‘ಕಮಲ’ಕ್ಕೆ ಮತ ಕೊಡಿ ಎಂದ ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ!

By Web DeskFirst Published Apr 2, 2019, 8:33 AM IST
Highlights

ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ| ‘ಕಮಲ’ಕ್ಕೆ ಮತ ಕೊಡಿ ಎಂದ ಮೈಸೂರು ಸಿ. ಎಚ್. ವಿಜಯಶಂಕರ್

ಸಿದ್ದಾಪುರ[ಏ.02]: ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ ಅವರು ಬಾಯಿತಪ್ಪಿ ‘ನನ್ನ ಚಿಹ್ನೆಯಾದ ಕಮಲಕ್ಕೆ ಮತ ನೀಡಿ’ ಎಂದು ಕೇಳಿದ ಪ್ರಸಂಗ ನಡೆದಿದೆ.

ವಿಜಯಶಂಕರ್‌ ಸೋಮವಾರ ಸಿದ್ದಾಪುರ ಪಟ್ಟಣದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲ ಮತದಾರರು ನನ್ನ ಚಿಹ್ನೆಯಾದ ಕಮಲಕ್ಕೆ ಮತ ನೀಡಿ ಎಂದು ಹೇಳುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಬೆಚ್ಚಿಬಿದ್ದು ಗೊಂದಲಕ್ಕಿಡಾದರು. ನಂತರ ಎಚ್ಚೆತ್ತುಕೊಂಡ ಅವರು, ನನ್ನ ಬಾಯ್ತಪ್ಪಿನಿಂದ ಹಾಗಾಗಿದೆ. ನನ್ನ ಹಸ್ತ ಚಿಹ್ನೆಗೆ ಮತ ನೀಡಿ ಎಂದು ಸರಿಪಡಿಸಿಕೊಂಡರು.

ವಿಜಯಶಂಕರ್‌ ಅವರು ಈ ಹಿಂದೆ ಬಿಜೆಪಿಯಲ್ಲಿದ್ದು, ಆ ಪಕ್ಷ ತೊರೆದು ಈಗ ಮೈತ್ರಿ ಅಭ್ಯರ್ಥಿ ಆಗಿ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿದ್ದರೂ ಅವರು ಸಂಪೂರ್ಣವಾಗಿ ಬಿಜೆಪಿಯನ್ನು ತೊರೆದಿಲ್ಲ ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಆಡಿಕೊಳ್ಳುತ್ತಿರುವುದು ಕಂಡುಬಂತು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!