'ನೂರಾರು ದೇಗುಲ ಒಡೆದ ಮೋದಿ ಆಧುನಿಕ ಔರಂಗ್‌ಜೇಬ್‌'

Published : May 09, 2019, 08:23 AM IST
'ನೂರಾರು ದೇಗುಲ ಒಡೆದ ಮೋದಿ ಆಧುನಿಕ ಔರಂಗ್‌ಜೇಬ್‌'

ಸಾರಾಂಶ

ನೂರಾರು ದೇಗುಲ ಒಡೆದ ಮೋದಿ ಆಧುನಿಕ ಔರಂಗ್‌ಜೇಬ್‌, ಇಂತಹುದ್ದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಹೇಳಿಕೆ ನೀಡಿದವರಾರು? ಇಲ್ಲಿದೆ ವಿವರ

ವಾರಾಣಸಿ[ಮೇ.09]: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಲೋಕಸಭೆಯನ್ನು ಪ್ರತಿನಿಧಿಸುವ ವಾರಾಣಸಿಯಲ್ಲಿ 100ಕ್ಕೂ ಹೆಚ್ಚು ದೇಗುಲಗಳನ್ನು ಕೆಡವುವ ಮೂಲಕ ಆಧುನಿಕ ಔರಂಗಜೇಬ್‌ ಆಗಿ ಹೊರಹೊಮ್ಮಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಸಂಜಯ್‌ ನಿರುಪಮ್‌ ದೂಷಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರುಪಮ್‌, ಮೋದಿ ಇಲ್ಲಿಂದ ಆಯ್ಕೆಯಾದ ಮೇಲೆ ಇಲ್ಲಿ ನೂರಾರು ದೇಗುಲಗಳನ್ನು ಒಡೆದುಹಾಕಲಾಗಿದೆ. ಇನ್ನು ವಿಶ್ವನಾಥನ ದರ್ಶನಕ್ಕೆ 550 ರು. ಶುಲ್ಕವನ್ನು ಹೊಸದಾಗಿ ವಿಧಿಸುವ ಪದ್ಧತಿ ಜಾರಿಗೆ ಬಂದಿದೆ. ಇದೆನ್ನೆಲ್ಲಾ ನೋಡಿದರೆ ಮೋದಿಯನ್ನು ಆಧುನಿಕ ಔರಂಗ್‌ಜೇಬ್‌ ಅನ್ನದೇ ವಿಧಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಔರಂಗ್‌ಜೇಬ್‌ನ ದಾಳಿಯಿಂದ ಯಾವ ದೇಗುಲಗಳನ್ನು ಬನಾರಸ್‌ನ ಜನ ರಕ್ಷಿಸಿಕೊಂಡಿದ್ದರೋ ಆ ದೇಗುಲಗಳನ್ನೂ ಮೋದಿ ಧ್ವಂಸಗೊಳಿಸಿದ್ದಾರೆ ಎಂದು ನಿರುಪಮ್‌ ದೂಷಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!