ಯುದ್ಧ ನೌಕೆಯನ್ನೇ ವೈಯಕ್ತಿಕ ಟ್ಯಾಕ್ಸಿ ಮಾಡಿಕೊಂಡಿದ್ದ ರಾಜೀವ್ ಗಾಂಧಿ!

By Web DeskFirst Published May 9, 2019, 8:35 AM IST
Highlights

 ಸೇನೆಯೇನು ಮೋದಿಯ ಖಾಸಗಿ ಸ್ವತ್ತಲ್ಲ ಎಂಬ ರಾಹುಲ್‌ ಟೀಕೆಗೆ ಮೋದಿ ತಿರುಗೇಟು| - 1987ರಲ್ಲಿ ಗಾಂಧೀ ಕುಟುಂಬದ ಲಕ್ಷದ್ವೀಪ ಪ್ರವಾಸದ ವೇಳೆ ಐಎನ್‌ಎಸ್‌ ವಿರಾಟ್‌ ಬಳಕೆ| ಯುದ್ಧ ನೌಕೆಯನ್ನೇ ವೈಯಕ್ತಿಕ ಟ್ಯಾಕ್ಸಿ ಮಾಡಿಕೊಂಡಿದ್ದ ಗಾಂಧೀ ಕುಟುಂಬ!

ನವದೆಹಲಿ[ಮೇ.09]: ಭಾರತೀಯ ಸೇನೆಯೇನು ಪ್ರಧಾನಿ ಮೋದಿ ಅವರ ವೈಯಕ್ತಿಕ ಸ್ವತ್ತಲ್ಲ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧೀ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನೇ ಗಾಂಧೀ ಕುಟುಂಬ ವೈಯಕ್ತಿಕ ಟ್ಯಾಕ್ಸಿ ರೀತಿ ಬಳಸಿಕೊಂಡಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ನಿಮ್ಮ ತಂದೆಯ ಜೀವನ ನಂ. 1 ಭ್ರಷ್ಟಾಚಾರಿಯಾಗಿ ಕೊನೆಯಾಯ್ತು: ರಾಹುಲ್ ವಿರುದ್ಧ ಮೋದಿ ಕಿಡಿ!

ಇಲ್ಲಿ ಬುಧವಾರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್‌ನ ನಾಮ್‌ಧಾರ್‌ಗಳು, ನನ್ನನ್ನು ಟೀಕಿಸುವ ಒಂದೇ ಒಂದೇ ಅವಕಾಶವನ್ನೂ ಬಿಡುವುದಿಲ್ಲ, ಭಾರತೀಯ ಸೇನೆ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ ಎಂದೆಲ್ಲಾ ಕೂಗಾಡುತ್ತಾರೆ. ಆದರೆ ಯಾರು ಹೀಗೆ ವರ್ತಿಸುತ್ತಾರೋ ಅವರ ತಂದೆ ಮತ್ತು ಅವರ ಕುಟುಂಬವೇ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಪರ್ಸನಲ್‌ ಟ್ಯಾಕ್ಸಿಯಾಗಿ ಬಳಸಿಕೊಂಡಿತ್ತು ಎಂಬುದನ್ನು ಈ ದೇಶ ಮರೆತಿಲ್ಲ. ದೇಶದ ಗಡಿಕಾಯಲು ಇರುವ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕ್ಸಿ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಅದಕ್ಕೆ ಅವಮಾನ ಮಾಡಲಾಗಿದೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಕುಟುಂಬ 10 ದಿನಗಳ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು. ದೇಶದ ಕರಾವಳಿ ಗಡಿ ಕಾಯುವ ಯುದ್ಧ ನೌಕೆಯನ್ನು ಗಾಂಧೀ ಕುಟುಂಬದ ಸಂಚಾರಕ್ಕೆ ಮತ್ತು ಭದ್ರತೆಗೆಂದು ಬಳಸಿಕೊಳ್ಳಲಾಗಿತ್ತು’ ಎಂದು ಮೋದಿ ಟೀಕಿಸಿದ್ದಾರೆ.

ಯತಾ ತಾತ ತಥಾ ಪೌತ್ರ: ಸ್ವಂತಕ್ಕೆ ವಾರ್ ಶಿಪ್ ಬಳ್ಸೋದು ಕಲಿಸಿದ್ದೇ ನೆಹರೂ?

ಅಲ್ಲದೆ ನೌಕೆಯನ್ನು ಗಾಂಧೀ ಕುಟುಂಬ ಪ್ರವಾಸಕ್ಕೆಂದು ಬಂದಿದ್ದ ದ್ವೀಪದ ಬಳಿ 10 ದಿನ ಕಾವಲಿಗೆ ಹಾಕಲಾಗಿತ್ತು. ಈ ನೌಕೆಯಲ್ಲಿ ರಾಜೀವ್‌ರ ಪತ್ನಿ ಸೋನಿಯಾರ ತಾಯಿ ಮತ್ತು ಮಾವ ಸೇರಿದಂತೆ ಹಲವು ವಿದೇಶಿಯರು ಇದ್ದರು. ಹೀಗೆ ವಿದೇಶಿಯರನ್ನು ಯುದ್ಧ ನೌಕೆಯೊಳಗೆ ಬಿಡುವ ಮೂಲಕ ದೇಶದ ಭದ್ರತೆ ಜೊತೆ ರಾಜಿ ಮಾಡಿಕೊಂಡಿರಲಿಲ್ಲವೆ ಎಂಬ ಪ್ರಶ್ನೆ ಏಳುತ್ತದೆ’ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ INS ವಿರಾಟ್ ಯುದ್ಧನೌಕೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರಫುಲ್ಲ ಕುಮರ್ ಪತ್ರಾರ ಫೇಸ್ಬುಕ್ ಕಮೆಂಟ್ ಒಂದು ಭಾರೀ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಾತ್ರಾರವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಕುಟುಂಬ ಸಮೇತ ಲಕ್ಷದ್ವೀಪಕ್ಕೆ ರಜೆ ದಿನಗಳನ್ನು ಕಳೆಯಲು INS ವಿರಾಟ್ ನಲ್ಲಿ ತೆರಳಿದ್ದಾಗ ನಾನೂ ಆ ಯುದ್ಧನೌಕೆಯಲ್ಲಿ ಸೇವೆಯಲ್ಲಿದ್ದೆ, ಇದಕ್ಕೆ ನಾನೇ ಸಾಕ್ಷಿ ಎಂದಿದ್ದಾರೆ. 

‘ಕರ್ಮ’ ಕಾಯುತ್ತಿದೆ: ಮೋದಿಯನ್ನು ಮತ್ತೆ ತಬ್ಬಿಕೊಂಡ ರಾಹುಲ್!

click me!