ದಕ್ಷಿಣದಲ್ಲಿ 'ಸೂರ್ಯ' ಉದಯಿಸಲು ಕಾರಣ?: ಏನಿದೆ ಮೋದಿ-ಶಾ ಹೂರಣ?

Published : Mar 26, 2019, 01:17 PM IST
ದಕ್ಷಿಣದಲ್ಲಿ 'ಸೂರ್ಯ' ಉದಯಿಸಲು ಕಾರಣ?: ಏನಿದೆ ಮೋದಿ-ಶಾ ಹೂರಣ?

ಸಾರಾಂಶ

ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಯಾಗಿದ್ದೇಗೆ?| ದಕ್ಷಿಣದಲ್ಲಿ 'ಸೂರ್ಯ' ಉದಯಿಸಲು ಬಿಜೆಪಿ ಪ್ಲ್ಯಾನ್ ಏನು?| ಪಕ್ಷ ಮತ್ತು ಸರ್ಕಾರದಲ್ಲಿ ಯುವ ಧ್ವನಿಗೆ ಮೋದಿ-ಶಾ ಮನ್ನಣೆ| ತೇಜಸ್ವಿ ಸೂರ್ಯ ಆಯ್ಕೆಗೆ ಇವೆ ಹಲವು ಪ್ರಮುಖ ಕಾರಣಗಳು|

ಬೆಂಗಳೂರು(ಮಾ.26): ಸದಾ ಯುವ ಭಾರತದ ಕುರಿತು ಮಾತನಾಡುವ ಪ್ರಧಾನಿ ಮೋದಿ-ಅಮಿತ್ ಶಾ ಜೋಡಿ, ಪಕ್ಷ ಮತ್ತು ಸರ್ಕಾರದಲ್ಲಿ ಯುವಪಡೆ ಹೆಚ್ಚಿಸಲು ಮುಂದಾಗಿದೆ.

ಅದರಂತೆ ದೇಶದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಯುವಕರಿಗೆ ಮಣೆ ಹಾಕಿರುವ ಬಿಜೆಪಿ, ಯುವ ಭಾರತ ಕಟ್ಟಲು ನಾವು ಸಿದ್ಧ ಎಂಬ ಸಂದೇಶ ರವಾನಿಸಿದೆ.

2014ರಲ್ಲೇ ಪ್ರತಾಪ್ ಸಿಂಹ ಅವರಂತ ಯುವ ನಾಯಕರಿಗೆ ಲೋಕಸಭೆ ದರ್ಶನ ಮಾಡಿಸಿದ್ದ ಬಿಜೆಪಿ, ಈ ಬಾರಿ ತೇಜಸ್ವಿ ಸೂರ್ಯ ಅವರಂತ ಬಿಸಿ ರಕ್ತದ ತರುಣರನ್ನು ಕೈಬೀಸಿ ಕರೆಯುತ್ತಿದೆ.

ಅದರಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಹದಿಹರೆಯದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಸೂರ್ಯ ಪಕ್ಷದ ಸಿದ್ಧಾಂತವನ್ನು ಮಾಧ್ಯಮಗಳ ವೇದಿಕೆಯಲ್ಲಿ ಸಮರ್ಥವಾಗಿ ಮಂಡಿಸುವ ಚಾತುರ್ಯ ಹೊಂದಿರುವವರು.

 

ತೇಜಸ್ವಿ ಸೂರ್ಯ ಆಯ್ಕೆಗೆ ಇಲ್ಲಿವೆ ಕಾರಣ:

1. ಯುವಕರನ್ನು ಬೆಳೆಸುವುದು ಹಾಗೂ ಪಕ್ಷ ಮತ್ತು ಸರ್ಕಾರದಲ್ಲಿ ಯುವ ಧ್ವನಿಗೆ ಮನ್ನಣೆ ನೀಡುವುದು ಮೋದಿ-ಶಾ ಪ್ಲ್ಯಾನ್.

2. ಮುಂದಿನ 25-30 ವರ್ಷಗಳ ಕಾಲ ಪಕ್ಷ ಸಂಘಟನೆಗೆ ನಿರಂತರವಾಗಿ ದುಡಿಯುವ ಶಕ್ತಿ ಇರುವ ಹಿನ್ನೆಲೆ.

3. ಹೊಸ ಮುಖದ ಅಭ್ಯರ್ಥಿ ಅನ್ನೋ ಕಾರಣ ಒಂದೆಡೆಯಾದರೆ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳ ಮೇಲೆ ಹಿಡಿತ ಇದೆ.

4. ಮಾಧ್ಯಮಗಳ ವೇದಿಕೆಯಲ್ಲಿ ಹಾಗೂ ಸಾರ್ವಜನಿಕವಾಗಿ ಪಕ್ಷದ ಸಿದ್ಧಾಂತವನ್ನು ಸಮರ್ಥವಾಗಿ ಮಂಡಿಸುವ ಚಾತುರ್ಯ.

5. ಬ್ರಾಹ್ಮಣ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ

6. ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆಯಿಂದ ಕುಟುಂಬ ರಾಜಕಾರಣ ವಿರೋಧಿ ಹೋರಾಟಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕ

ಚುನಾವಣೆ ಸುದ್ದಿಗಳು

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!