ಕಪ್ಪ ಡೈರಿ: ಅಸಲಿ, ನಕಲಿ ಸಹಿ, ಕೈ ಬರಹಕ್ಕೆ ಪ್ರೂಫ್ ಕೊಟ್ಟ ರಾಜ್ಯ ಬಿಜೆಪಿ

Published : Mar 22, 2019, 03:29 PM ISTUpdated : Mar 22, 2019, 04:45 PM IST
ಕಪ್ಪ ಡೈರಿ: ಅಸಲಿ, ನಕಲಿ ಸಹಿ, ಕೈ ಬರಹಕ್ಕೆ ಪ್ರೂಫ್ ಕೊಟ್ಟ ರಾಜ್ಯ ಬಿಜೆಪಿ

ಸಾರಾಂಶ

ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿಯ ಅಸಲಿ, ನಕಲಿ ಸಹಿ, ಕೈ ಬರಹದ ಪ್ರೂಫ್ ಹಾಕಿ ರಾಜ್ಯ ಬಿಜೆಪಿ  ಟ್ವೀಟ್ ಮಾಡಿದೆ.

ಬೆಂಗಳೂರು, (ಮಾ. 22):  ರಾಜ್ಯದ ಖನೀಜ ಸಂಪತ್ತು ಲೂಟಿ ಮಾಡಿ ಯಡಿಯೂರಪ್ಪ ಅವರು ತಮ್ಮ ರಾಷ್ಟ್ರೀಯ ನಾಯಕರಿಗೆ ಕೋಟಿ ಕೋಟಿ ಹಣ ಕೊಟ್ಟಿದ್ದಾರೆ ಎನ್ನುವ ಆರೋಪದ ಸತ್ಯಾಸತ್ಯತೆಯನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. 

ಡೈರಿದಲ್ಲಿರುವ ಅಸಲಿ, ನಕಲಿ ಸಹಿ, ಕೈ ಬರಹಕ್ಕೆ ಪ್ರೂಫ್ ಹಾಕಿ ರಾಜ್ಯ ಬಿಜೆಪಿ  ಟ್ವೀಟ್ ಮಾಡಿದೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಕೇಂದ್ರ ನಾಯಕರಿಗೆ 1,800 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ. 

ಈ ಡೈರಿ ಆರೋಪಕ್ಕೆ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಡೈರಿ ನಕಲಿ, ಡೈರಿ ಬರಹ ಕಾಂಗ್ರೆಸ್ ನವರ ಸ್ಕ್ರಿಪ್ಟ್  ಡೈರಿಯ ಕೈಬರಹ, ಸಹಿ ಕೂಡ ನಕಲಿ ಎಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಮತ್ತು ಅವರ ನಾಯಕರು ವೈಚಾರಿಕವಾಗಿ ದಿವಾಳಿ ಆಗಿದ್ದಾರೆ. ಸಾರ್ವಜನಿಕವಾಗಿ ಚರ್ಚಿಸೋಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಹೀಗಾಗಿ ಈ ತರಹದ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಈ ವಿಚಾರಚಾಗಿ ವಿಚಾರಣೆ ನಡೆದು ಅವೆಲ್ಲ ನಕಲಿ ಅಂತಾ ಗೊತ್ತಾಗಿದೆ. ಆದರೂ ನಕಲಿ ಸುದ್ದಿಗಳನ್ನು ಹರಡುವ ಉದ್ದೇಶ ಹೊಂದಿದ್ದಾರೆ.

ಇದು ಅಪ್ರಸ್ತುತ ಮತ್ತು ಸುಳ್ಳಿನ ಕಂತೆಯಾಗಿದ್ದು, ಈ ವಿಚಾರವಾಗಿ ಕಾನೂನು ತಜ್ಞರ ಜೊತೆ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗುತ್ತೇನೆ ಎಂದು ತಿಳಿಸಿದರು.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!