ಕೊನೆಗೂ ನಿಟ್ಟುಸಿರು ಬಿಟ್ಟ ನಟ ದರ್ಶನ್, ಅರ್ಜಿ ಪುರಸ್ಕರಿಸಿ ಜೈಲಾಧಿಕಾರಿಗಳಿಗೆ ಕೋರ್ಟ್ ಸೂಚನೆ

Published : Nov 07, 2026, 04:36 PM IST
actor darshan thoogudeepa

ಸಾರಾಂಶ

ಜೈಲಿನಲ್ಲಿರುವ ನಟ ದರ್ಶನ್ ಕಳೆದ ಹಲವು ತಿಂಗಳಿನಿಂದ ಎಲ್ಲಾ ಕೋರ್ಟ್ ಅಲೆಯುತ್ತಿದ್ದಾರೆ. ಆದರೆ ಒಂದರ ಹಿಂದೆ ಒಂದರಂತೆ ಅರ್ಜಿಗಳು ತಿರಸ್ಕಾರಗೊಳ್ಳುತ್ತಿತ್ತು. ಇದೀಗ ದರ್ಶನ್ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದ್ದು, ಜೈಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದೆ.

ಬೆಂಗಳೂರು (ನ.07) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಜಾಮೀನು, ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಗೆ ನಟ ದರ್ಶನ್ ಎಲ್ಲಾ ಕೋರ್ಟ್ ಅಲೆದು ಸುಸ್ತಾಗಿದ್ದಾರೆ. ಒಂದರ ಹಿಂದೆ ಒಂದರಂತೆ ದರ್ಶನ್ ಅರ್ಜಿಗಳು ತಿರಸ್ಕಾರಗೊಳ್ಳುತ್ತಲೇ ಹೋಗಿದೆ. ಇದರ ನಡುವೆ ನಟ ದರ್ಶನ್ ನಿಟ್ಟಿಸಿರು ಬಿಡುವಂತಾಗಿದೆ. ನಟ ದರ್ಶನ್ ಸೆಷನ್ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ತೀವ್ರ ಬೆನ್ನು ನೋವಿನ ಹಿನ್ನಲೆಯಲ್ಲಿ ವೈದ್ಯಕೀಯ ಸೌಲಭ್ಯ ಕೋರಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ.

59ನೇ ಸೆಷನ್ ಕೋರ್ಟ್ ಆದೇಶ

ನಟ ದರ್ಶನ್ ಜೈಲಿನಲ್ಲಿ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಕೋರ್ಟ್‌ಗೆ ಮನವಿ ಮಾಡಿದ್ದರು. ಕಳೆದ ಬಾರಿ ಇದೇ ಬೆನ್ನು ನೋವು ಸಂಬಂಧ ಜಾಮೀನು ಪಡೆದುಕೊಂಡಿದ್ದ ದರ್ಶನ್ ನಿಯಮ ಉಲ್ಲಂಘಿಸಿ ಮತ್ತೆ ಜೈಲುಪಾಲಾಗಿದ್ದರು. ಈ ಬಾರಿ ತಮ್ಮ ಬೆನ್ನು ನೋವು ಸಮಸ್ಯೆ ತೀವ್ರಗೊಂಡಿದ್ದು, ಸೂಕ್ತ ಚಿಕಿತ್ಸೆಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಅರ್ಜಿಯನ್ನು ಪುರಸ್ಕರಿಸಿದ 59ನೇ ಸೆಷನ್ ಕೋರ್ಟ್, ಅಗತ್ಯ ವೈದ್ಯಕೀಯ ಸೌಲಭ್ಯ ನೀಡುವಂತೆ ಸೂಚಿಸಿದೆ.

ಬೆನ್ನು ನೋವು ಸಮಸ್ಯೆಗೆ ಫಿಸಿಯೋಥೆರಫಿ ಸೇರಿದಂತೆ ಸೂಕ್ತ ಚಿಕಿತ್ಸೆಗೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ಕುರಿತು ಕೋರ್ಟ್ ಜೈಲು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದೆ. ನಟ ದರ್ಶನ್ ಬೆನ್ನು ನೋವಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸೂಚಿಸಿದೆ.

