ಸೆಲಿಬ್ರಿಟಿ ಬಾಡಿಗಾರ್ಡ್ ಆಗುವುದು ಎಷ್ಟು ಕಷ್ಟ? ಎಷ್ಟು ‘ಸುಖ’?

First Published Jul 4, 2018, 1:29 PM IST
Highlights

ಬಾಡಿಗಾರ್ಡ್ ಲೈಫ್ ಬಗ್ಗೆ ನಿಮಗೆಷ್ಟು ಗೊತ್ತು? 

ಸೆಲಿಬ್ರಿಟಿ ಸಿಕ್ರೇಟ್ಸ್ ಬಿಚ್ಚಿಟ್ಟ ಬಾಡಿಗಾರ್ಡ್

ಸೆಲಿಬ್ರಿಟಿಗಳು ಬಾಡಿಗಾರ್ಡ್ ಇಂದ ಬಯಸುವುದೇನು?

ಪಾರ್ಟಿಗಳಲ್ಲಿ ಏನೆನಾಗುತ್ತೆ ಅನ್ನೋದು ಇವರಿಗೆ ಗೊತ್ತು
 

ಮುಂಬೈ(ಜು.4): ತೆರೆ ಮೇಲೆ ರಾಜಾರೋಷವಾಗಿ ವಿಜೃಂಭಿಸುವ ಚಿತ್ರನಟರು, ತೆರೆಯ ಹಿಂದೆ ತಮ್ಮ ಅಭಿಮಾನಿಗಳನ್ನು ಭೇಟಿಯಾದರೂ ಅದು ತಮ್ಮ ಬಾಡಿಗಾರ್ಡ್ ಜೊತೆಗೆ ಮಾತ್ರ. ಸ್ಯಾಂಡಲ್‌ವುಡ್ ಸೇರಿದಂತೆ ಭಾರತೀಯ ಚಿತ್ರ ರಂಗದ ಬಹುತೇಕ ನಟ, ನಟಿಯರು ಸಾರ್ವಜನಿಕವಾಗಿ ತಿರುಗಾಡಲು ಬಾಡಿಗಾರ್ಡ್ ಸಹಾಯ ಬೇಕೆ ಬೇಕು.

ಆದರೆ ತಮ್ಮ ಮೆಚ್ಚಿನ ನಟ, ನಟಿಯನ್ನು ಕಣ್ತುಂಬಿಕೊಳ್ಳಲು ತವಕಿಸುವ ಅಭಿಮಾನಿಗಳು ಅವರ ರಕ್ಷಣೆಯಲ್ಲಿ ನಿರತರಾಗಿರುವ ಬಾಡಿಗಾರ್ಡ್ ಕುರಿತು ಯೋಚಿಸುವುದೇ ಇಲ್ಲ. ಬಾಡಿಗಾರ್ಡ್ ಅಂದ್ರೆ ಯಾರು?, ಎಲ್ಲಿಂದ ಬಂದವರು?, ಇವರ ಕೆಲಸವೇನು?, ಇವರನ್ನು ಹೇಗೆ ಸೆಲಿಬ್ರಿಟಿಗಳ ಬಾಡಿಗಾರ್ಡ್ ಆಗಿ ನೇಮಿಸಲಾಗುತ್ತದೆ ಎಂಬುದರ ಕುರಿತು ಗೊತ್ತಿರುವವರು ತುಂಬ ಕಡಿಮೆ.

ಚಿತ್ರ ನಟ, ನಟಿಯರಷ್ಟೇ ಅಲ್ಲ, ಶ್ರೀಮಂತರು, ಖ್ಯಾತ ಉದ್ಯಮಿಗಳು ಹೀಗೆ ಎಲ್ಲಾ ರೀತಿಯ ಸೆಲಿಬ್ರಿಟಿಗಳೂ ಬಾಡಿಗಾರ್ಡ್ ಇಟ್ಟುಕೊಂಡಿರುತ್ತಾರೆ. ಇದೊಂತರಾ ಫ್ಯಾಶನ್ ಆಗಿದೆ ಎಂದರೂ ತಪ್ಪಲ್ಲ. ಆದರೆ ಈ ಬಾಡಿಗಾರ್ಡ್ ಜೀವನ ಶೈಲಿ, ಅವರ ಖಾಸಗಿ ಜೀವನದ ಬಗ್ಗೆ ತಿಳಿಯುವ ಕುತೂಹಲ ಕಡಿಮೆ. ಆದರೆ ಈ ಬಾಡಿಗಾರ್ಡ್ ಮಾತ್ರ ಈ ಸೆಲಿಬ್ರಿಟಿಗಳ ಬಹುತೇಕ ಖಾಸಗಿ ವಿಷಯಗಳನ್ನು ಬಲ್ಲವರಾಗಿರುತ್ತಾರೆ ಎಂಬುದು ಕೆಲವರಿಗಾದರೂ ಕುತೂಹಲ ಮೂಡಿಸಬಹುದು.

