
ಕನ್ನಡಿಗರ ಎಡಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ನಟ ಚಂದ್ರಶೇಖರ್ ಈಗ ನೆನಪು ಮಾತ್ರ. ಮೊನ್ನೆನೇ ಕೆನಡಾದಲ್ಲಿ ತೀರಿ ಹೋಗಿದ್ದ ಚಂದ್ರು ದೇಹ ಭಾರತಕ್ಕೆ ಬರ್ತದೆಂಬ ನಿರೀಕ್ಷೆ ಗೆಳೆಯರಲ್ಲಿತ್ತು.ಮಲ್ಲೇಶ್ವರಂನಲ್ಲಿರೊ ಚಂದ್ರು ತಾಯಿ ಕೂಡ ಅದೇ ನಿರೀಕ್ಷೆಯಲ್ಲಿಯೇ ಇದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ.
ಚಂದ್ರು ತೀರಿ ಹೋದ ಮರು ದಿನವೆ ಮಗಳು ತಾನ್ಯಾ ಕೆನಡಾಕೆ ಪಯಣ ಬೆಳೆಸಿದ್ದರು.ಅದರಂತೆ ಎಲ್ಲ ಕಾರ್ಯಗಳೊಂದಿಗೆ ನಿನ್ನೆ ಮಧ್ಯಾಹ್ನ 3.30 ಕ್ಕೆ ಅಂದ್ರೆ ಭಾರತೀಯ ಸಮಯಕ್ಕೆ ಇಂದು ಬೆಳಗ್ಗೆ 1.30 ಕ್ಕೆ ಕೆನಡಾದ ರಾಜ್ಯಧಾನಿ ಒಟ್ಟಾವಾದ ಪೈನ್ ಕ್ರೆಸ್ಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಆಗಿದೆ. ಅಂತ್ಯಕ್ರಿಯೆ ವೇಳೆ ಚಂದ್ರು ಪುತ್ರಿ ತಾನ್ಯಾ ಪತ್ನಿ ಶೀಲಾ ಮತ್ತು ಅಲ್ಲಿದ್ದ ಬಂದು-ಮಿತ್ರರು ಆಗಮಿಸಿ ಚಂದ್ರು ಅವರಿಗೆ ಕೊನೆಯ ನಮನ ಸಲ್ಲಿಸಿದರು. ಈ ವಿಷಯವನ್ನ ಚಂದ್ರಶೇಖರ್ ಭಾವ ನಿವೃತ್ತ ಪೊಲೀಸ್ ಅಧಿಕಾರಿ ಡಿ.ವಿ.ಗುರುಪ್ರಸಾದ್ ಪ್ರಕಟಣೆ ಮೂಲಕವೇ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.