
ಮುಂಬೈ (ಆ. 06): ಇಶಾ ಗುಪ್ತಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆಯಲ್ಲಿ ಸುತ್ತಾಡಿದ್ದೆಲ್ಲವನ್ನೂ ಕಂಡಿದ್ದ ಮಂದಿ ಇಬ್ಬರೂ ಮದುವೆಯಾಗುತ್ತಾರೆ. ಅವರಿಬ್ಬರ ನಡುವೆ ಲವ್ವಾಗಿದೆ ಎಂದೆಲ್ಲಾ ಅಂದುಕೊಂಡಿದ್ದು ಹಳೆಯ ಮಾತು. ಈಗ ಆ ಬಗ್ಗೆ ಖುದ್ದು ಇಶಾ ಗುಪ್ತಾ ಮೊಟ್ಟ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.
‘ಓಹ್ ಮೈ ಗಾಡ್, ನನ್ನ ಬಳಿ ಯಾರೇ ಬಂದು ಮದುವೆ ಬಗ್ಗೆ ಮಾತಾಡಿದರೆ ನಾನು ಈಗಲೇ ಮದುವೆಯಾಗಲ್ಲ ಎಂದೇ ಹೇಳಿಕೊಂಡು ಬಂದಿದ್ದೇನೆ. ಹಾಗೆ ಮದುವೆಯಾಗುವಾಗ ನಾನೇ ಖುದ್ದಾಗಿ ತಿಳಿಸುವೆ. ಅಲ್ಲಿಯವರೆಗೂ ಮದುವೆ ಬಗ್ಗೆ ಮಾತಾಡುವುದು, ಅದನ್ನೇ ಗಾಸಿಪ್ ಮಾಡುವುದು ಬೇಡ. ನನ್ನ ಮದುವೆ ಸಬ್ಜೆಕ್ಟ್ ಕಾಮಿಡಿ ರೀತಿ ಆಗಬಾರದು’ ಎಂದು ಖಾರವಾಗಿ ಹೇಳುವ ಮೂಲಕ ಮದುವೆ ಪ್ರಸ್ತಾವವನ್ನು ಮುಂದಕ್ಕೆ ಹಾಕಿದ್ದಾರೆ ಎಂಬುದು ಹೌದಾದರೂ ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ.
ಹಾಗಾಗಿ ಇಬ್ಬರ ನಡುವಲ್ಲಿ ಲವ್ವಾಗಿದೆ ಎನ್ನುವ ನಂಬಿಕೆಗೆ ಬ್ರೇಕ್ ಬಿದ್ದಿಲ್ಲ. ಆದರೆ ಮದುವೆ ಮಾತ್ರ ಸದ್ಯಕ್ಕಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಖಡಕ್ ಆಗಿ ರವಾನಿಸುವಲ್ಲಿ ಇಶಾ ಗುಪ್ತಾ ಯಶಸ್ವಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.