ವಿಪಕ್ಷಗಳ ‘ಲವ್ ಡಿಕ್ಷನರಿ’ಯಲ್ಲಿನ ದ್ವೇಷ ಬಿಚ್ಚಿಟ್ಟ ಪ್ರಧಾನಿ ಮೋದಿ!

Published : May 08, 2019, 07:25 PM IST
ವಿಪಕ್ಷಗಳ ‘ಲವ್ ಡಿಕ್ಷನರಿ’ಯಲ್ಲಿನ ದ್ವೇಷ ಬಿಚ್ಚಿಟ್ಟ ಪ್ರಧಾನಿ ಮೋದಿ!

ಸಾರಾಂಶ

ವಿಪಕ್ಷಗಳ ಲವ್ ಡಿಕ್ಷನರಿಯಲ್ಲಿ ಏನೆನಿವೆ ಎಂದು ಹೇಳಿದ ಪ್ರಧಾನಿ| ವಿಪಕ್ಷಗಳ ಪ್ರೀತಿಯ ನಿಘಂಟಿನಲ್ಲಿ ಕೇವಲ ದ್ವೇಷವಷ್ಟೇ ತುಂಬಿದೆ ಎಂದ ಮೋದಿ| ‘ವಿಪಕ್ಷಗಳು ನನ್ನ ಕುರಿತು ಆಡಿರುವ ಕೀಳು ಪದಗಳಿಗೂ ಜವಾಬ್ದಾರರು’|

ಕುರುಕ್ಷೇತ್ರ(ಮೇ.08): ತಮ್ಮ ಮೇಲೆ ಒಟ್ಟಾಗಿ ಮುಗಿ ಬಿದ್ದಿರುವ ವಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮೋದಿ, ವಿಪಕ್ಷಗಳ ‘ಲವ್ ಡಿಕ್ಷನರಿ’(ಪ್ರೀತಿಯ ನಿಘಂಟು)ಯಲ್ಲಿ ಕೇವಲ ದ್ವೇಷವಷ್ಟೇ ತುಂಬಿದೆ ಎಂದು ಹರಿಹಾಯ್ದಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಮೇಲೆ ವಿಪಕ್ಷಗಳು ಯಾವ ಸಂದರ್ಭದಲ್ಲಿ ಎಂತಹ ಪದ ಬಳಕೆ ಮಾಡಿವೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪ್ರಬುದ್ಧ ರಾಜಕಾರಣದ ಕುರಿತು ಮಾತನಾಡುವ ವಿಪಕ್ಷಗಳು, ನನ್ನ ಕುರಿತು ಆಡಿರುವ ಕೀಳು ಪದಗಳಿಗೂ ಜವಾಬ್ದಾರರು ಎಂದು ಮೋದಿ ಹೇಳಿದರು.

ವಿಪಕ್ಷಗಳು ನನ್ನನ್ನು ಅತ್ಯಂತ ಮೂರ್ಖ ಪಿಎಂ ಎಂದು ಕರೆದವು, ಸೈನಿಕರ ರಕ್ತದ ವ್ಯಾಪಾರಿ ಎಂದವು, ಹಿಟ್ಲರ್, ಮುಸುಲೋನಿ, ಗಡಾಫಿ ಹೀಗೆ ಏನೆಲ್ಲಾ ಕೀಳು ಭಾಷೆ ಬಳಸಿ ನಿಂದಿಸಬೇಕೋ ಅವೆಲ್ಲಾ ಬಳಸಿವೆ ಎಂದು ಮೋದಿ ಖೇದ ವ್ಯಕ್ತಪಡಿಸಿದರು.

"

ಇನ್ನು ಪ್ರಧಾನಿ ಮೋದಿ ವಿಪಕ್ಷಗಳ ದ್ವೇಷದ ಕುರಿತು ಮಾತನಾಡಿರುವ ಮಧ್ಯೆಯೇ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೋದಿ ಅವರನ್ನು ದುಶ್ಯಾಸನನಿಗೆ ಹೋಲಿಕೆ ಮಾಡಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!