ಪ್ರಸನ್ನ ಕುಮಾರ್ ವಾದ

ದರ್ಶನ್ ಅರ್ಜಿ ಕುರಿತು ವಾದ ಮಂಡನೆಯಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ನಟ ದರ್ಶನ್‌ಗೆ ನಿಜವಾಗಿಯೂ ಬೆನ್ನು ನೋವಿನ ಸಮಸ್ಯೆ ಇದ್ದರೆ ವೈದ್ಯಕೀಯ ದಾಖಲೆ ನೀಡಲಿ. ಕಳೆದ ಬಾರಿ ಜಾಮೀನು ಪಡೆಯಲು ಬೆನ್ನು ನೋವಿನ ಸಮಸ್ಯೆ ಹೇಳಿದ್ದರು. ದರ್ಶನ್‌ಗೆ ಸರ್ಜರಿ ಅಗತ್ಯವಿದೆ, ಇಲ್ಲದಿದ್ದರೆ ತೀರಾ ಸಮಸ್ಯೆಯಾಗಲಿದೆ ಎಂದು ಹೇಳಿದ್ದರು. ಆಪರೇಷನ್​​ ಮಾಡಿಸಿಕೊಳ್ಳದಿದ್ದರೇ ಸ್ವಾಧೀನ ಕಳೆದುಕೊಳ್ಳಬಹುದು, ಯೂರಿನೇಷನ್​ ಕಂಟ್ರೋಲ್​ ಕಳೆದುಕೊಳ್ಳಬಹುದು ಎಂದು ಹೇಳಿದ್ದರು. ಆದರೆ ಜಾಮೀನು ಪಡೆದ ಬಳಿಕ ದರ್ಶನ್​ ಯಾವುದೇ ಆಪರೇಷನ್​​ ಮಾಡಿಸಿಕೊಂಡಿಲ್ಲ. 2024ರಲ್ಲಿ ಹೈಕೋರ್ಟ್ ಮೂಲಕ ಮೆಡಿಕಲ್ ಗ್ರೌಂಡ್ ಅಡಿಯಲ್ಲಿ ಜಾಮೀನು ಪಡೆದಿದ್ದರು. ಆದರೆ ಆಪರೇಷನ್​ ಮಾಡಿಕೊಳ್ಳದೇ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಹೈಕೋರ್ಟ್‌ಗ ಸುಳ್ಳು ಮಾಹಿತಿ ನೀಡಿದ್ದರು.

ಆಪರೇಷನ್​ ಅಗತ್ಯ ಇದೆ ಎಂದು ಹೈಕೋರ್ಟ್‌ನಲ್ಲಿ 2024ರಲ್ಲಿ ಮಧ್ಯಂತರ ಜಾಮೀನು ಪಡೆಯಲಾಗಿತ್ತು. ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಪರೇಷನ್​​ ಅಗತ್ಯ ಎಂದು ದರ್ಶನ್ ಮನವಿ ಮಾಡಿದ್ದರು. ಮಧ್ಯಂತರ ಜಾಮೀನು ಪಡೆದ ಬಳಿಕ ಸ್ಟಿರಾಯ್ಡ್​​​ ಇಂಜೆಕ್ಷನ್​​ ತೆಗೆದುಕೊಳ್ಳಲಾಗಿದೆ. ಆದರೆ ಯಾವುದೇ ಆಪರೇಶನ್ ಮಾಡಿಕೊಂಡಿಲ್ಲ. ಇಷ್ಟೇ ಅಲ್ಲ ಹಲವು ಕಾರ್ಯಕ್ರಮಗಳಲ್ಲಿ ದರ್ಶನ್ ಪಾಲ್ಗೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಕೋಟಿ ಬಜೆಟ್, ಬರೋಬ್ಬರಿ 10 ಕೋಟಿ ಕಲೆಕ್ಷನ್! 15 ವರ್ಷಗಳ ಹಿಂದೆ ಸದ್ದು ಮಾಡಿದ್ದ ಕನ್ನಡದ ಈ ಸಿನಿಮಾ!
ಡ್ಯಾನ್ಸ್ ಹಿನ್ನೆಲೆಯ 'ಜನರಿಂದ ನಾನು ಮೇಲೆ ಬಂದೆ': ಆ ಕನಸಿಗೆ ವಿನೋದ್ ರಾಜ್, ಅಭಿಜಿತ್ ಸಾಥ್