
ಸೂಪರ್ ಸ್ಟಾರ್ ಹೀರೋಗಳು ನೋಡೊಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಾ ಇರ್ತಾರೆ . ಇನ್ನು ಅವರ ಜೊತೆ ಒಂದು ಸೆಲ್ಫಿ ಸಿಕ್ರೆ ಸಾಕು ಅಂತಿರ್ತಾರೆ . ಆದರೆ ಈ ನಮ್ಮ ಸೂಪರ್ ಸ್ಟಾರ್ ಹೀರೋಗಳಿಗೆ ತಮ್ಮ ಪತ್ನಿಯರು ಅಂದರೆ ಎಲ್ಲಿಲ್ಲದ ಪ್ರೀತಿ, ಅವರೆ ಇವರ ರೋಲ್ ಮಾಡೆಲ್ ಕೂಡ ಹೌದು.
ಕನ್ನಡದ ನಾಯಕ ನಟರು ತಾವು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿಗೆ ತಮ್ಮ ಹೆಂಡತಿಯರನ್ನು ಕರೆದುಕೊಂಡು ಹೋಗುವುದನ್ನು ಮಿಸ್ ಮಾಡುವುದಿಲ್ಲ. ಇತ್ತೀಚಿಗೆ ಪವರ್'ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮಡದಿ ಅಶ್ವಿನಿ ಪುನೀತ್ ರಾಜ್'ಕುಮಾರ್'ರನ್ನ ವಿಜಯ್ ಲಕ್ಷ್ಮಿ ಸೀರೆ ಮಳಿಗೆ ಉದ್ಘಾಟನೆಗೆ ಕರೆದುಕೊಂಡು ಹೋಗಿದ್ದರು.
ಪವರ್ ಸ್ಟಾರ್ ಪುನೀತ್ ಬೆನ್ನುಲುಬಾಗಿ ಪತ್ನಿ ಅಶ್ವಿನಿ ನಿಂತಿದ್ದಾರೆ ಅಂದರೆ ತಪ್ಪಾಗಲಾರದು. ಅಮ್ಮ ಪರ್ವತಮ್ಮ ಸದಾಕಾಲ ಮಗ ಅಪ್ಪು'ಗೆ ಸಾಥ್ ಕೊಟ್ಟು ಪ್ರೀತಿಯಿಂದ ಬೆಳಸಿ ಚಿತ್ರರಂಗದ ಉತ್ತುಂಗಕ್ಕೆ ಏರಿಸಿದರು. ಇನ್ನು ಅಪ್ಪು ಮದುವೆ ನಂತರ ಪತ್ನಿ ಅಶ್ವಿನಿ ಅವರು ಸಹ ಅಮ್ಮ ಪಾರ್ವತಮ್ಮ ಹಾಗೆ ಪತಿ ಪುನೀತ್ ರಾಜ್ ಕುಮಾರ್'ಗೆ ಶ್ರೀ ರಕ್ಷೆಯಾಗಿ ನಿಂತಿದ್ದಾರೆ. ಪುನೀತ್ ಸಿನಿಮಾ ಕೆಲಸಗಳಿಂದ ಹಿಡಿದು, ಹೊಸದಾಗಿ ಲಾಂಚ್ ಮಾಡಿರೋ ಪಿ.ಆರ್.ಕೆ ಬ್ಯಾನರ್ ಹಾಗೂ ಅವರ ಸಿರಿಯಲ್ ಗಳ ಉಸ್ತುವಾರಿಯ ಜವಬ್ದಾರಿಯನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೆ ನಿರ್ವಹಿಸಿಕೊಂಡು ಹೋಗ್ತಿದ್ದಾರೆ, ಪನೀತ್'ಗೆ ಪತ್ನಿ ಅಶ್ವಿನಿಗೆ ಬಿಗ್ ಸಪೋರ್ಟ್ ಆಗಿದ್ದಾರೆ.
ಶಿವಣ್ಣನ ಹಿಂದೆ ಗೀತಕ್ಕ
ಅಂದ ಹಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಕ್ಸಸ್ ಹಿಂದೆ ಸ್ತ್ರೀಶಕ್ತಿ ಇದೆ. ಅಮ್ಮ ಪಾರ್ವತಮ್ಮ ನಂತರ ಶಿವಣ್ಣನ ಬಾಳಲ್ಲಿ ಬೆಳಕಾಗಿ ನಿಂತಿದ್ದು ಇದೇ ಗೀತಾ ಶಿವರಾಜ್ ಕುಮಾರ್. ನಟ ಶಿವರಾಜ್ ಕುಮಾರ್ ಅವರ ಮದುವೆ ನಂತರ ಅವರ ಸಕ್ಸಸ್'ಗೆ ಬೆನ್ನಲುಬಾಗಿದ್ದು ಅವರ ಸಿನಿಮಾದಿಂದ , ಲುಕ್, ಫಿಟ್'ನೆಸ್, ಕಥೆ ಆಯ್ಕೆ , ಕಾಸ್ಟ್ಯೂಮ್ ಸೇರಿದಂತೆ ಎಲ್ಲವನ್ನು ಪತ್ನಿ ಗೀತಾ ಸಲಹೆ ನೀಡುತ್ತಾರೆ.
