Rowdy Baby ಸಾಯಿ ಪಲ್ಲವಿಗಿದೆ ಈ ರೇರ್ ಟ್ಯಾಲೆಂಟ್!

By Web DeskFirst Published May 9, 2019, 12:25 PM IST
Highlights

ಸಿಂಪಲ್ ಆ್ಯಂಡ್ ಟ್ಯಾಲೆಂಟೆಡ್ ನಟಿ ಸಾಯಿ ಪಲ್ಲವಿ ಇಂದಿಗೆ 27 ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ರೌಡಿ ಬೇಬಿ ಬಗ್ಗೆ ಗೊತ್ತಿರದ ಕೆಲವೊಂದು ವಿಚಾರಗಳು ಇಲ್ಲಿದೆ.

ಸಿಂಪ್ಲಿಸಿಟಿ, ನ್ಯಾಚುರಲ್ ಹಾಗೂ ಹಂಬಲ್ ಹುಡುಗಿ ಸಾಯಿ ಪಲ್ಲವಿ ಸೌತ್ ಇಂಡಿಯಾ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಬ್ಯೂಟಿ ವಿತ್ ಬ್ರೇನ್ ಎಂದರೆ ತಪ್ಪಾಗದು ನೋಡಿ. ಮಲ್ಲರ್ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.

2 ಕೋಟಿ ಆಫರನ್ನು ನಿರಾಕರಿಸಿದ್ರಾ ಸಾಯಿಪಲ್ಲವಿ?

- ಪಲ್ಲವಿ ಸರ್ಟಿಫೈಡ್ ಡ್ಯಾನ್ಸ್ ಟ್ರೇನಿಂಗ್ ಪಡೆದಿಲ್ಲ. ಬಾಲಿವುಡ್ ನ ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ನೋಡಿ ಕಲಿತುಕೊಂಡಿದ್ದಾರೆ.

- ಈ ನಟಿ ಕೇರಳದವರಲ್ಲ ಆದರೆ ಪ್ರತಿ ವರುಷ ಓಣಂ ಹಬ್ಬವನ್ನು ತಪ್ಪದೇ ಆಚರಿಸುತ್ತಾರೆ.

- ಪಲ್ಲವಿಯ ರೇರ್ ಟ್ಯಾಲೆಂಟ್ ಬಾದಾಗ ಭಾಷೆಯಲ್ಲಿ ಮಾತನಾಡುವುದು. ಬಾದಾಗ ಅನ್ನುವುದೊಂದು ಅಪರೂಪದ ಸಮುದಾಯ. ಆ ಜನಾಂಗಕ್ಕೆ ಸೇರುವ ಸಾಯಿ ಪಲ್ಲವಿಗೆ ಈ ಭಾಷೆಯನ್ನು ಬರೆಯಲು ಹಾಗೂ ಓದಲು ಬರುತ್ತದೆ.

- ಸಾಯಿ ಪಲ್ಲವಿ ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ನಟಿ ಆಗಿಲ್ಲದಿದ್ದರೆ ಕಾರ್ಡಿಯಾಲಜಿಸ್ಟ್ ಆಗುತ್ತಿದ್ದರು.

- ಸಾಯಿ ಪಲ್ಲವಿ ಮೊದಲ ಸಿನಿಮಾ ‘ಧಾಮ್ ಧೂಮ್’ನಲ್ಲಿ ಕಂಗನಾ ರಾಣಾವತ್ ಗೆ ಜೊತೆಯಾಗಿ ನಟಿಸಿದ್ದಾರೆ.

click me!