ಇನ್ನೂ ಪತ್ತೆಯಾಗದ ಮೀನುಗಾರರು, ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

By Web Desk  |  First Published Mar 22, 2019, 4:14 PM IST

ಕಾರವಾರದ ಮೀನುಗಾರರು ದಿಟ್ಟ ತೀರ್ಮಾನವೊಂದನ್ನು ತೆಗೆ೪ದುಕೊಳ್ಳಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.


ಕಾರವಾರ[ಮಾ. 22]  ನಾಪತ್ತೆಯಾದ ಮೀನುಗಾರರು ಪತ್ತೆಯಾಗದ ಕಾರಣಕ್ಕೆ ಉತ್ತರಕನ್ನಡ ಮೀನುಗಾರರು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನ ಮಾಡಿದ್ದಾರೆ.

2018ರ  ಡಿಸೆಂಬರ್  13ಕ್ಕೆ ಸುವರ್ಣ ತ್ರಿಭುಜ ಭೋಟ್ ನಾಪತ್ತೆಯಾಗಿತ್ತು. ಉತ್ತರಕನ್ನಡದ 5, ಉಡಪಿಯ 2 ಇಬ್ಬರೂ ಮೀನುಗಾರರು ನಾಪತ್ತೆಯಾಗಿದ್ದು ಇನ್ನು  ಯಾವ ಸುಳಿವು ಸಿಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಸ್ಯೆಗೆ ಸ್ಪಂದಿಸದ ಕಾರಣ ಚುನಾವಣೆ ಬಹಿಷಷ್ಟಾರ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ. 

Latest Videos

undefined

ನಾಪತ್ತೆಯಾದ ಮೀನುಗಾರರ ಸುವರ್ಣ ತ್ರಿಭುಜ ಬೋಟ್

ಈ ಬಗ್ಗೆ ಚರ್ಚೆ ಮಾಡಲು  ಮಾರ್ಚ್ 25ರಂದು ಮೀನುಗಾರರು ಸಭೆ ಸೇರಲಿದ್ದಾರೆ. ಉತ್ತರ  ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನಂತ್ ಕುಮಾರ್  ಹೆಗಡೆ ಕಣಕ್ಕೆ ಇಳಿದರೆ ದೋಸ್ತಿಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಸ್ಪರ್ಧೆ ಒಡ್ಡಲಿದ್ದಾರೆ. ಏಪ್ರಿಲ್ 23 ರಂದು ಮತದಾನ ನಡೆಯಲಿದೆ.

click me!