ಚಾಮುಂಡೇಶ್ವರಿ ಗೆಲುವಿಗೆ ಮೈಸೂರು ಸಂದಾಯ, ಏನಿದು ಹೊಸ ಲೆಕ್ಕ?

By Web DeskFirst Published Mar 31, 2019, 11:40 PM IST
Highlights

ಮೈಸೂರಿನ ಲೋಕಸಭಾ ರಾಜಕಾರಣ ಹೊಸ ದಿಕ್ಕು ಪಡೆದುಕೊಳ್ಳಲಿದೆಯೇ ಎಂಬ ಪ್ರಶ್ನೆ ಸಚಿವ ಜಿಟಿ ದೇವೇಗೌಡರ ವರ್ತನೆಯಿಂದ ಮೂಡಿದೆ.

ಮೈಸೂರು[ಮಾ. 31]  ಬಿಜೆಪಿ ಬೆನ್ನಿಗೆ ಸಚಿವ ಜಿ.ಟಿ.ದೇವೇಗೌಡ ನಿಂತಿದ್ದಾರೆಯೇ ಎಂಬ ಪ್ರಶ್ನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.  ಬಿಜೆಪಿಗೆ ಚಾಮುಂಡೇಶ್ವರಿ ಗೆಲುವಿನ ಋಣ ಸಂದಾಯ ಮಾಡಲಿದ್ದಾರೆಯೇ? ವಿಧಾನಸಭೆ ಚುನಾವಣೆ ವೇಳೆ ಡಮ್ಮಿ ಅಭ್ಯರ್ಥಿ ಹಾಕುವ ಮೂಲಕ ಜಿಟಿಡಿ ಗೆಲುವಿಗೆ ಬಿಜೆಪಿ ನೆರವಾಗಿತ್ತು

ಜೆಡಿಎಸ್- ಕಾಂಗ್ರೆಸ್ ವಲಯದಲ್ಲಿ ಶುರುವಾಯ್ತು ಹೊಸ ಚರ್ಚೆ ಆರಂಭವಾಗಿದೆ. ಬಿಜೆಪಿ ಬಗ್ಗೆ ಜಿಟಿಡಿ ಮೃದು ಧೋರಣೆ ತಾಳಿದ್ದಾರೆ ಎನ್ನಲಾಗುತ್ತಿದೆ. ಶಾಸಕ ಸಿ.ಟಿ.ರವಿ ಮಾತನಾಡುತ್ತಾ, ಜಿ.ಟಿ.ದೇವೇಗೌಡ ಮತ್ತು ನನ್ನ ಸಂಬಂಧ ತುಂಬಾ ಚೆನ್ನಾಗಿದೆ. ಜಿಟಿಡಿ ನಡೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದಿದ್ದರು.

ಮೈಸೂರಿನ ದೋಸ್ತಿ ಪ್ರಚಾರಕ್ಕೆ ಜಿಟಿಡಿ ಯಾಕೆ ಬರುತ್ತಿಲ್ಲ? ಕಾರಣ ಬಿಚ್ಚಿಟ್ಟ ಸಿಟಿ ರವಿ

ಜಿಟಿಡಿ ಕೈಕೊಟ್ಟರೆ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್​ ಗೆ ಸಂಕಷ್ಟ ಎದುರಾಗಲಿದೆ. ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಒಂದು ಕಾಲದಲ್ಲಿ ಬಿಜೆಪಿಯಲ್ಲೇ ಇದ್ದ ವಿಜಯ್ ಶಂಕರ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

click me!