ಈ ಕುರಿತು ಕಾಸ್ಮೋಪೊಲಿಟಿನ್ ಬಾಡಿಗಾರ್ಡ್ ವೋರ್ವನ  ಸಂದರ್ಶನ ನಡೆಸಿದ್ದು, ಹಸೆರು ಹೇಳಲು ಇಚ್ಛಿಸದ ಈ ಬಾಡಿಗಾರ್ಡ್, ತಮ್ಮ 20 ವರ್ಷಗಳ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಲಿಬ್ರಿಟಿಗಳು ಮತ್ತು ಬಾಡಿಗಾರ್ಡ್ ನಡುವಿನ ಸಂಬಂಧ ಎಂತದ್ದು?, ಬಾಡಿಗಾರ್ಡ್‌ಗಳಿಂದ ಸೆಲಿಬ್ರಿಟಿಗಳು ಏನನ್ನು ನಿರೀಕ್ಷಿಸುತ್ತಾರೆ ಎಂಬೆಲ್ಲಾ ವಿಷಯಗಳ ಮೇಲೆ ಈ ಬಾಡಿಗಾರ್ಡ್ ಬೆಳಕು ಚೆಲ್ಲಿದ್ದಾರೆ.

ಬಹುತೇಕ ಸೆಲಬ್ರಿಟಿಗಳು ತಮ್ಮ ಇಷ್ಟದ ಬಾಡಿಗಾರ್ಡ್‌ಗಳನ್ನು ಬೇರೊಬ್ಬ ಸೆಲಿಬ್ರಿಟಿಗೆ ಶಿಫಾರಸ್ಸು ಮಾಡುತ್ತಾರೆ ಅಂದರೆ ತಮ್ಮ ಇಷ್ಟದ ಬಾಡಿಗಾರ್ಡ್‌ನ್ನು ಅವರನ್ನು ನೇಮಿಸಿದ ಕಂಪನಿಯ ಮೂಲಕ ಮತ್ತೊಬ್ಬ ಸೆಲಿಬ್ರಿಟಿಗೆ ನೇಮಕಗೊಳ್ಳುವಂತೆ ಶಿಫಾರಸ್ಸು ಮಾಡುತ್ತಾರೆ. ಈ ಮೂಲಕ ಬಾಡಿಗಾರ್ಡ್ಗಳನ್ನು ನೇಮಿಸುವ ಕಂಪನಿ ಕೂಡ ಪ್ರಸಿದ್ದಿ ಪಡೆಯುತ್ತದೆ.

ಬಾಡಿಗಾರ್ಡ್‌ಗಳು ತಮ್ಮ ಸಮಯಕ್ಕೆ ಹೊಂದಿಕೊಳ್ಳುವುದನ್ನು ಸೆಲಿಬ್ರಿಟಿಗಳು ಬಯಸುತ್ತಾರೆ. ಅಂದರೆ ಅವರ ಜೀವನ ಶೈಲಿ, ಅವರ ನಿತ್ಯದ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಬಾಡಿಗಾರ್ಡ್ ಕೂಡ ಸಮಯವನ್ನು ಹೊಂದಿಸಿಕೊಳ್ಳಬೇಕು. ವೈಯಕ್ತಿಕ ಜೀವನವನ್ನು ಬದಿಗಿರಿಸಿ ಸೆಲಿಬ್ರಿಟಿಗಳ ಬದುಕನ್ನೇ ತಮ್ಮದಾಗಿಸಿಕೊಳ್ಳುವ ಕಷ್ಟದ ಕೆಲಸ ಇದು.

