ಶಾರುಖ್ ಖಾನ್ ದೇಶ ಪ್ರೇಮಿನಾ..? ದೇಶ ದ್ರೋಹಿನಾ..? ಇಲ್ಲಿದೆ ನಿದರ್ಶನ

Published : Feb 01, 2018, 09:11 PM ISTUpdated : Apr 11, 2018, 01:02 PM IST
ಶಾರುಖ್ ಖಾನ್ ದೇಶ ಪ್ರೇಮಿನಾ..? ದೇಶ ದ್ರೋಹಿನಾ..? ಇಲ್ಲಿದೆ ನಿದರ್ಶನ

ಸಾರಾಂಶ

ಶಾರುಖ್ ಖಾನ್ ಸೈನ್ಯ ಸೇರಿ ದೇಶಸೇವೆ ಮಾಡಬೇಕೆಂದು ಬಯಸಿದ್ದರಂತೆ, ಆದರೆ ವಿಧಿ ಬೇರೆಯದ್ದೇ ಪ್ಲಾನ್ ಮಾಡಿತ್ತು.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ದೇಶ-ವಿದೇಶಗಳಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಡೆಲ್ಲಿಯಿಂದ ಮುಂಬೈಗೆ ಬಂದ ಬಾಲಕ ಮುಂದೊಂದು ದಿನ ಯಾರೂ ನಿರೀಕ್ಷಿಸದ ಮಟ್ಟಿಗೆ ಬೆಳೆದು ನಿಂತದ್ದೇ ಒಂದು ಅಚ್ಚರಿ. ಕೆಲ ತಿಂಗಳುಗಳ ಹಿಂದಷ್ಟೇ ಭಾರತದಲ್ಲಿ ಅಸಹಿಸ್ಣುತೆ ಇದೆ ಎಂದು ಹೇಳುವ ಮೂಲಕ 'ದೇಶಭಕ್ತರ' ಕೆಂಗಣ್ಣಿಗೆ ಕೂಡಾ ಗುರಿಯಾಗಿದ್ದರು. ನೀವೂ ಶಾರುಖ್ ಖಾನ್ ಅವರನ್ನು ಇಷ್ಟಪಡಿ ಇಲ್ಲವೇ ಬಿಡಿ ಆದರೆ, ಅವರ ಬದುಕಿನ ಈ ಸತ್ಯ ತಿಳಿದರೆ ಶಾರುಖ್ ಬಗ್ಗೆ ನಿಮ್ಮ ಅಭಿಪ್ರಾಯ ಬೇರೆಯದ್ದೇ ಆಗಬಹುದು...

1. ಶಾರುಖ್ ವಿಶ್ವದ 2ನೇ ಶ್ರೀಮಂತ ನಟ. ಹಾಲಿವುಡ್'ನ ಟಾಮ್ ಕ್ರ್ಯೂಸ್, ಕ್ಲಿಂಟ್ ಈಸ್ಟ್'ವುಡ್, ಟಾಮ್ ಹಾಂಕ್ಸ್'ರಂತಹ ದಿಗ್ಗಜರನ್ನು ಮೀರಿಸಿ ಕಿಂಗ್ ಖಾನ್ ಬೆಳೆದಿದ್ದಾರೆ. ಅವರ ಆಸ್ತಿ ಅಂದಾಜು 600 ಮಿಲಿಯನ್ ಡಾಲರ್(3084 ಕೋಟಿ ರು).

2. ಶಾರುಖ್ ಖಾನ್ ಸೈನ್ಯ ಸೇರಿ ದೇಶಸೇವೆ ಮಾಡಬೇಕೆಂದು ಬಯಸಿದ್ದರಂತೆ, ಆದರೆ ವಿಧಿ ಬೇರೆಯದ್ದೇ ಪ್ಲಾನ್ ಮಾಡಿತ್ತು.

3. ಶಾರುಖ್ ನಿಜ ಜೀವನದಲ್ಲೂ ರೊಮ್ಯಾಂಟಿಕ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. 18ನೇ ವಯಸ್ಸಿನಲ್ಲೇ ಹಿಂದು ಧರ್ಮದ ಗೌರಿಯನ್ನು ನೋಡಿ ಪ್ರೀತಿಗೆ ಬಿದ್ದ ಬಾಲಿವುಡ್ ಬಾದ್'ಶಹ 23 ವರ್ಷಗಳಿಂದ ತುಂಬು ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ.

