ಬಾಯ್‌ಫ್ರೆಂಡ್ ಜೊತೆ ಡೇಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಅಮೀರ್ ಖಾನ್ ಪುತ್ರಿ | ಬಾಯ್‌ಫ್ರೆಂಡ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್
ಬಾಲಿವುಡ್ ಮಿ. ಪರ್ಫೆಕ್ಟ್ ಎಂದೇ ಹೆಸರಾದ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಬಾಯ್ ಫ್ರೆಂಡ್ ಮಿಶಾಲ್ ಕಿರ್ಪಾಲಾನಿ ಜೊತೆ ಡ್ಯಾನ್ಸ್ ಮಾಡಿ ರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಇರಾ ಖಾನ್ ಕಾಲೆಳೆದಿದ್ದಾರೆ.
ಇಂತಹ ವಿಡಿಯೋವನ್ನು ಅಪ್ ಲೋಡ್ ಮಾಡುವ ಮೂಲಕ ಇರಾ ಅಮೀರ್ ಖಾನ್ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರೆ ಇನ್ನು ಕೆಲವರು ಇರಾ-ಮಿಶಾಲ್ ಜೋಡಿ ಸೂಪರ್ ಆಗಿದೆ ಎಂದು ಶ್ಲಾಘಿಸಿದ್ದಾರೆ.
ಇರಾ ಕೆಲ ದಿನಗಳ ಹಿಂದೆ ಮಿಶಾಲ್ ಜೊತೆಗಿನ ರಿಲೇಶನ್ ಶಿಪ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅಧಿಕೃತಗೊಳಿಸಿದ್ದರು. ಮಿಶಾಲ್ ಆರ್ಟಿಸ್ಟ್, ಕಂಪೋಸರ್, ಪ್ರೊಡ್ಯೂಸರ್ ಆಗಿದ್ದಾರೆ. ಇರಾ ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಮಗಳು. ಇವರು ಸದ್ಯದಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.