
1. ನಾನು ಪಕ್ಕಾ ಬೆಂಗಳೂರು ಹುಡುಗಿ. ಅಪ್ಪ-ಅಮ್ಮ ಗುಜರಾತಿ. ನಾನು ಮಾತ್ರ ಹುಟ್ಟಿ, ಬೆಳೆದಿದ್ದು ಬೆಂಗಳೂರು. ಕ್ರೈಸ್ಟ್ ಕಾಲೇಜಿನಲ್ಲಿ ಮೈಕ್ರೋಬಯಲಾಜಿ ಪದವಿ ಮುಗಿಸಿ, ಮುಂದೇನು ಎನ್ನುವಾಗ ಮತ್ತೆ ಮಾಸ್ ಮೀಡಿಯಾ ತೆಗೆದುಕೊಂಡೆ. ಅದು ಮುಗಿಸಿ, ಆಸಕ್ತಿಯಿಂದ ಆ್ಯಂಕರಿಂಗ್ ಆಯ್ಕೆ ಮಾಡಿಕೊಂಡೆ. ಕಾರ್ಪೋರೇಟ್ ಕಂಪನಿಯಲ್ಲಿ ಫ್ರೀಲ್ಯಾನ್ಸ್ ಆಗಿ ಆ್ಯಂಕರಿಂಗ್ ಮಾಡುತ್ತಿದ್ದಾಗ, ಪರಿಚಯದವರ ಮೂಲಕ ಸಿಕ್ಕ ಅವಕಾಶವೇ ಸಂಕಷ್ಟಕರ ಗಣಪತಿ ಚಿತ್ರ.
2. ನಟಿ ಆಗ್ತೇನೆ ಅಂತ ಕನಸು ಕೂಡ ಕಂಡವಳಲ್ಲ ನಾನು. ಯಾಕಂದ್ರೆ, ನಂಗಿಲ್ಲ ಯಾವುದೇ ಬ್ಯಾಕ್‌ಗ್ರೌಂಡ್ ಇರಲಿಲ್ಲ. ಓದ್ಬೇಕು, ಒಳ್ಳೆಯ ಜಾಬ್‌ಗೆ ಹೋಗ್ಬೇಕು ಎನ್ನುವುದಷ್ಟೇ ನನ್ನ ತಲೆಯಲ್ಲಿತ್ತು. ಆದ್ರೆ ಎಲ್ಲವೂ ನಾವಂದುಕೊಂಡಂತೆಯೇ ಆಗೋದಿಲ್ಲ. ಹಣೆಬರಹ ಅನ್ನೋದು ಇರುತ್ತೆ.ಆ್ಯಂಕರಿಂಗ್ ಆಯ್ತು ನಾನಾಯ್ತು ಎನ್ನುವ ಹಾಗಿದ್ದಾಗ ಒಂದು ದಿನ ನಿರ್ದೇಶಕ ಅರ್ಜುನ್ ಸಿಕ್ಕರು. ಸಿನಿಮಾ ಮಾಡ್ತೀದ್ದೀನಿ, ನೀವೇ ಅದಕ್ಕೆ ಹೀರೋಯಿನ್ ಅಂದ್ರು. ಒಂಥರ್ ಶಾಕ್ ಟ್ರಿಟ್‌ಮೆಂಟ್ ಅದು. ಆದ್ರೂ ಖುಷಿ ಆಯ್ತು.
3. ಶೂಟಿಂಗ್ ಅಂತ ನೋಡಿದ್ದೇ ಅದು ಮೊದಲು. ಆದ್ರೆ ಕ್ಯಾಮರಾ ಅನ್ನೋದು ಹೊಸದಲ್ಲ. ಸಾಕಷ್ಟು ಸ್ಟೇಜ್ ಪ್ರೋಗ್ರಾಮ್ ಮಾಡಿದ್ದೆ. ಆ ಅನು‘ವ ಇದ್ದೇ ಇತ್ತು. ಅಲ್ಲಿ ತುಸು ಚೇಂಜಸ್. ಕ್ಯಾಮರಾ ದೊಡ್ಡದು. ಸಾಕಷ್ಟು ಜನ, ಅವರೆದುರು ನಟನೆ. ಕೊಂಚ ‘ಯ ಎನಿಸಿತು. ಆದ್ರೆ ದಿನ ಕಳೆದಂತೆ ಎಲ್ಲವೂ ಸಹಜವೇ ಎನಿಸಿತು.
4. ಪ್ರಯೋಗಾತ್ಮಕ ಎಲ್ಲಾ ರೀತಿಯ ಪಾತ್ರಗಳ ನಂಗಿಷ್ಟ. ಇಂಥದ್ದೇ ಪಾತ್ರ ಬೇಕು ಅಂತ ಡಿಮ್ಯಾಂಡ್ ಮಾಡೋದು ನನಗೆ ಕಷ್ಟ. ಯಾಕಂದ್ರೆ ನಾನಿನ್ನು ಈಗಷ್ಟೇ ಇಲ್ಲಿಗೆ ಬಂದ ಹುಡುಗಿ. ಒಳ್ಳೆಯ ಪಾತ್ರಗಳ ಸಿಗಬೇಕು, ನಟಿ ಅಂತ ಗುರುತಿಸಿಕೊಳ್ಳಬೇಕು ಅನ್ನೋದು ನನ್ನಾಸೆ.
5. ನಟಿ ಅಂತ ಬಂದಾಗ ಗಾಡ್ ಫಾದರ್, ರೋಲ್ ಮಾಡೆಲ್ ಅಂತ ಇದ್ದೇ ಇರುತ್ತಾರೆ. ನಂಗೆ ಮಾತ್ರ ಆ ತರ ಇನ್ನು ಯಾರು ಗಾಡ್‌ಾದರ್ ಸಿಕ್ಕಿಲ್ಲ, ಹಾಗೆಯೇ ರೋಲ್ ಮಾಡೆಲ್ ಅಂತಲೂ ಯಾರು ಇಲ್ಲ.
-ದೇಶಾದ್ರಿ ಹೊಸ್ಮನೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.