ಗಡ್ಕರಿ ಬಳಿ ಕೋಟ್ಯಾಂತರ ಮೌಲ್ಯದ ಆಸ್ತಿ: ಕಿರಿಯ ವಯಸ್ಸಿಗೆ ಸಿಕ್ಕಿತ್ತು BJP ಅಧ್ಯಕ್ಷನ ಪಟ್ಟ!

By Web DeskFirst Published Mar 26, 2019, 5:12 PM IST
Highlights

ಕಿರಿಯ ವಯಸ್ಸಿಗೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಗಡ್ಕರಿ| ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾಗ್ಲುರದಿಂದ ಗಡ್ಕರಿಗೆ ಟಿಕೆಟ್|ಏಪ್ರಿಲ್.11ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಗಡ್ಕರಿ| ಬಿಜೆಪಿ ಹಿರಿಯ ನಾಯಕನ ಬಳಿ ಇರುವ ಆಸ್ತಿ ವಿವರ ಹೀಗಿದೆ.

ಮುಂಬೈ[ಮಾ.26]: ನಿತಿನ್ ಗಡ್ಕರಿ ಬಿಜೆಪಿಯ ದಿಗ್ಗಜ ನಾಯಕರಲ್ಲೊಬ್ಬರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಬಾರಿ ಗಡ್ಕರಿಗೆ ನಾಗ್ಪುರ ಸಂಸದೀಯ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದೆ. ಪ್ರಸ್ತುತ ನಿತಿನ್ ಗಡ್ಕರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ 52ನೇ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿ[ಬಿಜೆಪಿ]ಯ ಅಧ್ಯಕ್ಷ ಸ್ಥಾನಕ್ಕೇರಿದ್ದ ಗಡ್ಕರಿ ಅತಿ ಕಿರಿಯ ವಯಸ್ಸಿಗೆ ಈ ಸ್ಥಾನ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

'ಹುಷಾರ್....! ನನ್ನ ಕ್ಷೇತ್ರದಲ್ಲಿ ಜಾತಿ ವಿಚಾರ ಎತ್ತಿದ್ರೆ ಸುಮ್ನಿರಲ್ಲ'

2010 ರಿಂದ 2013ರರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಗಡ್ಕರಿ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಕಾಮರ್ಸ್[ಅರ್ಥಶಾಸ್ತ್ರ]ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಷ್ಟೇ ಅಲ್ಲದೇ ಕಾನೂನು ಹಾಗೂ ವ್ಯಾಪಾರ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಸಂಗ ನಡೆಸಿದ್ದಾರೆ. ಭಾರತದ ರಾಜಕೀಯ ಮುಖಂಡರಷ್ಟೇ ಅಲ್ಲದೆ, ಅವರೊಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ.

1976ರಲ್ಲಿ ಗಡ್ಕರಿಯವರು ನಾಗ್ಪುರ ವಿಶ್ವವಿದ್ಯಾನಿಲಯದಲ್ಲಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯ ಪಯಣ ಆರಂಭಿಸಿದ್ದರು. ಬಳಿಕ ತಮ್ಮ 23ನೇ ವಯಸ್ಸಿಗೆ ಬಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾದರು. ತಮ್ಮ ಉತ್ತಮ ವ್ಯಕ್ತಿತ್ವ ಹಾಗೂ ಎಲ್ಲರನ್ನೂ ಜೊತೆಗೂಡಿಸಿ ಮುನ್ನಡೆಯುವ ಪ್ರವೃತ್ತಿಯಿಂದ ಹಿರಿಯ ನಾಯಕರ ಮೆಚ್ಚುಗೆಗೆ ಪಾತ್ರರಾದರು.

1995ರಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಿದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಮಾಜಕಲ್ಯಾಣ ಸಚಿವರಾಗಿ ನೇಮಕಗೊಂಡರು ಹಾಗೂ ನಾಲ್ಕು ವರ್ಷಗಳವರೆಗೆ ಖಾತೆ ನಿಭಾಯಿಸಿದರು. ಮಂತ್ರಿಯಾಗಿ ತಮ್ಮ ಖಾತೆಯನ್ನು ಅತ್ಯುತ್ತಮವಾಗಿ ನಿಭಾಯಿಸಿದ ಗಡ್ಕರಿ ಜನರ ಪ್ರೀತಿಯನ್ನೂ ಗಳಿಸಿದರು.

1989ರಲ್ಲಿ ಗಡ್ಕರಿ ಮೊದಲ ಬಾರಿ ವಿದಾಣ ಪರಿಷತ್ ಗೆ ಆಯ್ಕೆಯಾದರು ಹಾಗೂ ಕಳೆದ 20 ವರ್ಷಗಳಿಂದ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗಡ್ಕರಿ ಆರಂಭದಿಂದಲೂ ರೈತ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ರಾಜಕೀಯದೊಂದಿಗೆ ಕೃಷಿ ಹಾಗೂ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. 

