
ಬೆಂಗಳೂರು (ಜ.04): ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಹರ ಹರ ಮಹಾದೇವ’ ಧಾರಾವಾಹಿಯ ಪಾರ್ವತಿ ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದವರು ಪ್ರಿಯಾಂಕ ಚಿಂಚೋಳಿ. ಆದರೆ ಡಿಢೀರ್ ಬದಲಾವಣೆಯಾಗಿ ಆ ಪಾತ್ರಕ್ಕೆ ನಟಿ ಸಂಗೀತಾ ಬಂದಿದ್ದರು. ಸಂಗೀತಾ ಅದೇ ಧಾರಾವಾಹಿಯ ಸತಿ ಪಾತ್ರದ ಮೂಲಕ ಮನೆ ಮಾತಾದ ನಟಿ. ಆದರೆ ಈ ಬದಲಾವಣೆಗೆ ಕಾರಣ ಏನು ಅಂತ ತಿಳಿದು ಬಂದಿರಲಿಲ್ಲ. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಧಾರಾವಾಹಿ ನಿರ್ಮಾಣ ಸಂಸ್ಥೆ ಕಡೆಯಿಂದ ನಟಿ ಪ್ರಿಯಾಂಕಾ ಚಿಂಚೋಳಿಗೆ ಬಂದಿರುವ 9 ಲಕ್ಷ ರೂಪಾಯಿ ದಂಡದ ಲೀಗಲ್ ನೋಟಿಸ್ ಅದಕ್ಕೆ ಕಾರಣ ತಿಳಿಸಿದೆ. ದಂಡ ಕಟ್ಟಬೇಕಂತೆ ನಟಿ ಪ್ರಿಯಾಂಕಾ ‘ಹರ ಹರ ಮಹಾದೇವ’ ಧಾರಾವಾಹಿಯ ಪಾರ್ವತಿ ಪಾತ್ರಧಾರಿ ಬದಲಾಗಿ ಇಲ್ಲಿದೆ ಹಲವು ದಿನ ಕಳೆದಿವೆ. ಬಹುತೇಕ ವೀಕ್ಷಕರಿಗೂ ಪಾರ್ವತಿ ಪಾತ್ರಧಾರಿ ಪ್ರಿಯಾಂಕಾ ಯಾಕೆ ಹೋದರು, ಆ ಜಾಗಕ್ಕೆ ಸಂಗೀತ ಯಾಕೆ ಬಂದರು ಎನ್ನುವ ಪ್ರಶ್ನೆಗಳು ಮರೆತು ಹೋಗಿವೆ. ಅಸಲಿಗೆ ಈಗ ಪಾತ್ರಧಾರಿ ಬದಲಾವಣೆಯ ರಹಸ್ಯ ಬಯಲಾಗಿದೆ. ಪಾರ್ವತಿ ಪಾತ್ರಕ್ಕೆ ಒಪ್ಪಿಕೊಳ್ಳುವ ಮುನ್ನ ನಟಿ ಪ್ರಿಯಾಂಕಾ ಚಿಂಚೋಳಿ ಹಲವು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಆ ಒಪ್ಪಂದ ಹೀಗಿದೆ: 1. ಯಾವುದೇ ಕಾರಣಕ್ಕೂ ಅರ್ಧದಲ್ಲಿಯೇ ಧಾರಾವಾಹಿಯಿಂದ ಹೊರಟು ಹೋಗುವಂತಿಲ್ಲ. 2. ತುರ್ತು ಕೆಲಸಗಳೋ ಅಥವಾ ಅನಾರೋಗ್ಯದ ಕಾರಣಕ್ಕೆ ಹೊರಟು ಹೋಗುವ ಸನ್ನಿವೇಶ ಬಂದರೆ ಒಂದು ತಿಂಗಳು ಮುಂಚಿತವಾಗಿಯೇ ಮಾಹಿತಿ ನೀಡಬೇಕು. 3 ಜತೆಗೆ ಆ ಪಾತ್ರಕ್ಕೆ ಪರ್ಯಾಯ ವ್ಯವಸ್ಥೆ ಆಗುವ ತನಕ ಸಹಕಾರ ನೀಡಬೇಕು. ಆದರೆ ಪ್ರಿಯಾಂಕ ದಿಢೀರ್ ಧಾರಾವಾಹಿಯಿಂದ ಹೊರಟು ಹೋಗಿ, ಒಪ್ಪಂದ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ನಿರ್ಮಾಣ ಸಂಸ್ಥೆಗೆ ಅಪಾರ ನಷ್ಟವಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ನಿರ್ಮಾಣ ಸಂಸ್ಥೆಗೆ ಸಾಕಷ್ಟು ನಷ್ಟ ಆಗಿರುವುದರಿಂದ ₹ 9 ಲಕ್ಷದ ದಂಡ ಕಟ್ಟಿಕೊಡುವಂತೆ ಹೇಳಿದೆ. ಮುಂಬೈನ ಲಾ ಹಿವೆ ಅಸೋಸಿಯೆಟ್ಸ್ ಈ ನೋಟಿಸ್ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.