‘ಅಂಬರೀಶ್ ಸೋಲಿಸಿದ್ದು ನಾನೇ, ನಾನು ನಾಗಮಂಗಲದ ಗಂಡು’

Published : Mar 31, 2019, 10:14 PM ISTUpdated : Mar 31, 2019, 10:28 PM IST
‘ಅಂಬರೀಶ್ ಸೋಲಿಸಿದ್ದು ನಾನೇ, ನಾನು ನಾಗಮಂಗಲದ ಗಂಡು’

ಸಾರಾಂಶ

ಮಂಡ್ಯ ಸಂಸದ ಶಿವರಾಮೇಗೌಡ ಅಬ್ಬರಿಸಿದ್ದಾರೆ. ಅಂಬರೀಶ್ ಮತ್ತು ಅಂಬರೀಶ್ ಪುತ್ರನ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಮಂಡ್ಯ[ಮಾ. 31] ‘ಲೋಕಸಭೆಗೆ ಅಂಬರೀಶ್ ಸ್ಪರ್ಧೆ ಮಾಡಿದಾಗ ಸೋಲಿಸಿದ್ದು ನಾನೇ. ಈ ಶಿವರಾಮೇಗೌಡ ನಾಗಮಂಗಲದ ಗಂಡು’ ಹೀಗೆ ಅಬ್ಬರಿಸಿದ್ದು ಮಂಡ್ಯ ಸಂಸದ ಶಿವರಾಮೇಗೌಡ.

ನಾಗಮಂಗಲದ ಮಲ್ಲೇನಹಳ್ಳಿಯಲ್ಲಿ ಮಾತನಾಡಿದ ಗೌಡರು, ಅಂಬರೀಶ್ ಪಾರ್ಲಿಮೆಂಟ್‌ಗೆ ನಿಂತಾಗ ಬಿಜೆಪಿ ಸೇರಿ ಅವರನ್ನು ಸೋಲಿಸಿದ್ದು ನಾನೇ. ನಾಗಮಂಗಲದಲ್ಲಿ ಅತಿ ಹೆಚ್ಚು ಮತ ಪಡೆದಿದ್ರೆ ಅವತ್ತು ಅಂಬರೀಶ್ ಗೆಲ್ತಿದ್ರು. ಇದನ್ನ ನೆನಪಿನಲ್ಲಿಟ್ಟುಕೊಳ್ಳಿ ನಾನು ಯಾರಿಗೂ ಕೇರ್ ಮಾಡೋನಲ್ಲ ಎಂದು ಅಬ್ಬರಿಸಿದ್ದಾರೆ.

ಒಂದ್ಕಡೇ ಯಶ್,‌ ಇನ್ನೊಂದ್ಕಡೇ ಅಂಬರೀಶ್ ಮಗ..ಕಣ್ಣೇಬಿಡ್ತಿರಲಿಲ್ಲ ಅಂಬರೀಶ್ ಮಗ ಈಗ ಹೇ ನಾನು, ನಾನು ನಮ್ಮಪ್ಪನ ಹಾಗೇ ಅಂತಾನೇ ಏನು ಸಿನೆಮಾದವರು ಜನಕ್ಕೆ ಪುಕ್ಸಟ್ಟೆ ಸಿನೆಮಾ ತೋರಿಸುತ್ತಾರ? ಎಂದು ವ್ಯಂಗ್ಯವಾಡಿದರು.

'ಅಂಬರೀಶ್ ಅಂತಿಮ ದರ್ಶನಕ್ಕೆ ಬಂದ ಜನಸಾಗರ ನೋಡಿ ಇವತ್ತು ಚುನಾವಣೆಗೆ ಬಂದಿದ್ದೀರಾ'..?

ದುಡ್ಡು ಕೊಟ್ಟೆ ಅಲ್ವ ನಾವೆಲ್ಲಾ ಸಿನೆಮಾ ನೋಡೋದು. ದಯವಿಟ್ಟು ಸಿನೆಮಾದವ್ರನ್ನ ಸಿನೆಮಾ ಕಷ್ಟೇ ಇಡೋಣ. ರಾಜಕೀಯಕ್ಕೆ ಬೇಡ ಎಂದು ಶಿವರಾಮೇಗೌಡ ಹೇಳಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!