ಶುಭಾ ಪೂಂಜಾ ಚಿತ್ರಕ್ಕೆ ಎ ಸರ್ಟಿಫಿಕೇಟ್

First Published Jun 22, 2018, 4:59 PM IST
Highlights

ಹಾಲಿಡೇಸ್ ಬಂದ್ರೆ ಟೆಕ್ಕಿಗಳು ಟ್ರಾವೆಲ್‌ಗೆ ಹೊರಡುವುದು ಸದ್ಯದ ಟ್ರೆಂಡ್. ಆದ್ರೆ, ಹಾಗೆ ಹೋದ ಟೆಕ್ಕಿಗಳು ಕಾಡಿನಲ್ಲಿ ಕಾಣೆಯಾಗಿ ಸಾವು, ನೋವು ಸಂಭವಿಸಿದ ಘಟನೆಗಳೂ ದೊಡ್ಡ ಸುದ್ದಿ ಆಗಿವೆ. ಸದ್ಯಕ್ಕೆ 2016 ರಲ್ಲಿ ನಡೆದ ಅಂಥದ್ದೇ ಒಂದು ನೈಜ ಘಟನೆಯನ್ನೇ ಆಧರಿಸಿ ನಿರ್ಮಾಣವಾದ ‘ಕೆಲವು ದಿನಗಳ ನಂತರ’ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಇದೊಂದು ಸಸ್ಪೆನ್ಸ್  ಥ್ರಿಲ್ಲರ್ ಸಿನಿಮಾ.

ಇಲ್ಲಿ ಮತ್ತೊಂದು ವಿಶೇಷ ಅಂದ್ರೆ ಗ್ರಾಫಿಕ್ಸ್ ಮಗು. ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬಂದಿದ್ದ ಚಿತ್ರತಂಡ ಮೊದಲು ಮಾತನಾಡಿದ್ದು ಸೆನ್ಸಾರ್‌ನಿಂದ ಚಿತ್ರಕ್ಕೆ ಸಿಕ್ಕಿರುವ ‘ಎ’ ಸರ್ಟಿಫಿಕೇಟ್ ಕುರಿತು. ‘ಇದೊಂದು ಹಾರರ್ ಸಿನಿಮಾ. ಸೌಂಡ್ ಎಫೆಕ್ಟ್ ಇಲ್ಲಿ ಹೆಚ್ಚಾಗಿಯೇ ಇದೆ. ಆ ಕಾರಣಕ್ಕಾಗಿ ಸೆನ್ಸಾರ್ ಸಿಂಗಲ್ ಕಟ್ ಇಲ್ಲದೆ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿದೆ ’ ಎಂದರು ಶುಭಾ ಪೂಂಜ.

ನಿರ್ದೇಶಕ ಶ್ರೀನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘2016 ರಲ್ಲಿ ನಡೆದ ಒಂದು ಘಟನೆಯೇ ಈ ಕತೆಗೆ ಸ್ಫೂರ್ತಿ. ಅದು ಕಾಡು, ಕತ್ತಲ ನಡುವೆ ನಡೆದ ಘಟನೆ. ಹಾಗಾಗಿ ಅದಕ್ಕೆ ಹಾರರ್ ಟಚ್ ನೀಡಲಾಗಿದೆ. ಜನರಿಗೆ ಆ ಘಟನೆ ನೆನಪು ಇದೆಯೋ ಇಲ್ಲವೋ ಎನ್ನುವುದನ್ನು ಸರ್ವೆ ಮಾಡಿ ಕ್ರಾಸ್ ಚೆಕ್ ಮಾಡಿದ್ದೇವೆ. ಆ ಸರ್ವೇಯ ಮುಖ್ಯಾಂಶಗಳು ಕೂಡ ಚಿತ್ರದ ಕೊನೆಯಲ್ಲಿ ಬರಲಿವೆ’ಎಂದರು.

ಗ್ರಾಫಿಕ್ಸ್ ಬೇಬಿ:

‘ಆರು ವರ್ಷದ ಮಗುವಿನ ಪಾತ್ರವದು. ವಾಸ್ತವದಲ್ಲಿ ಅಷ್ಟು ವರ್ಷದ ಮಗುವನ್ನು ತಂದು ಅಭಿನಯ ಮಾಡಿಸಲು ಆಗದು ಅಂತ ಗ್ರಾಫಿಕ್ಸ್ ಮಾಡಿಸಿದೆವು. ಬೆಂಗಳೂರಿನಲ್ಲಿರುವ ಕೀಲೈಟ್ ವಿಎಫ್‌ಎಕ್ಸ್ ಸ್ಟುಡಿಯೋದಲ್ಲಿ ಅದನ್ನು ಕ್ರಿಯೇಟ್ ಮಾಡಲಾಯಿತು. ಹಾರರ್ ಸಿನಿಮಾ ಅಂದ್ರೆ ಹಿನ್ನೆಲೆ ಸಂಗೀತ ಅಷ್ಟೇ ಮುಖ್ಯವಾಗುತ್ತದೆ. ಬಕ್ಕೇಶ್ ಹಾಗೂ ವಿಜಯ್ ರಾಜ್ ಆ ಕೆಲಸ ಮಾಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಭಯ ಹುಟ್ಟಿಸುವ ಸನ್ನಿವೇಶಗಳ ನಡುವೆ ನಗಿಸುವ ಕಾಮಿಡಿ ಸನ್ನಿವೇಶ.

ಕಾಮಿಡಿ ಕಿಲಾಡಿಗಳು ಲೋಕೇಶ್ ಹಾಗೂ ಮಜಾ ಟಾಕೀಸ್ ಪವನ್ ಈ ಕಾಮಿಡಿಯ ರೂವಾರಿಗಳು. ಸೋನು ಪಾಟೀಲ್, ದ್ರವ್ಯಾ ಶೆಟ್ಟಿ, ಜಗದೀಶ್ ಆಲ್ಕೋಡ ಚಿತ್ರದಲ್ಲಿದ್ದಾರೆ. ಮುತ್ತುರಾಜ್, ವಸಂತ್ ಕುಮಾರ್, ಚಂದ್ರ ಕುಮಾರ್ ಈ ಚಿತ್ರದ ನಿರ್ಮಾಪಕರು. ರಾಕಿ ಸೋನು ಸಂಗೀತ ನೀಡಿದ್ದಾರೆ. ಚಿಕ್ಕಮಗಳೂರು, ದೇವರಾಯನ ದುರ್ಗ, ಸಾವನ ದುರ್ಗ, ಬೆಂಗಳೂರು ಸುತ್ತಮುತ್ತ  ಚಿತ್ರೀಕರಣ ನಡೆದಿದೆ. 

click me!