ಮೋದಿ ತವರಲ್ಲಿ ಗುಡ್ಡ ಅಗೆದು ಇಲಿ ಹಿಡಿದ ಕಾಂಗ್ರೆಸ್: ಏನಾಗಿದೆ ನೋಡಿ!

Published : May 23, 2019, 10:44 AM ISTUpdated : May 23, 2019, 10:57 AM IST
ಮೋದಿ ತವರಲ್ಲಿ ಗುಡ್ಡ ಅಗೆದು ಇಲಿ ಹಿಡಿದ ಕಾಂಗ್ರೆಸ್: ಏನಾಗಿದೆ ನೋಡಿ!

ಸಾರಾಂಶ

ಮೋದಿ ತವರು ರಾಜ್ಯದಲ್ಲಿ ಮ್ಯಾಜಿಕ್ ಮಾಡಲು ಹೋಗಿ ಪೇಚಿಗೆ ಸಿಲಕಿದ ಕಾಂಗ್ರೆಸ್| 26 ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ| ಗುಜರಾತ್‌ನಲ್ಲಿ ಬಿಜೆಪಿ ಪ್ರಭಾವ ಕುಗ್ಗಿಸುವಲ್ಲಿ ಕಾಂಗ್ರೆಸ್ ವಿಫಲ| ಕಳೆದ ಬಾರಿ ಎಲ್ಲಾ 26 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ|

ಅಹಮದಾಬಾದ್(ಮೇ.23): ಈ ಬಾರಿ ಶತಾಯಗತಾಯ ಗುಜರಾತ್‌ನಲ್ಲಿ ಬಿಜೆಪಿ ಪ್ರಭಾವ ಕುಗ್ಗಿಸಿ, ಮೋದಿಗೆ ಶಾಕ್ ನೀಡಲು ಸಲು ಸಿದ್ಧತೆ ನಡೆಸಿದ್ದ ಕಾಂಗ್ರೆಸ್‌ಗೆ ಈ ಬಾರಿಯೂ ತೀವ್ರ ನಿರಾಸೆ ಎದುರಾಗಿದೆ.

ಕಳೆದ(2014) ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 26 ಸ್ಥಾನ ಗಳಿಸಿದ್ದ ಬಿಜೆಪಿ, ಈ ಬಾರಿಯೂ ಅದನ್ನೇ ಪುನರಾವರ್ತಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಾರಿ ಒಂದೇ ಒಂದು ಸ್ಥಾನ ಗಳಿಸಲು ಶಕ್ತವಾಗದ ಕಾಂಗ್ರೆಸ್ ಈ ಬಾರಿ ಕೇವಲ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು, ಒಂದು ಸ್ಥಾನ ಗೆದ್ದರೆ ಅದೇ ಹೆಚ್ಚು ಎಂದು ಅಂದಾಜಿಸಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಮೋಧಿ ತವರು ರಾಜ್ಯದಲ್ಲಿ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ ಎಂಬುದು ಖಚಿತ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!