NOT KNOWN ಕಾಲಂ ಸೇರಿ ಮೋದಿ ಆಸ್ತಿ ವಿವರ ಬಹಿರಂಗ!

By Web DeskFirst Published Apr 26, 2019, 4:55 PM IST
Highlights

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನಾಮಪತ್ರ| ಪ್ರಧಾನಿ ಮೋದಿ ವೈಯಕ್ತಿಕ ಆಸ್ತಿ ವಿವರ ಬಹಿರಂಗ| ಒಟ್ಟು 2.51 ಕೋಟಿ ರೂ. ಆಸ್ತಿ ಘೋಷಿಸಿದ ಪ್ರಧಾನಿ ಮೋದಿ| ಅಫಿಡವಿಟ್ ನಲ್ಲಿ ಪತ್ನಿ ಹೆಸರು ನಮೂದಿಸಿದ ಪ್ರಧಾನಿ ಮೋದಿ| ಪ್ರಧಾನಿ ಮೋದಿ ಶೈಕ್ಷಣಿಕ ಮಾಹಿತಿ ಬಹಿರಂಗ| ಪ್ರಧಾನಿ ಮೋದಿ ಬ್ಯಾಂಕ್ ಖಾತೆಯಲ್ಲಿರುವ ಹಣವೆಷ್ಟು? ಪ್ರಧಾನಿ ಮೋದಿ ನಾಮಪತ್ರದ ಅಫಿಡವಿಟ್'ನ ಸಂಪೂರ್ಣ ವಿವರ|

ವಾರಾಣಸಿ(ಏ.26): ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರದಲ್ಲಿ ಪ್ರಧಾನಿ ಮೋದಿ ತಮ್ಮ ಆಸ್ತಿ ಸೇರಿದಂತೆ ಇತರ ವೈಯಕ್ತಿಕ ವಿವರ ಸಲ್ಲಿಸಿದ್ದಾರೆ.

"

ಪ್ರಧಾನಿ ಮೋದಿ ಸಲ್ಲಿಸಿರುವ ವಿವರ ಇಂತಿದೆ:

ಒಟ್ಟು ಆಸ್ತಿ ಮೌಲ್ಯ: 2.51 ಕೋಟಿ ರೂ.

2014 ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ ವಿವರಕ್ಕೆ ಹೋಲಿಸಿದರೆ ಪ್ರಧಾನಿ ಮೋದಿ ಒಟ್ಟಾರೆ ಆಸ್ತಿಯಲ್ಲಿ ಸುಮಾರು 23 ಲಕ್ಷ ರೂ. ಹೆಚ್ಚಳವಾಗಿದೆ.

ಪ್ರಧಾನಿ ಮೋದಿ ಬಳಿ ಯಾವುದೇ ಸ್ವಂತ ವಾಹನವಿಲ್ಲ. ಪ್ರಧಾನಿ ಬಳಿ 48,944 ರೂ. ಹಣ ಇದ್ದು, ಗುಜರಾತ್‌ನ ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 11,29,690 ರೂ. ಠೇವಣಿ ಇರಿಸಿದ್ದಾರೆ.

ಅದರಂತೆ ಮತ್ತೊಂದು ಖಾತೆಯಲ್ಲಿ ಪ್ರಧಾನಿ ಮೋದಿ 1,07,96,288 ರೂ. ಹಣ ಇರಿಸಿದ್ದಾರೆ. ಮೋದಿ ಬಳಿ ಒಟ್ಟು ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ 1,38,060 ರೂ. ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಪ್ರಧಾನಿ ಮೋದಿ ಯಾವುದೇ ಸಾಲ ಮಾಡಿಲ್ಲ.

ಇನ್ನು ತೆರಿಗೆ ಉಳಿಸಲು L&T ಸಂಸ್ಥೆಯ ಮೂಲಸೌಕರ್ಯ ಬಾಂಡ್ ನಲ್ಲಿ ಮೋದಿ 20 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಸುಮಾರು 5,18,235 ರೂ. ಹೂಡಿಕೆ ಮಾಡಿದ್ದಾರೆ. ಪ್ರಧಾನಿ ಮೋದಿ 1,59,281 ರೂ. ಮೌಲ್ಯದ ಎಲ್‌ಐಸಿ ಪಾಲಿಸಿ ಹೊಂದಿದ್ದು, ಗುಜರಾತ್‌ನ ಗಾಂಧಿನಗರದಲ್ಲಿ 2002ರಲ್ಲಿ 1,30,488 ರೂ. ಮೌಲ್ಯದ ನಿವೇಶನ ಖರೀದಿಸಿದ್ದಾರೆ. ಈ ನಿವೇಶನದಲ್ಲಿ ವಸತಿ ಕಟ್ಟಡ ನಿರ್ಮಾಣವಾಗಿದ್ದು, ಪ್ರಧಾನಿ ಮೋದಿ ನಾಲ್ಕನೇ ಒಂದು ಭಾಗದಷ್ಟು ಪಾಲು ಹೊಂದಿದ್ದಾರೆ. ಅದರ ಮೌಲ್ಯ 1 ಕೋಟಿ ರೂ. ಆಗುತ್ತದೆ.

"

ಪತ್ನಿಯ ವಿವರ ನೀಡಿದ ಮೋದಿ:

ಇನ್ನು ಪ್ರಧಾನಿ ಮೋದಿ ಸಲ್ಲಿಸಿದ ಅಫಿಡವಿಟ್'ನಲ್ಲಿ ಪತ್ನಿಯ ಕಾಲಂ ಭರ್ತಿ ಮಾಡಿದ್ದು, ಜಶೋಧಾಬೆನ್ ಎಂದು ಹೆಸರು ಉಲ್ಲೇಖಿಸಿದ್ದಾರೆ. ಆದರೆ ಅವರ ಆಸ್ತಿ ವಿವರ ಮತ್ತು ಇನ್ನಿತರ ವೈಯಕ್ತಿಕ ವಿವರಗಳ ಕಾಲಂನಲ್ಲಿ NOT KNOWN ಎಂದು ನಮೂದಿಸಿದ್ದಾರೆ.

"

ಶೈಕ್ಷಣಿಕ ಮಾಹಿತಿ:

ಮಾಸ್ಟರ್ ಆಫ್ ಆರ್ಟ್ಸ್(ಎಂಎ)

ಗುಜರಾತ್ ವಿವಿ-ಅಹಮದಾಬಾದ್(1983)

ಬ್ಯಾಚುಲರ್ ಆಫ್ ಆರ್ಟ್ಸ್(ಬಿಎ)

ದೆಹಲಿ ವಿವಿ-ನವದೆಹಲಿ(1978)

ಕಾಶಿ ಮಂದಿಗೆ ಮೋದಿ ನಮೋ:

"

 

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಂತದ ಮತದಾನ ಮಯಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!
Last Updated Apr 26, 2019, 6:02 PM IST
click me!