ಲೋಕ ಸಮರ ಹತ್ತಿರ, ಶಿವಮೊಗ್ಗ ಜೆಡಿಎಸ್‌ಗೆ ಸ್ವಪಕ್ಷೀಯರಿಂದಲೇ ದೊಡ್ಡ ಆಘಾತ

By Web Desk  |  First Published Apr 1, 2019, 10:16 PM IST

ಲೋಕ ಸಭಾ ಕಣದಲ್ಲಿ ಕುತೂಹಲ ಮೂಡಿಸಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹೋಗಿ ಬಂದ ಮೇಲೆ ಕ್ಷಿಪ್ರ ರಾಜಕಾರಣದ ಬೆಳವಣಿಗೆಗಳು ನಡೆದಿವೆ.


ಶಿವಮೊಗ್ಗ[ಮಾ. 31]  ಡಿಕೆಶಿ ಬಂದು ಹೋದ ಬೆನ್ನಲ್ಲೇ ಜೆಡಿಎಸ್ ಗೆ ಆಂತರಿಕ ಶಾಕ್ ಎದುರಾಗಿದೆ.  ಜೆಡಿಎಸ್ ತೊರೆಯಲು ಕೆಲ ಮುಖಂಡರು ಸಿದ್ಧವಾಗಿರುವುದು ದೋಸ್ತಿ ಪಾಳಯಕ್ಕ ತಲೆನೋವಾಗಿದೆ.

ತೀರ್ಥಹಳ್ಳಿ  ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ ಮದನ್ .ಆರ್. ತೆನೆ ಹೊತ್ತ ಮಹಿಳೆಗೆ ಗುಡ್ ಬೈ ಹೇಳಿದ್ದಾರೆ.

Tap to resize

Latest Videos

‘ಕರ್ನಾಟಕದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ, 

2013  ರ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮದನ್  ಅಂದು ಚುನಾವಣೆಯಲ್ಲಿ 21 ಸಾವಿರದಷ್ಟು ಮತ ಪಡೆದಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ವಿರುದ್ಧ ಬೆಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಹುದ್ದೆಗೆ ರಾಜೀನಾಮೆ  ನೀಡಿದ್ದು  ಪತ್ರವನ್ನು ಜೆಡಿಎಸ್ ವರಿಷ್ಠ ದೇವೇಗೌಡ ರಿಗೆ ಕಳುಹಿಸಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

 

click me!