
1. ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರು. ಪದವಿ ಮುಗಿದಿದೆ.
2. ನಟಿ ಆಗ್ಬೇಕು ಅನ್ನೋ ಹುಚ್ಚಿತ್ತಾದರೂ, ಇಷ್ಟು ಬೇಗ ಅದು ಈಡೇರಿದ್ದೇ ವಿಶೇಷ.
3. ಮೊದಲ ಚಿತ್ರದ ಚಿತ್ರೀಕರಣ ಮೊದಲ ದಿನ ಕ್ಯಾಮರಾ ಎದುರಿಸುವಾಗ ಸಹಜವಾಗಿಯೇ ಎಕ್ಸೈಟ್ ಆಗಿದ್ದೆ. ಭಯ ಎನ್ನುವುದಕ್ಕಿಂತ ಹೇಂಗಿರುತ್ತೆ ಆ ಕ್ಷಣ ಎನ್ನುವ ಕಾತುರ. ಆ ಕ್ಷಣಗಳು ಬಂದಾಗ ಆತಂಕದಲ್ಲೇ ಮೊದಲ ಸೀನ್‌ಗೆ ಅಭಿನಯಿಸಿದೆ. ಅದೃಷ್ಣ ಎನ್ನುವ ಹಾಗೆ ಅದು ಓಕೆ ಕೂಡ ಆಯಿತು. ಅಲ್ಲಿಂದ ಎಲ್ಲವೂ ಸಹಜ ಎನಿಸಿದವು.
4. ಇಂಥದ್ದೇ ಪಾತ್ರ ಅಂತೇನು ಇಲ್ಲ. ನಾನು ನೋಡ್ತಿರೋದು ನಟನೆಗೆ ಅವಕಾಶ ಇರುವಂತಹ ಪಾತ್ರಗಳನ್ನು. ಸದ್ಯಕ್ಕೀಗ ಅಂಥದ್ದೇ ಪಾತ್ರಗಳು ಸಿಕ್ಕ ಖುಷಿಯಿದೆ.
5. ರೋಲ್ ಮಾಡೆಲ್ ಅಂತ ನಿರ್ಧಿಷ್ಟವಾಗಿ ಇಂತಹವರೇ ಅಂತೇನು ಇಲ್ಲ. ಅನೇಕ ನಟಿಯರು ಸ್ಫೂರ್ತಿ ಆಗಿದ್ದಾರೆ. ಅವರ ಪ್ರಭಾವಕ್ಕೂ ಒಳಗಾಗಿದ್ದೇನೆ. ಆದರೂ ನನಗೆ ನಾನೇ ರೋಲ್ ಮಾಡೆಲ್.
-ದೇಶಾದ್ರಿ ಹೊಸ್ಮನೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.