ಕರುಣಾನಿಧಿಗೆ ’ಕಲೈನರ್’ ಅನ್ನುವುದ್ಯಾಕೆ? ಅದಕ್ಕೆ ಈ ಚಿತ್ರಗಳೇ ಸಾಕ್ಷಿ

Published : Aug 08, 2018, 11:11 AM ISTUpdated : Aug 08, 2018, 11:46 AM IST
ಕರುಣಾನಿಧಿಗೆ ’ಕಲೈನರ್’ ಅನ್ನುವುದ್ಯಾಕೆ? ಅದಕ್ಕೆ ಈ ಚಿತ್ರಗಳೇ ಸಾಕ್ಷಿ

ಸಾರಾಂಶ

ಕರುಣಾನಿಧಿ ಒಬ್ಬ ರಾಜಕಾರಣಿ ಮಾತ್ರವಲ್ಲ, ಅವರೊಳಗೊಬ್ಬ ಅದ್ಭುತ ಕಲಾವಿದನಿದ್ದ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಅವರು ಸಂಭಾಷಣಾಕಾರರಾಗಿದ್ದರು. ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. ಸಕಲಕಲಾ ವಲ್ಲಭರಾಗಿದ್ದರು. ಹಾಗಾಗಿ ಇವರಿಗೆ ’ಕಲೈನರ್’ (Scholar Of Art)  ಎಂದು ಕರೆಯುತ್ತಾರೆ.  ಇವರ ಪ್ರತಿಭೆಗೆ ಸಾಕ್ಷಿಯಗಿದೆ ಈ ಚಿತ್ರಗಳು.

ಚೆನ್ನೈ (ಆ. 08): ಕರುಣಾನಿಧಿ ಒಬ್ಬ ರಾಜಕಾರಣಿ ಮಾತ್ರವಲ್ಲ, ಅವರೊಳಗೊಬ್ಬ ಅದ್ಭುತ ಕಲಾವಿದನಿದ್ದ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಅವರು ಸಂಭಾಷಣಾಕಾರರಾಗಿದ್ದರು. 

ಕರುಣಾನಿಧಿಯವರ ಉತ್ತಮ ಚಿತ್ರಗಳಿವು

ರಾಜಕುಮಾರಿ (1947): ಕರುಣಾನಿಧಿ 23 ನೇ ವಯಸ್ಸಿಗೆ ಸಿನಿಮ ಜಗತ್ತಿಗೆ ಪ್ರವೇಶಿಸಿದರು. ತಮ್ಮೊಳಗಿನ ಕಲೆಗೆ ಪೆನ್ನು ಕೊಟ್ಟರು. ಅವರ ಲೇಖನಿಯಿಂದ ಅದ್ಭುತವಾದ ಸಂಭಾಷಣೆ ಮೂಡಿಬಂತು. ಅದನ್ನು ರಾಜಕುಮಾರಿಯಲ್ಲಿ ನೋಡಬಹುದು. 

ಮಂಥಿರಿ ಕುಮಾರಿ (1950): ಇದು ತಮಿಳು ಮಹಾಕಾವ್ಯ ಕುಂಡಲೇಕೇಸಿ ಆಧಾರಿತವಾದದ್ದು.  ಎಂಜಿಆರ್ ಗೆ ಯಶಸ್ಸನ್ನು ತಂದುಕೊಟ್ಟ ಚಿತ್ರ. ಇದು ಕರುಣಾನಿಧಿ ಟ್ಯಾಲೆಂಟ್ ಗೆ ಹಿಡಿದ ಕೈ ಗನ್ನಡಿಯಾಗಿತ್ತು. 50 ರ ದಶಕದಲ್ಲಿ ಹಿಟ್ ಚಿತ್ರವಾಗಿತ್ತು. 

ಪರಶಕ್ತಿ (1952): ಶಿವಾಜಿ ಗಣೇಶನ್ ಹಾಗೂ ಎಸ್ ಎಸ್ ರಾಜೇಂದ್ರನ್ ಈ ಚಿತ್ರವನ್ನು ನೆನಪಿನಲ್ಲಿಡುವಂತೆ ಮಾಡಿದರು. ಈಗಲೂ ಇದು ಅತ್ಯುತ್ತಮ ಚಿತ್ರ ಎನ್ನುವುದರಲ್ಲಿ ಅನುಮಾನವಿಲ್ಲ. 

ಮನೋಹರ (1954): ಅರಮನೆಯೊಳಗೆ ಹೇಗೆಲ್ಲಾ ಪಿತೂರಿ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. 

ರಂಗೂನ್ ರಾಧಾ (1956): ಶಿವಾಜಿ ಗಣೇಶನ್ ಅಭಿನಯದ ತ್ಯುತ್ತಮ ಚಿತ್ರಗಳಲ್ಲಿ ಇದು ಒಂದು. ಸರಳವಾದ ಕಥೆ ಮೂಲಕ ಭಾವನೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಕರುಣಾನಿಧಿ. 

ಇರುವರ್ ಉಲ್ಲಮ್  (1963): ಕರುಣಾನಿಧಿ ಉತ್ತಮ ಕಥೆಗಾರರು, ಸಂಭಾಷಣೆಗಾರರು ಮಾತ್ರವಲ್ಲ. ಆಯಾ ಕಾಲಕ್ಕೆ ತಕ್ಕಂತೆ, ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡುವುದರಲ್ಲೂ ನಿಸ್ಸೀಮರು. 

ಪಿಲ್ಲಯೋ ಪಿಲ್ಲೈ (1972): ಇದು 70 ರ ದಶಶದಲ್ಲಿ ಬಾರೀ ಸದ್ದು ಮಾಡಿದ ಚಿತ್ರವಿದು. 

ನ್ಯಾಯ ತರಸು (1989): ಮಹಿಳಾ ಪ್ರಧಾನ ಚಿತ್ರ ಇದಾಗಿದೆ. 

ಉಲಿಯಿನ್ ಓಸಾಯಿ (2008): ಇದು ಹೇಳಿಕೊಳ್ಳುವ ಚಿತ್ರವಾಗದಿದ್ದರೂ ಕಲೈನರ್ ಡೈಲಾಗ್ ಡಿಲೆವರಿ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುವಂತಿತ್ತು.  

ಪೊನ್ನರ್ ಶಂಕರ್ (2011): ಇದು ಕರುಣಾನಿಧಿಯವರ ಕೊನೆ ಚಿತ್ರ. ನಟ ಪ್ರಶಾಂತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!