ನಿತಿನ್ ಗಡ್ಕರಿ ಆಸ್ತಿ ವಿವರ:

ಕೇಂದ್ರ ಸಚಿವ ನಿತಿನ್ ಗಡ್ಕರಿ ಈಗಾಗಲೇ ನಾಗ್ಪುರ ಲೋಕಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಬಳಿ ಒಟ್ಟು 25.12 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ಏಪ್ರಿಲ್ 11ರಂದು ನಾಗ್ಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಗಡ್ಕರಿ ಸೋಮವಾರದಂದು ನಾಮಪತ್ರ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಟ್ಯಾಕ್ಸ್ ರಿಟರ್ನ್ ಅರ್ಜಿಯನ್ವಯ 2013-14ರಲ್ಲಿ ಒಟ್ಟು 2,66,390 ರೂಪಾಯಿ ಹಾಗೂ 2017-18 ರಲ್ಲಿ 6,40,700 ರೂಪಾಯಿ ಆದಾಯ ಗಳಿಸುತ್ತಿದ್ದರು.

ಗಡ್ಕರಿ ಒಟ್ಟು 69,38,691 ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಹಾಗೂ ಅವರ ಹೆಂಡತಿ ಬಳಿ 91,99,160 ಮೌಲ್ಯದ ಚರಾಸ್ತಿ ಇದೆ. ಸಂಯುಕ್ತ ಹಿಂದೂ ಪರಿವಾರ್ ಹೆಸರಿನಲ್ಲಿ ಒಟ್ಟು 66,07,924ರೂಪಾಯಿ ಮೌಲ್ಯದ ಆಸ್ತಿ ಗಡ್ಕರಿ ಬಳಿ ಇದೆ. ಇನ್ನು ಗಡ್ಕರಿ ಬಳಿ 6,95,98,325 ರೂಪಾಯಿ ಹಾಗೂ ಅವರ ಹೆಮಡತಿ ಬಳಿ 6,48,60,325 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಎಚ್ಯುಎಫ್ ಹೆಸರಿನಲ್ಲಿ 9,40,31,224ರೂಪಾಯಿ ಮೌಲ್ಯದ ಆಸ್ತಿ ನಿತಿನ್ ಗಡ್ಕರಿ ಬಳಿ ಇದೆ.

ಅಲ್ಲದೇ ನಾಗ್ಪುರದ ಧಪೇವಾಡಾದಲ್ಲಿ 29 ಎಕರೆ ಕೃಷಿ ಭೂಮಿ ತಮ್ಮ ಬಳಿ ಇರುವುದಾಗಿ ಗಡ್ಕರಿ ಘೋಷಿಸಿದ್ದಾರೆ. ಈ ಕೃಷಿ ಭೂಮಿಯಲ್ಲಿ 15 ಎಕರೆ ಪ್ರದೇಶ ಹೆಂಡತಿ ಹಾಗೂ 14.60 ಎಚ್ಯುಎಫ್ ಹೆಸರಿನಲ್ಲಿದೆ. ನಾಗ್ಪುರದ ಮಹಾಲ್ ನಲ್ಲಿ ಪೂರ್ವಿಕರ ಮನೆ ಹಾಗೂ ಮುಂಬೈನ ವರಲಿಯಲ್ಲಿ ಫ್ಲಾಟ್ ಇರುವುದನ್ನೂ ಉಲ್ಲೇಖಿಸಿದ್ದಾರೆ.

ಗಡ್ಕರಿಯವರು ಮ್ಯೂಚುವಲ್ ಫಂಡ್ಸ್, ಬಾಂಡ್ ಹಾಗೂ ಶೇರುಗಳಲ್ಲಿ 3,55,510 ರೂಪಾಯಿ ಹೂಡಿಕೆ ಮಾಡಿದ್ದಾರೆ. ನಿತಿನ್ ಗಡ್ಕರಿ ಖಾತೆಯಲ್ಲಿ ಬ್ಯಾಂಕ್ ಖಾತೆಯಲ್ಲಿ 8,99,111 ರೂಪಾಯಿ ಮೊತ್ತ ಹಾಗೂ ಅವರ ಹೆಂಡತಿ ಬ್ಯಾಂಕ್ ಖಾತೆಯಲ್ಲಿ 11,07,909 ರೂಪಾಯಿ ಮೊತ್ತವಿದೆ. ಬಿಜೆಪಿಯ ಈ ಹಿರಿಯ ನಾಯಕ ಬ್ಯಾಂಕ್ ನಿಂದ 1,57,21,753ರೂಪಾಯಿ ಸಾಲ ಹೊಂದಿದ್ದಾರೆ. ಇವೆಲ್ಲವನ್ನು ಹೊರತುಪಡಿಸಿ ಗಡ್ಕರಿ ಬಳಿ 6 ಕಾರುಗಳಿವೆ ಇವುಗಳಲ್ಲಿ 4 ಅವರ ಹೆಂಡತಿ ಹೆಸರಿನಲ್ಲಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!