ಗೆಲುವಿನ ವಿಶ್ವಾಸದಲ್ಲಿದ್ದ ಕೈ ನಾಯಕರಿಗೆ ಶಾಕ್ ಕೊಟ್ಟ ಆರಂಭಿಕ ಟ್ರೆಂಡ್!

By Web DeskFirst Published May 23, 2019, 10:54 AM IST
Highlights

ಕೈ ನಾಯಕರಿಗೆ ಶಾಕ್ ಕೊಟ್ಟ ಆರಂಭಿಕ ಟ್ರೆಂಡ್| ಅಧ್ಯಕ್ಷ ರಾಹುಲ್ ಸೇರಿದಂತೆ ಘಟಾನುಘಟಿ ನಾಯಕರಿಗೆ ಹಿನ್ನಡೆ| ಗೆದ್ದೇಗ್ಲೆಲುತ್ತೇವೆ ಎಂಬ ಭರವಸೆ ಇಟ್ಟುಕೊಂಡವರಿಗೆ ಆಘಾತ

ನವದೆಹಲಿ[ಮೇ.23]: ಲೋಕಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ಹೊರ ಬಿದ್ದಿದೆ. ಇದರ ಅನ್ವಯ 336 ಕ್ಷೇತ್ರಗಳಲ್ಲಿ NDA ಮುನ್ನಡೆ ಸಾಧಿಸಿದ್ದರೆ, 60 ಕ್ಷೇತ್ರಗಳಲ್ಲಿ UPA ಮುನ್ನಡೆಯಲ್ಲಿದೆ. ಆರಂಭಿಕ ಟ್ರೆಂಡ್ ಕಾಂಗ್ರೆಸ್ ನಾಯಕರಿಗೆ ಮಾತ್ರ ಖುಷಿ ತಂದುಕೊಟ್ಟಿಲ್ಲ. ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕೈ ಪಕ್ಷದ ಘಟಾನುಘಟಿ ನಾಯಕರಿಗೆ ಹಿನ್ನಡೆಯಲ್ಲಿದ್ದಾರೆ.

ಯಾವೆಲ್ಲಾ ನಾಯಕರು ಹಿನ್ನಡೆಯಲ್ಲಿದ್ದಾರೆ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುನ್ನಡೆ ಸಾಧಿಸಿದ್ದರೂ, ತವರು ಕ್ಷೇತ್ರ ಅಮೇಠಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ ಸಾಧಿಸಿದ್ದಾರೆ. ಇದು ರಾಹುಲ್ ಗಾಂಧಿಗೆ ಕೊಂಚ ತಲೆನೋವು ನೀಡಿದೆ. ಇನ್ನುಳಿದಂತೆ ಗೆಲುವಿನ ವಿಶ್ವಾಸದಲ್ಲಿದ್ದ ಮುಂಬೈ ದಕ್ಷಿಣದ ಅಭ್ಯರ್ಥಿ ಮಿಲಿಂದ್ ದೇವ್ಡಾ, ತಿರುವನಂತಪುರಂನಿಂದ ಶಶಿ ತರೂರ್, ದೌರಾರಾನಿಂದ ಜಿತಿನ್ ಪ್ರಸಾದ್, ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ ಆರಂಭಿಕ ಟ್ರೆಂಡ್ ನಲ್ಲಿ ಹಿಂದುಳಿದಿದ್ದಾರೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

ಮುನ್ನಡೆ ಟ್ರೆಂಡ್ಸ್: ಒಂದೇ ಗಂಟೆಯಲ್ಲಿ ಬಹುಮತ ಗೆರೆ ದಾಟಿದ NDA!

BJP ಕೇಂದ್ರ ಕಚೇರಿಗೆ ಇಂದು ಸಂಜೆ 20000 ಕಾರ್ಯಕರ್ತರು!

click me!