ಯಾರಾಗ್ತಾರೆ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ? ದೆಹಲಿ ಪಟ್ಟಿಯಲ್ಲಿ ಹೊಸ ಹೆಸರು

Published : Mar 20, 2019, 10:14 PM IST
ಯಾರಾಗ್ತಾರೆ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ? ದೆಹಲಿ ಪಟ್ಟಿಯಲ್ಲಿ ಹೊಸ ಹೆಸರು

ಸಾರಾಂಶ

ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ದೆಹಲಿಯಲ್ಲಿ ಅಂತಿಮ ಮುದ್ರೆ ಸಿಗಲಿದ್ದು ಆಕಾಂಕ್ಷಿಗಳನ್ನು ಹೈಕಮಾಂಡ್ ತನ್ನ ಬಳಿ ಕರೆಸಿಕೊಂಡಿದೆ.

ಬೆಂಗಳೂರು[ಮಾ. 20]  ದಿಢೀರ್ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ನ ದಕ್ಷಿಣ ಕನ್ನಡ ಟಿಕೆಟ್ ಆಕಾಂಕ್ಷಿಗಳನ್ನು ದೆಹಲಿಗೆ ಹೈಕಮಾಂಡ್ ಕರೆಸಿಕೊಂಡಿದೆ. ಗುರುವಾರ ದೆಹಲಿಯಲ್ಲಿ ಇವರನ್ನೊಳಗೊಂಡ ಮಹತ್ವದ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.

ಆಕಾಂಕ್ಷಿಗಳಾದ ರಮಾನಾಥ ರೈ, ರಾಜೇಂದ್ರ ಕುಮಾರ್,  ಐವನ್ ಡಿಸೋಜ, ವಿನಯ ಕುಮಾರ್ ಸೊರಕೆ, ಮಿಥುನ್ ರೈ, ಕಣಚೂರು ಮೋನು, ಮೊಹಿಯುದ್ದೀನ್ ಬಾವ, ಮಮತಾ ಗಟ್ಟಿ, ಶಕುಂತಳಾ ಶೆಟ್ಟಿ ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಈ ಬುಲಾವ್ ಬಂದಿದ್ದು ದೆಹಲಿಗೆ ದೌಡಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಅಭ್ಯರ್ಥಿ ಆಯ್ಕೆಯ ಸೆಂಟ್ರಲ್ ಎಲೆಕ್ಷನ್ ಸಮಿತಿ ಸಭೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾ.22ಕ್ಕೆ ನಡೆಯಲಿದೆ. ಅದಕ್ಕಿಂತ ಮುಂಚಿತವಾಗಿ ಆಕಾಂಕ್ಷಿಗಳನ್ನು ಕರೆಸಿರುವುದು ಕುತೂಹಲ ಕೆರಳಿಸಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!