ಸುದೀಪ್ ಜೊತೆ ಪ್ರಿಯಾ
ಕಿಚ್ಚ ಸುದೀಪ್ ಸುತ್ತಾಮುತ್ತಾ ಸಿಕ್ಕ ಪಟ್ಟೆ ಜನ ,ಅವರ ಸಿನಿಮಾ ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲಾ ಕೆಲಸಗಳನ್ನ ಅವರ ಅಸಿಸ್ಟೆಂಟ್ ಮ್ಯಾನೆಜರ್'ಗಳೆ ಮ್ಯಾನೆಜ್ ಮಾಡ್ತಾರೆ. ಆದರೆ ಕಿಚ್ಚನ ಯಶಸ್ಸಿಗೆ ಮುಖ್ಯ ಕಾರಣ ಅವರ ಮಡದಿ ಪ್ರಿಯಾ ಅವ್ರು. ಪ್ರತಿಯೊಂದು ಹಂತದಲ್ಲೂ ಕೆಲಸದಲ್ಲೂ ಕಿಚ್ಚನಿಗೆ ಸಾಥ್ ಕೊಟ್ಟು, ಕೆಲಸಕ್ಕೆ ಬೆಂಬಲಿಸುತ್ತಾ ಗಂಡನ ಕೆಲಸದಲ್ಲೆ ಸದಾ ಸಕ್ರಿಯರಾಗಿರೋ ಪ್ರಿಯಾ ಸುದೀಪ್ ಹಿಂದಿರೋ ಶಕ್ತಿ.
ದುನಿಯಾ ವಿಜಿಗೆ ಕೀರ್ತಿ ಬೆಂಬಲ
ಸ್ಯಾಂಡಲ್'ವುಡ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಕೂಡ ಈ ರೇಸ್'ನಲ್ಲಿದ್ದಾರೆ. ದುನಿಯಾ ವಿಜಯ್ ಇತ್ತೀಚಿಗೆ ಮನರಂಜನೆ ಕಾರ್ಯಕ್ರಮ ಅಥವಾ ಸಿನಿಮಾ ಕಾರ್ಯಕ್ರಮ ಆಗಲಿ ಪತ್ನಿ ಕೀರ್ತಿ ಜೊತೆ ಹಾಜರಾಗಿರುತ್ತಾರೆ. ದುನಿಯಾ ವಿಜಯ್ ಕೀರ್ತಿ ಅವರನ್ನ ತುಂಬಾ ಇಷ್ಟ ಪಡ್ತಾರೆ. ಒಂದು ರೀತಿಯಲ್ಲಿ ವಿಜಯ್ ಸಿನಿಮಾ ಉದ್ಯಮ ಹಾಗೂ ಖಾಸಗಿ ಜೀವನದಲ್ಲಿ ಪತ್ನಿ ಕಿರ್ತಿ ಯಶಸ್ಸಿನ ಕೀರ್ತಿಯಾಗಿದ್ದಾರೆ ಅಂದರೆ ತಪ್ಪಾಗಲಾರದು.
ಒಟ್ಟಾರೆ ಸ್ಟಾರ್ ಹೀರೋಗಳ ಸಕ್ಸಸ್ ಹಿಂದೆ ಸ್ತ್ರೀಶಕ್ತಿ ಇದ್ದೆ ಇರುತ್ತೆ ಅನ್ನೋದನ್ನ ಸ್ಟಾರ್ ಪತ್ನಿಯರ ಸೀಕ್ರೆಟ್ ನೋಡಿದ್ರೆ ಗೊತ್ತಾಗುತ್ತೆ. ಸೂಪರ್'ಸ್ಟಾರ್ ಹೆಂಡತಿಯನ್ನ ಬಿಂಕವಿಲ್ಲದೆ ಪತಿಯ ಯಶಸ್ಸಿಗೆ ಬೆನ್ನುಲುಬಾಗಿ ನಿಂತಿರೋದಂತೂ ಸತ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.