ಪ್ರಜ್ಞಾ ಬಳಿ ಸದಾ ಚಾಕು ಇರುತ್ತೆ: ಸಿಎಂ ಬಘೇಲ್‌

Published : Apr 26, 2019, 05:23 PM IST
ಪ್ರಜ್ಞಾ ಬಳಿ ಸದಾ ಚಾಕು ಇರುತ್ತೆ: ಸಿಎಂ ಬಘೇಲ್‌

ಸಾರಾಂಶ

ಪ್ರಜ್ಞಾ ಬಳಿ ಸದಾ ಚಾಕು ಇರುತ್ತೆ, ಹಿಂದೊಮ್ಮೆ ದಾಳಿ ನಡೆಸಿದ್ದರು ಎಂದು ಛತ್ತೀಸ್ಗಡ ಸಿಎಂ ಬಘೇಲ್‌ ಆರೋಪಿಸಿದ್ದಾರೆ.

ಜಬಲ್ಪುರ[ಏ.26]: ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್‌ ಠಾಕೂರ್‌ರನ್ನು ಸಾಧ್ವಿ ಎಂದು ಕರೆಯುವುದಕ್ಕೆ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಧ್ವಿ ಹೆಲ್ತ್ ಮಿನಿಸ್ಟರ್ ಅಭ್ಯರ್ಥಿ: ಒವೈಸಿ ವ್ಯಂಗ್ಯವಾಡಿದ್ದೇಕೆ!

ಆಕೆ ಸಾಧ್ವಿ ಎನ್ನಿಸಿಕೊಳ್ಳುವ ವ್ಯಕ್ತಿ ಹೊಂದಿಲ್ಲ. ಆಕೆಯ ಬಳಿ ಸದಾ ಚಾಕು ಇರುತ್ತದೆ. ಈ ಹಿಂದೊಮ್ಮೆ ಆಕೆ ಯುವಕನಿಗೆ ಚಾಕುವಿನಿಂದ ಇರಿದಿದ್ದಳು. ಮೊದಲಿನಿಂದಲೂ ಆಕೆ ಜಗಳದ ಸ್ವಭಾಘ, ಅಪರಾಧಿಕ ಮನೋಭಾವ ಹೊಂದಿದ್ದಾಳೆ ಎಂದು ಟೀಕಿಸಿದ್ದಾರೆ.

ಸಾಧ್ವಿ ಪ್ರಜ್ಞಾಗೆ ಸಿಂಗ್ ಬಾಯಿಗೆ ಬಿಜೆಪಿ ಬೀಗ!

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಕಾಂಗ್ರೆಸ್‌ ಮುಖಂಡರು ಅರ್ಥಹೀನ ಮಾತುಗಳಿಂದ ದೂರವಿರಬೇಕು. ಈ ಕುರಿತು ದಾಖಲೆಗಳಿಲ್ಲದೇ ಮಾತನಾಡಿದರೆ ಮಾನನಷ್ಟಮೊಕದ್ದಮೆ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!