5. ಶಾರುಖ್ ಅವರ ಈ ನಡೆಗೆ ಹ್ಯಾಟ್ಸ್'ಅಪ್ ಹೇಳಲೇಬೇಕು. ಶಾರುಖ್ ಮುಸ್ಲಿಂ ಧರ್ಮದಲ್ಲಿ ನಂಬಿಕೆಯಿಟ್ಟಿದ್ದರೂ, ಅವರ ಮನೆಯಲ್ಲಿ ದೀಪಾವಳಿ, ಲಕ್ಷ್ಮಿ ಪೂಜೆ, ಕ್ರಿಸ್'ಮಸ್ ಅದ್ಧೂರಿಯಾಗಿ ನಡೆಯುತ್ತದೆ. ಅವರು ಮಕ್ಕಳಿಗೂ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವಂತೆ ತಿಳಿ ಹೇಳುತ್ತಾರಂತೆ.

6. ಶಾರುಖ್'ಗೆ ಅಷ್ಟೇನು ಚೆನ್ನಾಗಿ ಹಿಂದಿ ಭಾಷೆಯ ಮೇಲೆ ಹಿಡಿತವಿರಲಿಲ್ಲವಂತೆ. ಹಿಂದಿ ಸಿನಿಮಾ ನೋಡುತ್ತಾ ನೋಡುತ್ತಾ ಹಿಂದಿ ಕಲಿತಿದ್ದು.

7. ಶಾರುಖ್ ಕೇವಲ ನಟ ಮಾತ್ರವಲ್ಲ. ಓರ್ವ ಕ್ರೀಡಾಪಟು ಕೂಡಾ ಹೌದು. ಶಾಲಾ ಹಂತದಲ್ಲಿ ಕ್ರಿಕೆಟ್'ನಲ್ಲಿ ವಲಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದಾರೆ. ಇನ್ನು ಅವರಿಗೆ ಪುಸ್ತಕ ಓದುವುದೆಂದರೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುತ್ತಾರೆ.

8. ಶಾರುಕ್ 15 ವಯಸ್ಸಿನಲ್ಲಿದ್ದಾಗ ತಂದೆಯನ್ನು ಕಳೆದುಕೊಂಡರು. ಇನ್ನು 25ನೇ ವಯಸ್ಸಿನಲ್ಲಿ ತಾಯಿಯನ್ನೂ ಕಳೆದುಕೊಂಡರು. ಇಂತಹ ಸಂದರ್ಭದಲ್ಲಿ ತಂದೆ-ತಾಯಿಯ ಮಾರ್ಗದರ್ಶನವಿಲ್ಲದೇ ಮಕ್ಕಳು ದಾರಿತಪ್ಪುವ ಸಾಧ್ಯತೆಗಳೇ ಹೆಚ್ಚು. ಆದರೆ ಶಾರುಖ್ ಓರ್ವ ದಂತಕತೆಯಾಗಿ ನಮ್ಮ ಮುಂದಿದ್ದಾರೆ.

 9. ಶಾರುಖ್ ಖಾನ್ ಬಾಲಿವುಡ್ ಸ್ಟಾರ್ ಆಗುವ ಮುನ್ನ ದೆಹಲಿಯ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದರು.

10. ಶಾರುಖ್ ಖಾನ್ ಮೊದಲ ದುಡಿಮೆಯ ಸಂಬಳ 50 ರುಪಾಯಿ. ಆ ಹಣದಲ್ಲಿ ಟ್ರೈನ್ ಟಿಕೆಟ್ ಕೊಂಡು ತಾಜ್ ಮಹಲ್ ನೋಡಲು ಆಗ್ರಾ ಹೋಗಿದ್ದರಂತೆ.

11. ಶಾರುಖ್ ಮೊದಲ ಸಿನೆಮಾ 'ಕಬಿ ಹಾ, ಕಬಿ ನಾ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಸಿನೆಮಾ ಥಿಯೇಟರ್ ಕೌಂಟರ್'ನಲ್ಲಿ ಟಿಕೆಟ್ ಕೂಡ ಮಾರಿದ್ದಾರಂತೆ. ಆ ಸಿನಿಮಾಗೆ ಸಿಕ್ಕ ಸಂಭಾವನೆ  25,000 ರುಪಾಯಿಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!