೆ ಮಾಡಲಿ. ನಾನು ದರ್ಶನ್ ಪರವಾಗಿಯೇ ಇರುತ್ತೇನೆ. ನಾನು ಯಾರಿಗೂ ಹೀಗೆ ಮಾತನಾಡಿ ಎಂದು ಹೇಳಿಲ್ಲ. ನನ್ನ ಮನೆಗೆ ನಾನು ಇಲ್ಲದಾಗ ರೌಡಿಶೀಟರ್ ಗಳೊಂದಿಗೆ ಬಂದಿದ್ದಾರೆ. ಇದೇ ಕಾರಣಕ್ಕಾಗಿ ಬೈದಿದ್ದೇನೆ, ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾಗ ಬಂದಿದ್ದರು. ಆ ಬಳಿಕ ನಾನು ಬಂದು ಫೋನ್ ಮಾಡಿದರೆ ಫೋನ್ ತೆಗೆಯಲಿಲ್ಲ. ಆದ್ದರಿಂದ ನಾನು ವಾಟ್ಸಾಪ್ ಮೂಲಕ ಕಳುಹಿಸಿದ್ದೇನೆ. ರೌಡಿ ಶೀಟರ್‌ಗೂ ಈ ಹೆಣ್ಣು ಮಗಳಿಗೂ ಏನು ಲಿಂಕ್ ಎಂದು ನಟ ಧನ್ವೀರ್ ಪ್ರಶ್ನಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗುಂಡಿನ ದಾಳಿ ನಡೆದ ಕೆಲವೇ ದಿನದಲ್ಲೇ 9 ಕೋಟಿ ರೂಗೆ ಮುಂಬೈನ ಮನೆ ಮಾರಾಟ ಮಾಡಿದ ಟೈಗರ್ ಶ್ರಾಫ್
ಯಶ್ ‘ರಾಮಾಯಣ’ದಲ್ಲಿ ಕಾಜಲ್‌ಗೆ ಶಾಕ್? ಎಡಿಟಿಂಗ್‌ನಲ್ಲಿ ಅವರ ಪಾತ್ರವನ್ನೇ ಕೈಬಿಟ್ಟರಾ, ಯಾಕೆ?