ಚುನಾವಣೆಗೂ ಮೊದಲು ಮೋದಿ ಸರ್ಕಾರ ಮತ್ತೆ ದಾಳಿ ಮಾಡಬಹುದು: ಇಮ್ರಾನ್ ಖಾನ್!

Published : Mar 26, 2019, 04:12 PM IST
ಚುನಾವಣೆಗೂ ಮೊದಲು ಮೋದಿ ಸರ್ಕಾರ ಮತ್ತೆ ದಾಳಿ ಮಾಡಬಹುದು: ಇಮ್ರಾನ್ ಖಾನ್!

ಸಾರಾಂಶ

ಭಾರತ ಮತ್ತೆ ದಾಳಿ ಮಾಡಬಹುದು ಎಂದ ಇಮ್ರಾನ್ ಖಾನ್| ಭಾರತದಿಂದ ಮತ್ತೊಮ್ಮೆ ಮಿಲಿಟರಿ ಕಾರ್ಯಾಚರಣೆ ಸಂಭವ ಹೆಚ್ಚು ಎಂದ ಪಾಕಿಸ್ತಾನ ಪ್ರಧಾನಿ| 'ಮತ ಗಳಿಕೆಗಾಗಿ ಮೋದಿ ಸರ್ಕಾರ ಮತ್ತೊಂದು ದಾಳಿಗೆ ಯೋಜನೆ ರೂಪಿಸಬಹುದು'| 'ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೂ ಭಾರತ-ಪಾಕ್ ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆ'|

ಇಸ್ಲಾಮಾಬಾದ್(ಮಾ.26): ಭಾರತದಿಂದ ಮತ್ತೊಮ್ಮೆ ಮಿಲಿಟರಿ ಕಾರ್ಯಾಚರಣೆ ಸಂಭವ ಹೆಚ್ಚು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮೊದಲು ಮತ ಗಳಿಕೆಗಾಗಿ ಮೋದಿ ಸರ್ಕಾರ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು ಎಂದು ಇಮ್ರಾನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೂ ಭಾರತ-ಪಾಕ್ ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆ ಮುಂದುವರೆಯಲಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ ಭಾರತದ ಸಂಭವನೀಯ ದಾಳಿಯನ್ನು ಎದುರಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಇಮ್ರಾನ್ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಸುದ್ದಿಗಳು

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!