ಆಟೋದಲ್ಲಿ ಉಪೇಂದ್ರ ದಿಢೀರ್‌ ಪ್ರತ್ಯಕ್ಷ, ಚಿಕ್ಕದಾಗಿ ವಿಡಿಯೋ ಮಾಡಿ ಸ್ಪೆಷಲ್‌ ಮನವಿ

Published : Oct 24, 2026, 05:16 PM IST
Actor Updendra in Auto

ಸಾರಾಂಶ

ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಇವತ್ತು ವಿಶೇಷ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಬ್‌ ಹಾಗೂ ಆಟೋ ಮೂಲಕ ರೈಡ್‌ ಮಾಡಿರುವ ಉಪೇಂದ್ರ ಅವರು ಬೆಂಗಳೂರು ಜನರಲ್ಲಿ ಸ್ಪೆಷಲ್‌ ಮನವಿ ಮಾಡಿದ್ದಾರೆ.. ಏನದು? ಸ್ಟೋರಿ ಓದಿ..

ಬೆಂಗಳೂರು (ಅಕ್ಟೋಬರ್‌ 24): ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಇವತ್ತು ವಿಶೇಷ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಬ್‌ ಹಾಗೂ ಆಟೋ ಮೂಲಕ ರೈಡ್‌ ಮಾಡಿರುವ ಉಪೇಂದ್ರ ಅವರು ಬೆಂಗಳೂರು ಜನರಲ್ಲಿ ಸ್ಪೆಷಲ್‌ ಮನವಿ ಮಾಡಿದ್ದಾರೆ..

ಉಪೇಂದ್ರ ಅವರ ಮನವಿ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಆಟೋ ಹಾಗೂ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ. ಸ್ಥಳೀಯವಾಗಿ ಬೆಂಗಳೂರಿನ ಆಟೋ ಚಾಲಕರು ಹಾಗೂ ಕ್ಯಾಬ್‌ ಚಾಲಕರೆಲ್ಲರೂ ಸೇರಿ ವಿಶೇಷವಾದ ʼನಗರʼ ಎಂಬ ಆಪ್‌ ಕ್ರಿಯೇಟ್‌ ಮಾಡಿದ್ದಾರೆ. ಆ ಆಪ್‌ ಮೂಲಕ ಇನ್ಮುಂದೆ ಪ್ರಯಾಣಿಕರು ಆಟೋ ಮತ್ತು ಕ್ಯಾಬ್‌ ಬುಕ್‌ ಮಾಡಿಕೊಂಡು ಹೋಗಬಹುದು. ವಿಶೇಷ ಅಂದ್ರೆ ಇದನ್ನು ಆಟೋ ಚಾಲಕರು ಮತ್ತು ಕ್ಯಾಬ್‌ ಚಾಲಕರೇ ಸೇರಿ ಅಭಿವೃದ್ಧಿಪಡಿಸಿರುವ ಆಪ್‌ ಆಗಿದೆ. ಈ ಆಪ್‌ ಮೂಲಕವೂ ನೀವು ಸುರಕ್ಷಿತವಾಗಿ ತಲುಪಬೇಕಾಗಿದ್ದ ಸ್ಥಳವನ್ನು ಸೇರಬಹುದು. ನಮ್ಮವರೇ ಅಭಿವೃದ್ಧಿಪಡಿಸಿರುವ ನಗರ ಆಪ್‌ ತಿಳಿದು ತುಂಬಾ ಖುಷಿ ಆಯಿತು ಎಂದು ಉಪೇಂದ್ರ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ..

