ಕೈ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆಸ್ತಿ ಘೋಷಣೆ: ವಾರ್ಷಿಕ ಆದಾಯವೇ ಇಷ್ಟು!

By Web DeskFirst Published Apr 21, 2019, 1:29 PM IST
Highlights

ಉತ್ತರ ಪ್ರದೇಶ ಕಾಂಗ್ರೆಸ್ ನ ಯುವ ನಾಯಕ, ಗ್ವಾಲಿಯರ್ ರಾಜವಂಶದ ಸದಸ್ಯ ಹಾಗೂ ಐದನೇ ಬಾರಿ ಗುನಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪತರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ನಾಮಪತ್ರ ಸಲ್ಲಿಸಿದ್ದಾಋಎ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಅರಮನೆ, ಕೋಟೆಗಳ ಒಡೆಯ ಸಿಂಧಿಯಾ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ವಿದ್ಯಾರ್ಹತೆ ಏನು? ವಾರ್ಷಿಕ ಆದಾಯವೆಷ್ಟು? ಇಲ್ಲಿದೆ ವಿವರ

ಶನಿವಾರದಂದು ಗುನಾ-ಶಿವಪುರಿ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಜ್ಯೋತಿರಾಧಿತ್ಯ ಸಿಂಧಿಯಾ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಆಸ್ತಿ ಪ್ರಮಾಣವನ್ನೂ ಬಹಿರಂಗಪಡಿಸಿದ್ದಾರೆ. ಇವೆಲ್ಲದರೊಂದಿಗೆ ಇವರ ವಿರುದ್ಧ ಯಾವುದೇ ಪ್ರಕರಣಗಲೂ ದಾಖಲಾಗಿಲ್ಲ.

ಗ್ವಾಲಿಯರ್ ನ ಸಿಂಧಿಯಾ ರಾಜವಂಶಸ್ಥ ಹಾಗೂ ಗುನಾ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಜ್ಯೋತಿರಾಧಿತ್ಯ ಸಿಂಧಿಯಾ ಬಳಿ ಕೋಟಿ ಬೆಲೆಬಾಳುವ ಪೂರ್ವಿಕರಿಂದ ಆಸ್ತಿ ಇದೆ. ಇದರಲ್ಲಿ ಅರಮನೆ, ಕೋಟೆಗಳು ಸೇರಿದಂತೆ, ವ್ಯಕ್ತಿಗತ 3 ಕೋಟಿ ರೂಪಾಯಿ ಮೌಲ್ಯದ FDR ಕೂಡಾ ಇದೆ. ಇಷ್ಟೇ ಅಲ್ಲದೇ ಪೂರ್ವಿಕರಿಂದ ಬಂದ ಒಂದು BMW ಕಾರು ಕೂಡಾ ಇದೆ. 

ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

ಪೂರ್ವಿಕರಿಂದ ಪಡೆದಿರುವ ಆಸ್ತಿಯಲ್ಲಿ 40 ಎಕರೆ ವಿಸ್ತೀರ್ಣದಲ್ಲಿರುವ ಗ್ವಾಲಿಯರ್ ನ ಜಯ್ ವಿಲಾಸ್ ಪ್ಯಾಲೇಸ್ ಕೂಡಾ ಸೇರಿದೆ. ಮಹಾರಾಷ್ಟ್ರದಲ್ಲಿ ಶ್ರೀಗೋಂಡಾದಲ್ಲಿ 19 ಎಕರೆ ಹಾಗೂ ಲಿಂಬನ್ ಎಂಬ ಹಳ್ಳಿಯಲ್ಲಿ 53 ಎಕರೆ ಜಮೀನು ಇದೆ. ಇದನಗ್ನು ಹೊರತುಪಡಿಸಿ ರಾಣಿ ಮಹಲ್, ಹಿರ್ನವನ್ ಮಹಲ್, ರ್ಯಾಕೆಟ್ ಕೋರ್ಟ್, ಶಾಂತಿನಿಕೇತನ, ವಿಜಯ್ ಭವನ್, ಪಿಕ್ನಿಕ್ ಸ್ಪಾಟ್, ಬೂಟ್ ಬಂಗ್ಲೆ, ಇಲೆಕ್ಟ್ರಿಕ್ ಪವರ್ ಹೌಡ್ ಹಾಗೂ ವಸತಿ ನಿಲಯಗಳಿವೆ. ಈ ಎಲ್ಲಾ ಸಂಪತ್ತಿನ ಮಾರುಕಟ್ಟೆ ದರ 2,97,00,48,500 ಎಂದು ಅಂದಾಜಿಸಲಾಗಿದೆ. 

ಐದನೇ ಬಾರಿ ಗುಣಾ ಸಂಸದೀಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಅಫಿಡವಿಟ್ ನಲ್ಲಿ ತಮ್ಮ ಬಳಿ 301,87,000 ರೂಪಾಯಿಗೂ ಹೆಚ್ಚು ಮೌಲ್ಯದ FDR ಹಾಗೂ 3,33,39,827 ಚರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಿಂಧಿಯಾ ವಾರ್ಷಿಕ ಆದಾಯ 151,56,720 ಆಗಿದೆ. ಅವರ ಪತ್ನಿ ಪ್ರಿಯದರ್ಶಿನಿ ವಾರ್ಷಿಕ ಆದಾಯ 250,400 ಆಗಿದೆ. ಸಿಂಧಿಯಾ ಮುಂಬೈನಲ್ಲಿ ಎರಡು ನಿವಾಸಗಳನ್ನು ಹೊಂದಿದ್ದು, ಇವುಗಳ ಮಾರುಕಟ್ಟೆ ದರ 31,97,70,000 ಆಗಿದೆ. ಅಫಿಡವಿಟ್ ಅನ್ವಯ ಪೂರ್ವಿಕರ ಬಂದ ಆಸ್ತಿಯಲ್ಲಿ ಜೀವರಾಮ್ ಎಂ. ಸಿಂಧಿಯಾರ ಸಂಪತ್ತಿನಿಂದ 467,410 ರೂಪಾಯಿ ಆದಾಯ ಬರುತ್ತದೆ. 

ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೇ ಈ ಪರಿ ಅಭಿನಂದಿಸಿದ್ದು ಯಾರನ್ನು?

ಸಿಂಧಿಯಾ ತಮ್ಮ ಬಳಿ ಒಟ್ಟು 2,066 ಗ್ರಾಂ ಚಿನ್ನವಿದೆ ಎಂದು ಘೋಷಿಸಿದ್ದಾರೆ. ಗೋಲ್ಡ್ ಕಪ್ ಮೊದಲಾದ ಚಿನ್ನದ ಸಂಪತ್ತಿನ ಮೌಲ್ಯ 8,68,53,219 ಆಗಿದೆ. ಇನ್ನು 1960 ಮಾಡೆಲ್ ನ ಪೂರ್ವಿಕರಿಂದ ಸಿಕ್ಕ BMW ಕಾರು ಕೂಡಾ ಸಿಂಧಿಯಾರ ಬಳಿ ಇದೆ. 

ವಿದ್ಯಾರ್ಹತೆ 

ಸಿಂಧಿಯಾ ಡೆಹ್ರಾಡೂನ್ ಮೂರು ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ ಅಮೆರಿಕಾದಿಂದ ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಿಂಧಿಯಾರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!