ಬಾಡಿಗಾರ್ಡ್ಗಳು ನೇಮಕವಾಗುವುದು ಕೇವಲ ಆ ವ್ಯಕ್ತಿಯ ದೈಹಿಕ ರಕ್ಷಣೆಗೋಸ್ಕರ ಮಾತ್ರ. ಆದರೆ ಕೆಲವು ಸೆಲಿಬ್ರಿಟಿಗಳು ದೇಶ ವಿದೇಶ ಸುತ್ತುವಾಗ ಅವರ ಲಗೇಜ್ ನೋಡಿಕೊಳ್ಳಲು, ಪ್ರೇಯಸಿಯನ್ನೋ ಮಕ್ಕಳನ್ನೋ, ಗೆಳೆಯರ ಸಂಬಂಧಿಕರನ್ನೋ ನೋಡಿಕೊಳ್ಳುವಂತೆ ಒತ್ತಡ ಹೇರುತ್ತಾರೆ. ಆದರೆ ಸೆಲಿಬ್ರಿಟಿಗಳ ಬಾಡಿಗಾರ್ಡ್ ಆಗಿ ನೇಮಕವಾಗುವುದರಿಂದ ವಿದೇಶಗಳನ್ನು ಸುತ್ತುವ ಅವಕಾಶವೂ ಸಿಗುತ್ತದೆ ಎನ್ನುತ್ತಾರೆ ಈ ಬಾಡಿಗಾರ್ಡ್.

ಕೆಲವೊಮ್ಮೆ ಪಾರ್ಟಿಗಳಲ್ಲಿ ಆಗುವ ಅನಾಹುತಗಳನ್ನು ಬಾಡಿಗಾರ್ಡ್ ಸಂಭಾಳಿಸಬೇಕಾಗುತ್ತದೆ. ಪಾರ್ಟಿಗಳಲ್ಲಿ ಕೆಲವು ಸೆಲಿಬ್ರಿಟಿಗಳು ಮಾದಕವಸ್ತು ಸೇವನೆ ಮಾಡಿ ಅಚಾತುರ್ಯ ಸೃಷ್ಟಿಸುತ್ತಾರೆ. ಒಂದು ವೇಳೆ ಪೊಲೀಸ್ ತನಿಖೆ ಏನಾದರೂ ನಡೆದರೆ ಮೊದಲು ಬಾಡಿಗಾರ್ಡ್ ಗಳನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಕಾರಣ ಒಳಗೇನು ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಅವರು ಸುಮ್ಮನಿರುವ ಆರೋಪ ಎದುರಿಸಬೇಕಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಲೋಕಾಭಿರಾಮವಾಗಿ ಹರಟುವ ಸೆಲಿಬ್ರಿಟಿಗಳು, ಅದೇ ಅಭಿಮಾನಿ ಎದುರಿಗೆ ಬಂದಾಗ ಅಂತರ ಕಾಯ್ದುಕೊಳ್ಳುತ್ತಾರೆ. ಅಭಿಮಾನಿಗಳಿಂದ ಇವರನ್ನು ರಕ್ಷಿಸಲೆಂದೇ ಬಾಡಿಗಾರ್ಡ್ ಗಳನ್ನು ನೇಮಿಸಲಾಗಿರುತ್ತದೆ. ಆದರೆ ಏನಾದರೂ ಅಚಾತುರ್ಯ ನಡೆದರೆ ಅಭಿಮಾನಿಗಳು ಕೂಡ ಬಡಿಗಾರ್ಡ್ಗಳನ್ನೇ ದೂರುತ್ತಾರೆ. ಒಟ್ಟಿನಲ್ಲಿ ಇದೊಂದು ಚಾಲೆಂಜಿಂಗ್ ಪ್ರೋಫೆಶನ್ ಆಗಿದ್ದು, ಹೆಚ್ಚಿನ ದೈಹಿಕ ಮತ್ತು ಮಾನಸಿಕ ಸದೃಡತೆ ಬಯಸುವ ಕ್ಷೇತ್ರವಾಗಿದೆ.            

click me!