ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಒಟ್ಟು ಆಸ್ತಿ ವಿವರ..!

Published : Mar 20, 2019, 10:09 PM ISTUpdated : Mar 20, 2019, 10:14 PM IST
ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಒಟ್ಟು ಆಸ್ತಿ ವಿವರ..!

ಸಾರಾಂಶ

ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಇಂದು ಭಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು. ಆದ್ರೆ ನಾಮಪತ್ರದಲ್ಲಿ ಸುಮಲತಾ ಅಂಬರೀಶ್ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟು? ವಿವರ ಈ ಕೆಳಗಿನಂತಿದೆ.

ಮಂಡ್ಯ, (ಮಾ.20): ಮಂಡ್ಯ ಲೋಕಸಭಾ ಚುನಾವಣಾ ಕಣ ರಣರಂಗವಾಗಿದ್ದು, ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ವಿರುದ್ಧ ಸುಮಲತಾ ಅಂಬರೀಶ್​​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ. 

ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ  ಇಂದು (ಬುಧವಾರ] ಡಿಸಿ ಕಚೇರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಜನಬಲ, ತಾರಾಬಲದೊಂದಿಗೆ ಸುಮಲತಾ ನಾಮಪತ್ರ ಸಲ್ಲಿಕೆ

ನಾಮಪತ್ರ ಜೊತೆಗೆ ತಮ್ಮ ಆಸ್ತಿ ವಿವರವನ್ನು ಅವರು ಸಲ್ಲಿಸಿದ್ದು,  ಸುಮಲತಾ ಒಟ್ಟು ಆಸ್ತಿ ಮೌಲ್ಯ - 23,41,53,000 ರೂ. [23 ಕೊಟಿ 41 ಲಕ್ಷದ 53 ಸಾವಿರ ರೂ.] ಇದೆ ಎಂದು ಘೋಷಿಸಿದ್ದಾರೆ.

ಈ ಪೈಕಿ 5 ಕೆ.ಜಿ ಚಿನ್ನ, 31 ಕೆಜಿ ಬೆಳ್ಳಿ ಹೊಂದಿರುವ ಸುಮಲತಾ ಅಂಬರೀಶ್, ಚರಾಸ್ತಿ 5,68,62,000 ರೂ.(5 ಕೋಟಿ 68 ಲಕ್ಷದ 62 ಸಾವಿರ ರೂ.) ಮತ್ತು 17,72,91,000 ರೂ.(17 ಕೋಟಿ 72 ಲಕ್ಷದ 91)  ಸ್ಥಿರಾಸ್ತಿ ಇದೆ ಎಂದು ನಾಮಪತ್ರದಲ್ಲಿ ಆಸ್ತಿ ವಿವರ ಉಲ್ಲೇಖಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!