ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತಷ್ಟು ನಿಗೂಢವಾಗಿದೆ ಶಾಮನೂರು ಶಿವಶಂಕರಪ್ಪ ಬದಲು ಅವರ ಪುತ್ರ ಮಲ್ಲಿಕಾರರ್ಜುನ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಮತ್ತೆ ಪರಿಸ್ಥಿತಿ ಬದಲಾಗಿದೆ.
ದಾವಣಗೆರೆ[ಏ. 01] ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ದಾವಣಗೆರೆ ಜಿಲ್ಲಾ ಚುನಾವಣಾ ಉಸ್ತುವಾರಿಯಾಗಿ ಕೆಪಿಸಿಸಿ ನೇಮಿಸಿದೆ. ಹಾಗಾಗಿ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾತು ಕೇಳಿ ಬಂದಿದೆ. ಎಸ್ ಎಸ್ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ನಿರಾಸಕ್ತಿ ತಾಳಿದ್ದೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಜಿಲ್ಲಾ ಚುನಾವಣಾ ಉಸ್ತುವಾರಿ ಹೊತ್ತವರು ಸ್ಪರ್ಧಿಸಿದ ಉದಾಹರಣೆಗಳು ಕಡಿಮೆ. ಹಾಗಾದರೆ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಐಸಿಸಿಗೆ ಅಧಿಕೃತ ಮುದ್ರೆ ಯಾರಿಗೆ ? ಎನ್ನುವ ಪ್ರಶ್ನೆ ಜಿಲ್ಲಾ ರಾಜಕಾರಣದ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ವೆಂಕಟರಾವ್ ನಾಡಗೌಡ
ಆಕಾಂಕ್ಷಿಗಳ ಪಟ್ಟಿಯಲ್ಲಿ ತೇಜಸ್ವಿ ಪಟೇಲ್ ಹೆಸರು ಮೊದಲಿಗೆ ಕೇಳಿ ಬಂದಿದೆ. ಹೈಕಮಾಂಡ್ ಒಲವು ಯಾರಿಗೆ ಎಂಬುದು ನಿಗೂಢವಾಗಿದ್ದು ಒಂದೆರಡು ದಿನದಲ್ಲಿ ಬಹಿರಂಗವಾಗಲಿದೆ.
ತೇಜಸ್ವಿ ಪಟೇಲ್ ಯಾರು? ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ಹಾಗೂ ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಅಣ್ಣನ ಪುತ್ರ ಈ ತೇಜಸ್ವಿ ಪಟೇಲ್ . ಇವರಿಗೆ ಟಿಕೆಟ್ ನೀಡಿದರೆ ಲಿಂಗಾಯಿತ ಸಮುದಾಯಕ್ಕೆ ನೀಡಿದಂತೆ ಆಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.