ಉಪೇಂದ್ರ ಮಾಡಿದ ಮನವಿ ಏನು? ಎಲ್ಲರಿಗೂ ನಮಸ್ಕಾರ.. ನಗರ.. ನಗರ ಅಂತಾ ಒಂದು ಆಪ್.‌ ಬೆಂಗಳೂರಿನಲ್ಲಿರುವ ಎಲ್ಲಾ ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್‌ಗಳು ಸೇರಿಕೊಂಡು ಮಾಡಿರುವ ಆಪ್‌ ಇದಾಗಿದೆ. ಇದರಲ್ಲಿ ನೀವು ರೈಡ್‌ ಬುಕ್‌ ಮಾಡಿದರೆ.. ಮೀಟರ್‌ಗೆ ಎಷ್ಟು ರೂಪಾಯಿ ಇದೆಯೋ ಅಷ್ಟೇ ತೆಗೆದುಕೊಂಡು ನಿಮ್ಮನ್ನ ಎಲ್ಲಿ ಸುರಕ್ಷಿತವಾಗಿ ತಲುಪಿಸಬೇಕೋ, ಅಲ್ಲಿ ತಲುಪಿಸುತ್ತಾರೆ.. ಈ ಆಪ್‌ನಲ್ಲಿ ಸರ್ಕಾರದ ಯಾವ ರೇಟ್‌ ಇದೆಯೋ? ಅದೇ ರೇಟ್‌ ತೆಗೆದುಕೊಳ್ಳುತ್ತಾರೆ. ಯಾವುದೇ ಸ್ಪೆಷಲ್‌ ಚಾರ್ಜ್‌ ಹಾಕುವುದಿಲ್ಲ. ಇದರಿಂದ ನಿಮಗೆ ಉಳಿತಾ, ಚಾಲಕರಿಗೂ ಒಳ್ಳೆಯದಾಗಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇಷ್ಟು ಮನವಿ ಮಾಡಿರುವ ಉಪೇಂದ್ರ ಅವರು, ಅಲ್ಲಿದ್ದ ಆಟೋ ಚಾಲಕರು, ಕ್ಯಾಬ್‌ ಚಾಲಕರ ಜೊತೆ ಮುಕ್ತವಾಗಿ, ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಆಟೋ ಹಿಡಿದು ಮನೆಗೆ ಹೊರಟಿದ್ದಾರೆ. ಉಪೇಂದ್ರ ಅವರು ಆಟೋ ಏರಿ ಹೋಗುವ ದೃಶ್ಯ ಕೂಡ ಅದರಲ್ಲಿ ಇದೆ. ಇನ್ನು, ಆಪ್‌ನ ವಿಶೇಷತೆ ಏನು ಅಂತಾ ನೋಡೋದಾದರೆ..

ಏನಿದು ನಗರ.. ವಿಶೇಷತೆ ಏನು..?

  • ʼನಗರʼ ಅನ್ನೋದು ಅಗ್ರಿಗೇಟರ್ ಆಪ್ ರೀತಿಯೇ ಒಂದು ಆಪ್ ಆಗಿದೆ
  • ಇಲ್ಲಿ ಪ್ರಯಾಣಿಕರು ಆಟೋ ಹಾಗೂ ಕ್ಯಾಬ್ ಬುಕ್ ಮಾಡಿಕೊಳಲ್ಲು ಅವಕಾಶ ಇದೆ
  • ಸರ್ಕಾರ ನಿಗದಿ ಮಾಡಿರೋ ದರದಲ್ಲಿ ಫೇರ್ ಪ್ರೈಸ್ ಇರಲಿದೆ
  • ಪ್ರಯಾಣಿಕರ ಹಣ ನೇರವಾಗಿ ಚಾಲಕರ ಅಕೌಂಟ್ ಗೆ ಬೀಳಲಿದೆ
  • ಇದರಲ್ಲಿ ಆಪ್ ನವರು ಯಾವುದೇ ಕಮಿಷನ್ ಪಡೆಯೋದಿಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

“ಅವರು ನನ್ನ ಹೊಟ್ಟೆ ಸವರುತ್ತಾರೆ” ಪತಿ ವಿಜಯ್ ಬಗ್ಗೆ ರಶ್ಮಿಕಾ ಹಂಚಿಕೊಂಡ ಖಾಸಗಿ ಸಂಗತಿ!
ದರ್ಶನ್ ಜೈಲಿನಲ್ಲಿ ಅಸಹಾಯಕರಾಗಿದ್ದಾರೆ, ವಿಜಯಲಕ್ಷ್ಮಿ -ಧನ್ವೀರ್ ಬೀದಿ ಜಗಳ ಬೆನ್ನಲ್ಲೇ ನಟನ ಸ್ಫೋಟಕ ಮಾತು