ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕ ಕೊಡ್ತಿವಿ: ಶಿವಸೇನೆ!

By Web DeskFirst Published Apr 10, 2019, 3:33 PM IST
Highlights

ಬಿಜೆಪಿ ಪ್ರಣಾಳಿಕೆ ಕೊಂಡಾಡಿದ ಮಿತ್ರಪಕ್ಷ ಶೀವಸೇನೆ| ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕ ಕೊಟ್ಟ ಉದ್ಧವ್ ಠಾಕ್ರೆ| ಕಲಂ 370ರ ರದ್ದತಿ, ರಾಮ ಮಂದಿರ ನಿರ್ಮಾಣ ತುರ್ತು ಅಗತ್ಯ ಎಂದ ಶಿವಸೇನೆ| ‘ಬಿಜೆಪಿ ಸಂಕಲ್ಪ ಪತ್ರ ರಾಷ್ಟ್ರದ ಭಾವನಾತ್ಮಕ ವಿಚಾರ’| ಪಕ್ಷದ ಮುಖವಾಣಿಯಲ್ಲಿ ಬಿಜೆಪಿ ಪ್ರಣಾಳಿಕೆ ಹೊಗಳಿದ ಶಿವಸೇನೆ|

ಮುಂಬೈ (ಏ.10): 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಮಿತ್ರಪಕ್ಷ ಶಿವಸೇನೆ ಕೊಂಡಾಡಿದೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ  ಕಲಂ 370ರ ರದ್ದತಿ, ರಾಮ ಮಂದಿರ ನಿರ್ಮಾಣ ವಿಚಾರಗಳು ಜನರನ್ನು ತಲುಪಲಿವೆ ಎಂದು ಶೀವಸೇನೆ ಭರವಸೆ ವ್ಯಕ್ತಪಡಿಸಿದೆ. 

ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಲೇಖನ ಬರೆದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿ ಪ್ರಣಾಳಿಕೆಗೆ 100 ಕ್ಕೆ 200 ಅಂಕಗಳನ್ನು ನೀಡಬಹುದು ಎಂದು ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಮತ್ತು ಕಲಂ 370 ನೇ ವಿಧಿಯೊಂದಿಗೆ ರಾಜಿ ಮಾಡಿಕೊಳ್ಳುವವರನ್ನು ಇತಿಹಾಸ ಕ್ಷಮಿಸುವುದಿಲ್ಲ. ಅಲ್ಲದೆ ರಾಮ ಮಂದಿರವನ್ನು ಕಟ್ಟಲು 2019 ಕೊನೆಯ ಅವಕಾಶವಾಗಿದ್ದು, ದೇಶದ ಸಮಗ್ರತೆಯ ವಿಚಾರದಲ್ಲಿ ಯಾರೂ ರಾಜಿಯಾಗಬಾರದು ಎಂದು ಠಾಕ್ರೆ ಆಗ್ರಹಿಸಿದ್ದಾರೆ.

ಪ್ರಣಾಳಿಕೆಯಲ್ಲಿ ಬಿಜೆಪಿ ಉಲ್ಲೇಖಿಸಿರುವ ‘ಸಂಕಲ್ಪ ಪತ್ರ’ ರಾಷ್ಟ್ರದ ಭಾವನಾತ್ಮಕ ವಿಚಾರವಾಗಿದ್ದು, ಪಕ್ಷದ ಪ್ರಣಾಳಿಕೆ ದೇಶದ ಜನರ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಉದ್ಧವ್ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!