
ಸುದೀಪ್ ನಿರೂಪಿಸಿ ಕೊಡುತ್ತಿರುವ ಕನ್ನಡದ ರಿಯಾಲಿಟಿ ಶೋ ಬಿಗ್'ಬಾಸ್ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಕಳೆದ ವಾರ ಜಯ ಶ್ರೀನಿವಾಸ್ ಔಟಾಗಿ ಒಂದಷ್ಟು ಅಚ್ಚರಿ ಮೂಡಸಿದ್ದರು. ಆದರೆ ಈವಾರ ಯಾರು ಔಟಾಗುತ್ತಾರೆ ಎಂಬುದರ ಬಗ್ಗೆ ಬಿಗ್'ಬಾಸ್ ಮನೆಯಲ್ಲೇ ಬೆಟ್ಟಿಂಗ್ ನಡೆಯುತ್ತಿದೆ. ಅದು ಲಕ್ಷಗಳಲ್ಲಿ.
ಸದ್ಯ ಬಿಗ್ ಮನೆಯಲ್ಲಿ ಜೆಕೆ, ಸಮೀರ್,ಚಂದನ್ ಶೆಟ್ಟಿ, ಅನುಪಮಾ ಸೇರಿದಂತೆ 9 ಮಂದಿ ಇದ್ದಾರೆ. ಈ ವಾರ ನಾಮಿನೆಷನ್ ಲಿಸ್ಟ್'ನಲ್ಲಿ ಜೆಕೆ ಜೊತೆಗೆ ನಿವೇದಿತಾ ಗೌಡ, ರಿಯಾಝ್, ಶ್ರುತಿ ಪ್ರಕಾಶ್, ಕೃಷಿ ತಾಪಂಡ ಹಾಗೂ ಅನುಪಮಾ ಗೌಡ ಇದ್ದಾರೆ. ಆದರೆ ನಾನೆ ಹೊರ ಹೋಗುವುದು ಎಂದು ಪ್ರಮುಖ ಸ್ಪರ್ಧಿ ಜಯರಾಂ ಕಾರ್ತಿಕ್ ಬೆಟ್ ಕಟ್ಟಿದ್ದಾರೆ. ಅದು ಮಾಮೂಲಿ ಬೆಟ್ ಅಲ್ಲ 5 ಲಕ್ಷದ ಪಂದ್ಯ.
ಸಮೀರ್ ಆಚಾರ್ಯ ಜೊತೆ 'ಈ ವಾರ ನಾನೇ ಔಟ್ ಆಗುತ್ತೇನೆ'ಎಂದು ಬೆಟ್ ಕಟ್ಟಿದ್ದು, ಸಮೀರ್ ಆಚಾರ್ಯ ನೀವು ಔಟಾಗುವುದಿಲ್ಲ ಎಂದು 5 ಲಕ್ಷಕ್ಕೆ ಓಕೆ ಎಂದಿದ್ದಾರೆ. ಇವೆಲ್ಲಕ್ಕೂ ಉತ್ತರ ಶನಿವಾರ ಪ್ರೇಕ್ಷಕರ ಮತಗಳಿಂದ ನಿರ್ಧಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.