ತಮ್ಮ ಸುರೇಶ್ ಕ್ಷೇತ್ರದಲ್ಲಿಯೇ ಟ್ರಬಲ್ ಶೂಟರ್ ಡಿಕೆಶಿಗೆ ದೋಸ್ತಿ  ಟ್ರಬಲ್!

Published : Mar 20, 2019, 11:10 PM ISTUpdated : Mar 20, 2019, 11:12 PM IST
ತಮ್ಮ ಸುರೇಶ್ ಕ್ಷೇತ್ರದಲ್ಲಿಯೇ ಟ್ರಬಲ್ ಶೂಟರ್ ಡಿಕೆಶಿಗೆ ದೋಸ್ತಿ  ಟ್ರಬಲ್!

ಸಾರಾಂಶ

ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಲು ವಿವಿಧ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದೆ. ಆದರೆ ಇದೀಗ ತಮ್ಮ ಸುರೇಶ್ ಕ್ಷೇತ್ರದಲ್ಲಿ ಎದ್ದಿರುವ ಸಮಸ್ಯೆ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗಿದೆ.

ತುಮಕೂರ[ಮಾ. 20]  ಸಹೋದರನ ಡಿಕೆ ಸುರೇಶ್ ಗೆಲುವಿಗೆ ಡಿಕೆ ಶಿವಕುಮಾರ್ ಕಸರತ್ತು ಆರಂಭಿಸಿದ್ದಾರೆ. ಜೆಡಿಎಸ್ ಮಾಜಿ ಶಾಸಕ ಡಿ. ನಾಗರಾಜಯ್ಯನನ್ನು ಭೇಟಿ ಮಾಡಿ ಡಿಕೆಶಿ ಮಾತುಕತೆ ನಡೆಸಿದ್ದಾರೆ. 

ಹಾಲಿ ಕಾಂಗ್ರೆಸ್  ಶಾಸಕ ಡಾ.ರಂಗನಾಥ್   ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದೇ ಕಾರಣದಿಂದ ಸಂಸದ ಡಿ.ಕೆ ಸುರೇಶ್ ಸ್ಪರ್ಧೆಗೆ ವಿರೋಧ ವ್ಯಕ್ತ ಪಡಿಸಿದ್ದ ಡಿ.ನಾಗರಾಜಯ್ಯ ತಾವೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಸ್ವತಂತ್ರ  ಸ್ಪರ್ಧಿಸುತ್ತೇನೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದಿದ್ದು ಡಿಕೆಶಿಯವರ ಭೇಟಿಗೆ ಕಾರಣ ಎನ್ನಲಾಗಿದೆ.

ಯಾರಾಗ್ತಾರೆ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ? ದೆಹಲಿ ಪಟ್ಟಿಯಲ್ಲಿ ಹೊಸ ಹೆಸರು

ದೋಸ್ತಿಗಳ ಹೊಂದಾಣಿಕೆಯ ಸ್ಪರ್ಧೆಗೆ ಕುಣಿಗಲ್ ನಲ್ಲಿ ವಿರೋಧ ವ್ಯಕ್ತವಾಗಿದ್ದಕ್ಕೆ ಡಿಕೆಶಿ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗೆ ಬೆಂಬಲ ನೀಡಲು ಡಿ. ನಾಗರಾಜಯ್ಯ ಹಿಂದೇಟು ಹಾಕಿದ್ದಾರೆ. ದೇವೇಗೌಡರ ಕುಟುಂಬದೊಂದಿಗೆ ಆಪ್ತವಾಗಿರುವ ಡಿ. ನಾಗರಾಜಯ್ಯ ಅವರನ್ನು ಡಿಕೆಶಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!